Wednesday, January 22, 2025

ಪ್ಯೂರ್ ಸೋಲ್ ರಮ್ಯಾ ಬಿಚ್ಚಿಟ್ರು ಆ ಕರಾಳ ನೋವು

ಸ್ಯಾಂಡಲ್​ವುಡ್​ ಕ್ವೀನ್​, ಮೋಹಕ ತಾರೆ, ಮಾಜಿ ಸಂಸದೆ ರಮ್ಯಾ ಕೊನೆಗೂ ಮೌನ ಮುರಿದಿದ್ದಾರೆ. ಚಿತ್ರಜಗತ್ತಿನ ಕರಾಳ ಸತ್ಯಗಳನ್ನು ಹೇಳೋ ಮೂಲಕ ಇಂಡಸ್ಟ್ರಿ​​ ವಿರುದ್ಧ ಕಿಡಿ ಕಾರಿದ್ದಾರೆ. ಕಡ್ಡಿ ಮುರಿದಂತೆ ನೇರವಾಗಿ ಮಾತನಾಡೋಕೆ ಅಸಲಿ ಕಾರಣವೇನು..?

  • ಪ್ಯೂರ್ ಸೋಲ್ ರಮ್ಯಾ ಬಿಚ್ಚಿಟ್ರು ಆ ಕರಾಳ ನೋವು
  • ಸ್ಯಾಂಡಲ್​​ವುಡ್​​ ವಿರುದ್ಧ ಕಿಡಿಕಾರಿದ ಮಾಜಿ ಸಂಸದೆ
  • ಇಂಡಸ್ಟ್ರಿ ಮೇಲೆ ಉರಿದುರಿದು ಬಿದ್ದ ಮೋಹಕ ತಾರೆ..!
  • ಸ್ಲಿಮ್​ ಆಗೋಕೆ  ಸ್ಯಾಂಡಲ್​​ವುಡ್​​ ಕ್ವೀನ್​ ಹೋರಾಟ..!

ದಶಕಗಳ ಕಾಲ  ಕನ್ನಡ ಸಿನಿಲೋಕದಲ್ಲಿ ಅನಭಿಷಕ್ತ ರಾಣಿಯಾಗಿ ಮಿಂಚಿ, ಮರೆಯಾದ ಮೋಹಕ ತಾರೆ ರಮ್ಯಾ, ಸದಾ ಒಂದಿಲ್ಲೊಂದು ಸುದ್ದಿಯಲ್ಲಿರ್ತಾರೆ. ಸಿನಿಮಾ ತೊರೆದು ಪಾಲಿಟಿಕ್ಸ್​​ಗೆ ಎಂಟ್ರಿ ಕೊಟ್ಟಿದ್ದ ಪದ್ಮಾವತಿ, ಒಮ್ಮೆ ಸಂಸದೆಯಾದ್ರೂ, ಖಾದಿ ಕೊನೆವರೆಗೂ  ಕೈ ಹಿಡಿಯಲಿಲ್ಲ. ಹಾಗಂತ ರಮ್ಯಾ ಸೊಸೈಟಿಯಲ್ಲಿ ನಡೆಯೋ ಅನ್ಯಾಯಗಳನ್ನ ನೋಡ್ಕೊಂಡು ಕೈಕಟ್ಟಿ ಕೂರೋ ಜಾಯಮಾನದ ಹೆಣ್ಣಲ್ಲ. ಸಮಾಜದಲ್ಲಿ  ಅಸಮಾನತೆ, ಜಾತಿ ತಾರತಮ್ಯ, ಭ್ರಷ್ಠಚಾರ ಏನೇ ಇರಲಿ, ನಿಷ್ಠುರವಾದ್ರೂ ಪರವಾಗಿಲ್ಲ ಅಂತ ನೇರವಾಗಿಯೇ ವಿರೋಧಿಸೋದು ರಮ್ಯಾ ಸ್ಟೈಲ್​​.

ಸಕ್ಕರೆಯ ಗೊಂಬೆ, ಕನ್ನಡದ ಆಲ್​ ಟೈಮ್​ ಫೇವರಿಟ್ ನಟಿ, ಕನ್ನಡ ಚಿತ್ರರಂಗದ ಲಕ್ಕಿ ಚಾರ್ಮ್​​ ರಮ್ಯಾ, ತುಟಿ ಬಿಚ್ಚಿದ್ರೆ ಸಾಕು ಸ್ಯಾಂಡಲ್​ವುಡ್ ಗಲ್ಲಿಯಿಂದ ದಿಲ್ಲಿಯರೆಗೂ ಸುದ್ದಿಯಾಗುತ್ತೆ. ಪಡ್ಡೆ ಹೈಕಳ ಹೃದಯ ಕದ್ದ ಪೋರಿಗೆ ಇಂದಿಗೂ ಸಿಕ್ಕಾಪಟ್ಟೆ ಡಿಮ್ಯಾಂಡ್​​ ಇದೆ. ಆದ್ರೆ ರಮ್ಯಾ, ಕಮೆಂಟ್​​ ಮಾಡ್ತಾ ಟ್ರೋಲ್​ ಆಗೋ ಜೊತೆಗೆ ಸಿನಿಮಾ, ರಾಜಕೀಯ ಎರಡು ವಿಚಾರದಲ್ಲೂ ಚರ್ಚೆಗೆ ಗ್ರಾಸವಾಗ್ತಾರೆ. ಇದೀಗ ಸ್ಯಾಂಡ್​​ಲ್​ವುಡ್​​ನಲ್ಲಿ ನಟಿಯರ ತಾರತಮ್ಯದ ವಿರುದ್ಧ  ಕಿಡಿಕಾರಿರುವ ರಮ್ಯಾ  ಅನ್ಯಾಯದ ವಿರುದ್ಧ ಮತ್ತೆ ಸಡ್ಡು ಹೊಡೆದಿದ್ದಾರೆ.

ಎಲ್ರೂ ಸಮಾನ.. ನಟ, ನಟಿ ಮಧ್ಯೆ ತಾರತಮ್ಯವೇಕೆ..? :

ದೊಡ್ಡ ನಟಿಯಾಗೋ ಕನಸು ಹೊತ್ತ ಯುವನಟಿ, ಸ್ಲಿಮ್​​ ಆಗಿ ಕಾಣಲು ಫ್ಯಾಟ್​​ ಸರ್ಜರಿಯ ಮೊರೆ ಹೋಗಿ ಸಾವನ್ನಪ್ಪಿದ್ದು ನಿಮ್ಗೆಲ್ಲಾ ಗೊತ್ತೆ ಇದೆ. ಚಿತ್ರರಂಗದಲ್ಲಿ ನೆಲೆ ಕಾಣ್ಬೇಕು ಅಂದ್ರೆ ಏನೆಲ್ಲಾ ಫಜೀತಿ ಪಡ್ಬೇಕು ಅನ್ನೋದು ನಟಿ ಚೇತನಾರಾಜ್​​ ತೆಗೆದುಕೊಂಡ ತೀರ್ಮಾನದಿಂದ ಗೊತ್ತಾಗತ್ತೆ.  ಸ್ಯಾಂಡಲ್​​ವುಡ್​​ನಲ್ಲಿ ಇರೋ ಲಿಂಗತಾರತಮ್ಯದ ಬಗ್ಗೆ ಧೈರ್ಯವಾಗಿ ಮಾತಾನಾಡಿರೋ ರಮ್ಯಾ, ಆಕೆಯ ಮೇಲೆ ಸಹಾನುಭೂತಿ ತೋರಿಸಿ, ಗಾಂಧಿನಗರದ ನಗ್ನ ಸತ್ಯ ಬಿಚ್ಚಿಡೋ ಮೂಲಕ ರೆಬೆಲ್ ಕ್ವೀನ್ ಅನಿಸಿಕೊಂಡಿದ್ದಾರೆ ರಮ್ಯಾ.

ಸದಾ  ಏಕಾಂಗಿಯಾಗಿ  ಹೋರಾಡೋ ಗಟ್ಟಿಗಿತ್ತಿ. ಇಡೀ ಸಮಾಜವೇ ಎದುರಾಗಿ ನಿಂತ್ರೂ ಅವಳು ನಂಬಿರೋ ಆದರ್ಶಗಳನ್ನ ಮಾತ್ರ ಎಂದಿಗೂ ಬಿಟ್ಟು ಕೊಡಲಿಲ್ಲ. ಯಾರು ಏನೇ ಹೇಳಲಿ, ಎಷ್ಟೇ ಟ್ರೋಲ್​ ಮಾಡಲಿ, ಆಡಿದ ಮಾತುಗಳಿಂದ ಹಿಂದೆ ಸರಿದಿಲ್ಲ. ಎಂದಿಗೂ ಸೋಲೊಪ್ಪಿಕೊಂಡಿಲ್ಲ ರಮ್ಯಾ. ಯೆಸ್​​.. ಯಾಕೆ ಈ ಮಾತು ಹೇಳ್ತೀವಿ ಅಂದ್ರೆ, ರಮ್ಯಾ ಈಗ ಯುದ್ಧ ಸಾರಿರೋದು ತಾನು ನಟಿಯಾಗಿ ಬೆಳೆದು ಬಂದ ಸ್ಯಾಂಡಲ್​​ವುಡ್​​​ ವಿರುದ್ಧ. ಪುರುಷ ಪ್ರಧಾನ ಸಮಾಜದ ವಿರುದ್ಧ. ವ್ಯವಸ್ಥೆಯ ವಿರುದ್ಧ. ಕಣ್ಣಾರೆ ಕಂಡರೂ ಯಾರೂ ತುಟಿ ಬಿಚ್ಚದ ಲಿಂಗ ತಾರತಮ್ಯದ  ವಿರುದ್ಧ.

ರಮ್ಯಾ ಎಲ್ರಿಗೂ ಪರಿಚಯವಾಗಿದ್ದು ಇದೇ ಸಿನಿಮಾ ರಂಗದಿಂದ. ಸಿನಿಮಾ ಪ್ರಪಂಚದಲ್ಲಿ ಮಿಂಚಿದ ಮೇಲೆ ಪಾಲಿಟಿಕ್ಸ್​ಗೂ ಎಂಟ್ರಿ ಕೊಟ್ಟು ಮಂತ್ರಿ ಕೂಡ ಆದ್ರೂ. ನೇಮು ಫೇಮು ಎಲ್ಲವನ್ನ ತಂದುಕೊಟ್ಟಿದ್ದು ಸಿನಿಮಾ ಲೋಕವೇ ಆದ್ರೂ ಅಲ್ಲಿನ ಕಹಿ ಸತ್ಯಗಳ ಬಗ್ಗೆ ಮಾತಾಡೋಕೆ ರಮ್ಯಾ ಯಾವತ್ತೂ ಅಂಜಿಲ್ಲ, ಅಳುಕಿಲ್ಲ. ಇದೀಗ ಚೇತನಾ ರಾಜ್​​ ಸಾವಿನ ಕುರಿತು ಮಾತನಾಡಿರುವ ರಮ್ಯಾ ನಟಿಯರ ವಿರುದ್ಧ ಆಗ್ತಿರೋ ಅನ್ಯಾಯದ ವಿರುದ್ಧ ಧನಿ ಎತ್ತಿದ್ದಾರೆ.

ಒಬ್ಬ ಹೀರೋ ಬೇಕಾದ್ರೆ ಹೊಟ್ಟೆ ಬಿಟ್ಕೊಂಡು ಸಿನಿಮಾ ಮಾಡಬಹುದು. ಕೂದಲಿಲ್ಲವಾದ್ರೂ ವಿಗ್ ಹಾಕಿ ಸಿನಿಮಾ ಮಾಡ್ಬಹುದು. ವಯಸ್ಸೂ 60 ಅದ್ರೂ ನಟಿಸಿಬಹುದು. ಹೀರೋಗೆ ಯಾವುದೇ ಕಂಡೀಷನ್​ ಇರೋದಿಲ್ಲ. ಅವರ ಬ್ಯೂಟಿಯನ್ನ ಸಹ ಯಾರೂ ನೋಡೋದಿಲ್ಲ. ಆದ್ರೆ ಈ ಕಂಡಿಷನ್​​ ಎಲ್ಲವೂ ನಟಿಯರಿಗೇಕೆ ಅಂತಾ ಖಡಕ್​​ ಆಗಿ ರಮ್ಯಾ ಟ್ವೀಟ್​ ಮಾಡಿದ್ದಾರೆ. ಅಷ್ಟಕ್ಕೂ ಪರುಷ ಪ್ರಧಾನ ಸಮಾಜದಲ್ಲಿ ರಮ್ಯಾ ಆಡಿರೋ ಮಾತು 100ಕ್ಕೆ ನೂರು ಸತ್ಯ ಬಿಡಿ.

ರಮ್ಯಾ ಟ್ವೀಟ್​ ವಾರ್​ ಇಲ್ಲಿಗೆ ನಿಂತಿಲ್ಲ. ನಟಿಗೆ ಸ್ವಲ್ಪ ವಯಸ್ಸಾಗ್ತಿದ್ದಂತೆ ಅಜ್ಜಿ, ಚಿಕ್ಕಮ್ಮ , ಡುಮ್ಮಿ ಅಂತೆಲ್ಲಾ ಟ್ರೋಲ್​ ಮಾಡ್ತೀರಾ. ನಟನೆಗಿಂತ ಬ್ಯೂಟಿಯೇ ಇಂಪಾರ್ಟೆಂಟ್​​ ಆಗುತ್ತೆ ಅಲ್ವಾ..? ಹೀಗಂತ ಸ್ತ್ರೀ ವಿರೋಧಿ ಸಮಾಜವನ್ನು ನೇರವಾಗಿ ಪ್ರಶ್ನೆ ಮಾಡಿದ್ದಾರೆ ಸ್ಯಾಂಡಲ್​ವುಡ್ ಕ್ವೀನ್. ರಮ್ಯಾ ನೇರ ನುಡಿಗೆ ಎಲ್ಲಾ ಕಡೆಯಿಂದ ಮೆಚ್ಚುಗೆಯ ಸುರಿಮಳೆಯಾಗ್ತಿದೆ. ಈಗ್ಲಾದ್ರೂ ಹೆಣ್ಣಿಗೆ ಚಿತ್ರರಂಗದಲ್ಲಿ ಆಗ್ತಿರೋ ಅನ್ಯಾಯ, ಅಸಮಾನತೆ ನಿಲ್ಲಲಿ ಅಂತ ರಮ್ಯಾ ಫ್ಯಾನ್ಸ್​ಆಕೆಯ ಬೆನ್ನಿಗೆ ನಿಂತಿದ್ದಾರೆ.

ಯಾವುದೇ ಫೀಲ್ಡ್​ ಇರಲಿ, ಅಲ್ಲಿ ಮಹಿಳೆಯರು , ಪುರುಷರು ಒಟ್ಟಾಗಿ ಸಮಾನತೆಯಿಂದ ಕೆಲಸ ಮಾಡೋ ಅಗತ್ಯ ಇದೆ. ವೇತನದ ವಿಚಾರದಲ್ಲೂ ಇದು ಬದಲಾಗಬೇಕಿದೆ. ಈ ಎಲ್ಲಾ ರೂಲ್ಸ್​ಗಳನ್ನು ಬದಲಾಯಿಸೋ ಕಾಲ ಬಂದಿದೆ. ನಾವೆಲ್ಲಾ ಎದ್ದು ನಿಲ್ಬೇಕು. ಈ ಅನ್ಯಾಯವನ್ನು ಮಹಿಳೆಯರು ಅರ್ಥ ಮಾಡಿಕೊಳ್ಬೇಕು ಎಂದು ನಟಿಯರನ್ನ ಸಬಲೀಕರಿಸೋ ನಿಟ್ಟಿನಲ್ಲಿ ಮುಕ್ತವಾಗಿ ಮನದಾಳವನ್ನ ಹೊರಹಾಕಿದ್ದಾರೆ.

ಅಂಬಿ ಅಂತಿಮ ದರ್ಶನಕ್ಕೆ ಬಾರದ ಹಿಂದಿನ ಅಸಲಿ ಸತ್ಯ :

ರಮ್ಯಾ ಸಿನಿಮಾಗಳಲ್ಲಿ ಆ್ಯಕ್ಟ್​ ಮಾಡ್ತಾರೆ ಅಂದ್ರೆ ಇಂದಿಗೂ ಅವಕಾಶಗಳಿಗೆ ಕೊರತೆ ಏನಿಲ್ಲ. ಆದ್ರೂ ರಮ್ಯಾ ಸ್ಲಿಮ್​ ಆಗೋಕೆ ಇಂದಿಗೂ ಎಫರ್ಟ್​ ಹಾಕ್ತಿದ್ದಾರಂತೆ. ಸಿನಿಮಾ ರಂಗದಿಂದ ದೂರ ಉಳಿದ್ರೂ ಕೂಡ ಇಂದಿಗೂ ಅದೇ ಚಾರ್ಮ್​​ ಉಳಿಸಿಕೊಂಡಿರೋ ರಮ್ಯಾ, ಕ್ರೇಜ್​ಗೆ ಕೇರ್ ಆಫ್ ಅಡ್ರೆಸ್​​. ಊರಿಗೊಬ್ಳೇ ಪದ್ಮಾವತಿ ಅನ್ನೋ ಹಾಗೆ ರಮ್ಯಾಗೆ ರಮ್ಯಾನೇ ಸಾಟಿ. ಆದ್ರೂ ಸಹ ರಮ್ಯಾ ಕಂಬ್ಯಾಕ್ ಮಾಡೋಕೆ ಅಂತ ಸ್ಲಿಮ್ ಆಗೋಕೆ ಹೋರಾಟ ಮಾಡ್ತಿದ್ದಾರಂತೆ.

2018 ರಲ್ಲಿ ತಮ್ಮ  ಕಾಲಿನಲ್ಲಿದ್ದ ಗೆಡ್ಡೆ ತೆಗೆಸಲು ಸರ್ಜರಿ ಮಾಡಿಸಿದ್ರಂತೆ. ಅದಾದ ನಂತ್ರ ರಮ್ಯಾ ಸಖತ್​ ಫ್ಯಾಟ್​​ ಆಗ್ಬಿಟ್ರು. ಈಗ್ಲೂ ತೂಕ ಇಳಿಸೋಕೆ ಹೋರಾಡ್ತಾ ಇದೀನಿ ಅನ್ನೋದನ್ನ ಮುಕ್ತವಾಗಿ ಹೇಳಿಕೊಂಡಿದ್ದಾರೆ. ಇನ್ನು ಅಂಬಿ ಅಗಲಿದಾಗ ರಮ್ಯಾರನ್ನ ರಾಜಕಾರಣಕ್ಕೆ ತಂದ ಅವ್ರ ರಾಜಕೀಯ ಗುರುವಿನ ಅಂತಿಮ ದರ್ಶನಕ್ಕೂ ಬಾರದ ಈಕೆಗೆ ಎಲ್ರೂ ಹಿಡಿ ಶಾಪ ಹಾಕಿದ್ರು. ಟ್ರೋಲ್ ಮಾಡಿದ್ರು. ಎಲ್ಲವನ್ನೂ ನೋಡಿ, ಆ ನೋವನ್ನ ತನ್ನಲ್ಲೇ ಹುದುಗಿಸಿಟ್ಟಿದ್ರು. ಮೌನವೇ ಎಲ್ಲಕ್ಕೂ ಉತ್ತರ ಆಗಿತ್ತು. ಆದ್ರೆ ಅಂಬಿ ಅಂತಿಮ ದರ್ಶನ ಅಥ್ವಾ ಅಂತ್ಯಕ್ರಿಯೆಗೆ ರಮ್ಯಾ ಯಾಕೆ ಬಂದಿಲ್ಲ ಅನ್ನೋದಕ್ಕೆ ಈಗ ಎಲ್ರಿಗೂ ಸ್ಪಷ್ಟನೆ ಸಿಕ್ಕಿದೆ.

ಬೀದಿ ನಾಯಿಯೊಂದು ಜೀವ ಬಿಟ್ಟರೆ, ಅದಕ್ಕಾಗಿ ಮಿಡಿದ ರಮ್ಯಾಗೆ ಅಂಬಿಗಾಗಿ ಬಾರದೇ ಹೋಗೋದುಂಟೇ. ಆಕೆಯ ಪರಿಸ್ಥಿತಿ ಸರಿ ಇರಲಿಲ್ಲ. ಆ ಟೈಮ್​ಗೆ ಜನರ ಮನಸ್ಥಿತಿಗಳೂ ಸರಿ ಇರಲಿಲ್ಲ. ಹಾಗಾಗಿ ಆಡಿಕೊಳ್ಳೋರ ಬಾಯಿಗೆ ಆಹಾರ ಆಗಿಬಿಟ್ಟಿದ್ರು ರಮ್ಯಾ ಮೇಡಂ.

ಇದೀಗ ತಮ್ಮ ಇಷ್ಟೂ ವರ್ಷದ ಅವಮಾನ, ಅಪಮಾನಗಳನ್ನ ಪರೋಕ್ಷವಾಗಿ ಹೊರಹಾಕಿದ್ದಾರೆ. ರಮ್ಯಾರ ಈ ಸಂಕ್ಷಿಪ್ತ ಟ್ವೀಟ್​ನ ನೋಡಿದ್ರೆ ಆಕೆಯದ್ದು ಎಷ್ಟು ನಿಷ್ಕಲ್ಮಶ ಮನಸ್ಸು ಅನ್ನೋದು ಗೊತ್ತಾಗುತ್ತೆ. ನಾವು ನಿಮ್ಮೊಂದಿಗೆ ರಮ್ಯಾ ಮೇಡಂ. ಅಸಮಾನತೆ ಅಳಿಸಲಿ. ಹೆಣ್ಣು ಸಬಲಗೊಳ್ಳಲಿ. ಇಂಡಸ್ಟ್ರಿಯ ಮನಸ್ಥಿತಿ ಬದಲಾಗಲಿ ಅನ್ನೋದೇ ನಮ್ಮ ಆಶಯ.

ರಾಕೇಶ್ ಆರುಂಡಿ, ಫಿಲ್ಮ್​ ಬ್ಯೂರೋ, ಪವರ್​ ಟಿವಿ

RELATED ARTICLES

Related Articles

TRENDING ARTICLES