Monday, December 23, 2024

ಮೆಟ್ರೋಕಾಸ್ಟ್ ನೆಟ್ವರ್ಕ್ ಇಂಡಿಯಾ ಲಿಮಿಟೆಡ್​​ನಲ್ಲಿ 27ನೇ ವರ್ಷದ ಸಂಭ್ರಮಾಚರಣೆ

ಬೆಳಗಾವಿ: ಮೆಟ್ರೋಕಾಸ್ಟ್​ ನೆಟ್ವರ್ಕ ಇಂಡಿಯಾ ಪ್ರೈವೇಟ್ ಲಿಮಿಟೆಡ್​ನ 1000 ಕೇಬಲ್ ಟಿವಿ ಚಾನೆಲ್, ಐಪಿಟಿವಿ, ಓಟಿಟಿ ಸೇವೆಗಳ ಲೋಕಾರ್ಪಣೆ ಹಾಗೂ ಸಂಸ್ಥೆಯ ಕೇಬಲ್ ಸರ್ವೀಸ್ ನ 27ನೇ ವರ್ಷದ ವಾರ್ಷಿಕೋತ್ಸವ ಪ್ರಯುಕ್ತ ನಗರದ ಖಾಸಗಿ ಹೋಟೆಲ್‌ನಲ್ಲಿ ನೆರವೇರಿತು.

ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಮೆಟ್ರೋಕಾಸ್ಟ ಇಂಡಿಯಾ ಪ್ರೈವೇಟ್ ಲಿಮಿಟೆಡ್ ನ ಎಂ.ಡಿ. ನಾಗೇಶ್ ಛಾಬ್ರಿಯಾ ಮೆಟ್ರೋಕಾಸ್ಟ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಬೆಳೆದುಬಂದ ಹಾದಿ ವಿವರಿಸಿದರು. ಈ ವೇಳೆ ಬೆಳಗಾವಿಯಲ್ಲಿ ಸಂಸ್ಥೆ ಬೆಳಯಲು ಕಾರಣೀಕರ್ತರಾದ ಎಲ್ಲರಿಗೂ ಕೂಡ ಧನ್ಯವಾದ ತಿಳಿಸಿ ಮೆಟ್ರೋಕಾಸ್ಟ್ ವೀಕ್ಷಕರಿಗೆ ನೀಡುತ್ತಿರುವ ಹೊಸ ಸೇವೆ ಕುರಿತಂತೆ ಮಾಹಿತಿ ನೀಡಿದರು. ಕೇಕ್ ಕತ್ತರಿಸುವ ಮೂಲಕ 27ನೇ ವರ್ಷದ ಸಂಭ್ರಮಾಚರಣೆ ಮಾಡಲಾಯಿತು. ಈ ವೇಳೆ ಸಂಸ್ಥೆಯ ಬೆಳವಣಿಗೆಗೆ ಶ್ರಮಿಸಿದ ಎಲ್ಲಾ ಗಣ್ಯರು ಭಾಗಿಯಾಗಿ ಸಂಭ್ರಮ ಹಂಚಿಕೊಂಡರು.ಇನ್ನೂ ಮುಂದೆಯೂ ಸಂಸ್ಥೆಯೂ ಮುಂದೆ ಗ್ರಾಹಕರಿಗೆ ಉತ್ತಮ ಸೇವೆ ನೀಡಲಿದೆ. ಹಿಂದಿನಿಂದಲ್ಲೂ ನಮ್ಮ ಸಂಸ್ಥೆಯ ಬೆಳವಣಿಗೆಗೆ ಸಹಾಯ- ಸಹಕಾರ ನೀಡಿದ ಎಲ್ಲರಿಗೂ ಧನ್ಯವಾದ ಅರ್ಪಿಸಿದರು.

ಇನ್ನು, ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಬೆಳಗಾವಿ ಬಿಜೆಪಿ ಸಂಸದೆ ಮಂಗಲಾ ಸುರೇಶ ಅಂಗಡಿ, ಶಾಸಕರಾದ ಅನೀಲ್ ಬೆನಕೆ, ಲಕ್ಷ್ಮೀ ಹೆಬ್ಬಾಳ್ಕರ್, ಮೆಟ್ರೋಕಾಸ್ಟ ಇಂಡಿಯಾ ಪ್ರೈವೇಟ್ ಲಿಮಿಟೆಡ್ ನ ಎಂ.ಡಿ. ನಾಗೇಶ್ ಛಾಬ್ರಿಯಾ, ಪ್ರಮೋಟರ್ ಶ್ರೀಮತಿ ನಿಶಾ ನಾಗೇಶ್ ಛಾಬ್ರಿಯಾ, ಸುಮುಖ ಛಾಬ್ರಿಯಾ, ಮಲ್ಟಿ ಟ್ರೇಡಿಂಗ್ ರಾಧಾ ಗ್ರೂಪ್ ನ ಮ್ಯಾನೇಜ್ಮೆಂಟ್ ಡೈರೆಕ್ಟರ್ ಆದಿತ್ಯ ರಾಮ್ ಅಸ್ರಾನಿ, ಸ್ಟಾರ್ ಡಿಜಿಟಲ್ ಸಿಇಓ ರಿದ್ಧಿ ಆದಿತ್ಯ ಅಸ್ರಾನಿ, ನವೀನ್ ಅಡ್ವಟೈಸ್ಮೆಂಟ್ ನ ಶಿರೀಶ್ ಪಟ್ಟಣಶೆಟ್ಟಿ, ಮೆಟ್ರೋಕಾಸ್ಟ ಇಂಡಿಯಾ ನೆಟವರ್ಕ್ ನ ಜಿ.ಎಂ ಸಂತೋಷ ಪರ್ವತರಾವ್, ಇನ್ ನ್ಯೂಸ್ ನ ಪ್ರಧಾನ ಸಂಪಾದಕರಾದ ರಾಜಶೇಖರ ಪಾಟೀಲ್, ಮೆಟ್ರೋಕಾಸ್ಟನ ಸೀನಿಯರ್ ಹೆಡ್ ಆಪರೇಶನ್ ನ ರಜನೀಶ್ ತಡಕೋಡಕರ್ ಮೊದಲಾದವರು ಉಪಸ್ಥಿತರಿದ್ದರು.

RELATED ARTICLES

Related Articles

TRENDING ARTICLES