ಬೆಂಗಳೂರು : ಮೇಲ್ಮನೆ ಚುನಾವಣೆಗೆ ಕಾಂಗ್ರೆಸ್ ತಯಾರಿ ಚುರುಕಾಗಿದೆ. ಟಿಕೆಟ್ಗಾಗಿ ಆಕಾಂಕ್ಷಿಗಳು ಪೈಪೋಟಿ ನಡೆಸ್ತಿದ್ದಾರೆ. ಇರುವ ಎರಡು ಸ್ಥಾನಕ್ಕೆ, ಅರ್ಧ ಡಜನ್ಗೂ ಹೆಚ್ಚು ಆಕಾಂಕ್ಷಿಗಳ ನಡುವೆ ಫೈಟ್ ಶುರುವಾಗಿದೆ. ಟಿಕೆಟ್ಗಾಗಿ ನಾಯಕರ ಮನೆ ಬಾಗಿಲಿಗೆ ಎಡತಾಕ್ತಿದ್ದಾರೆ. ಹಾಲಿ ಮಾಜಿಗಳ ನಡುವೆ ಹೊಸಬರ ಪೈಪೋಟಿ ಕೂಡ ಹೆಚ್ಚಾಗಿದೆ.
ವಿಧಾನಸಭೆಯಿಂದ ಪರಿಷತ್ನ 7 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಮೂರು ಪಕ್ಷಗಳಲ್ಲಿ ಟಿಕೆಟ್ಗೆ ತೀರ್ವ ಪೈಪೋಟಿ ನಡೆದಿದೆ. ತೆರವಾಗುವ ಏಳರಲ್ಲಿ 4 ಬಿಜೆಪಿ,2 ಕಾಂಗ್ರೆಸ್ 1 ಜೆಡಿಎಸ್ ಪಾಲಾಗಲಿದೆ. ಕಾಂಗ್ರೆಸ್ಗೆ ಬರುವ ಎರಡು ಸ್ಥಾನಕ್ಕಾಗಿ ಅರ್ಧ ಡಜನ್ ಗೂ ಹೆಚ್ಚು ಮಂದಿ ಆಕಾಂಕ್ಷಿಗಳಿದ್ದಾರೆ. ನಮಗೆ ಟಿಕೆಟ್ ಕೊಡಿ ಅಂತ ನಾಯಕರ ಮನೆ ಬಾಗಿಲಿಗೆ ಎಡತಾಕ್ತಿದ್ದಾರೆ. ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ನಿವಾಸಕ್ಕೆ ಇಂದು ಹಲವು ಮುಖಂಡರು ಭೇಟಿ ನೀಡಿ ಟಿಕೆಟ್ ಗೆ ಬೇಡಿಕೆ ಮುಂದಿಟ್ಟಿದ್ದಾರೆ.ಅದರಲ್ಲೂ ನೇಕಾರ ಸಮುದಾಯಕ್ಕೆ ಆದ್ಯತೆ ನೀಡಬೇಕು ಅಂತ ಎಂ ಡಿ ಲಕ್ಷ್ಮೀನಾರಾಯಣ ಪರವಾಗಿ ಸ್ವಾಮೀಜಿಗಳು ಬ್ಯಾಟಿಂಗ್ ಮಾಡಿದ್ರು.
ಪ್ರಸ್ತುತ ಕಾಂಗ್ರೆಸ್ಗೆ ಬರೋ ಎರಡು ಸ್ಥಾನಗಳಿಗೆ ಹಾಲಿಹಾಗೂ ಮಾಜಿಗಳು ಕೂಡ ಕಣ್ಣಿಟ್ಟಿದ್ದಾರೆ. ಇದ್ರ ನಡುವೆ ಹೊಸಬರು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ವೀಣಾ ಅಚ್ಚಯ್ಯ ಮತ್ತೊಮ್ಮೆ ಟಿಕೆಟ್ ಬಯಸಿದ್ದಾರೆ. ಮಾಜಿ ಸಭಾಪತಿಗಳಾದ ಬಿ.ಎಲ್.ಶಂಕರ್ ಹಾಗೂ ಸುದರ್ಶನ್ ಕೂಡ ಕಣ್ಣಿಟ್ಟಿದ್ದಾರೆ. ಮಾಜಿ ಎಂಎಲ್ ಸಿ ಎಂಡಿ ಲಕ್ಷ್ನೀ ನಾರಾಯಣ, ಹೊಸಬರಾದ ನಾಗಾರಜ್ ಯಾದವ್, ಮಾಜಿ ಸಚಿವ ರೆಹಮಾನ್ ಖಾನ್ ಪುತ್ರ ಮನ್ಸೂರ್ ಖಾನ್, ನಾರಾಯಣ್ ಸ್ವಾಮಿ, ಪ್ರಭಾಕರ್ ಗೌಡ, ತಿಪ್ಪಣ್ಣ ಕಮಕನೂರು ಜೊತೆಗೆ ಎಸ್.ಆರ್.ಪಾಟೀಲ್ ಕೂಡ ಆಕಾಂಕ್ಷಿಗಳಾಗಿದ್ದಾರೆ. ಬಹುತೇಖ ಮುಖಂಡರು ಸಿದ್ದರಾಮಯ್ಯರನ್ನ ಭೇಟಿ ಮಾಡಿ ಟಿಕೆಟ್ ಬೇಡಿಕೆ ಇಟ್ಟಿದ್ದಾರೆ. ಜೊತೆಗೆ ಎರಡು ಸ್ಥಾನಗಳನ್ನು ಮಹಿಳೆಯರಿಗೆ ನೀಡಬೇಕು ಅಂತ ಮಾಜಿ ಪರಿಷತ್ ಸದಸ್ಯೆ ಪ್ರಫುಲ್ಲ ಮಧುಕರ್ ಒತ್ತಾಯಿಸಿದ್ದಾರೆ.
ಒಟ್ಟಿನಲ್ಲಿ ಮೇಲ್ಮನೆ ಚುನಾವಣೆಗೆ ಕಾಂಗ್ರೆಸ್ ಸಿದ್ಧತೆ ಮಾಡಿಕೊಂಡಿದೆ. ಎರಡು ಸ್ಥಾನಕ್ಕೆ ಹಲವರು ಆಕಾಂಕ್ಷಿಗಳಿದ್ದಾರೆ. ಹಾಗಾಗಿ ಇವರಲ್ಲಿ ಯಾರಿಗೆ ಅಂತಿಮವಾಗಿ ಟಿಕೆಟ್ ಘೋಷಣೆಯಾಗುತ್ತೆ ಅನ್ನೋದನ್ನ ಕಾದು ನೋಡ್ಬೇಕಿದೆ.