Monday, December 23, 2024

ಬ್ಯಾಂಕ್​ಗೆ ಮುತ್ತಿಗೆ ಹಾಕಿ ರೈತರ ಪ್ರತಿಭಟನೆ

ಬಾಗಲಕೋಟೆ: ಸಾಲ ವಾಪಸ್ ಮಾಡದಿದ್ದಕ್ಕೆ ರೈತನ ಜಮೀನು ಹರಾಜು ಮಾಡಲು ಬ್ಯಾಂಕ್ ಸಿಬ್ಬಂದಿ ನಿರ್ಧಾರ ಮಾಡಿದ್ದಾರೆ. ಆನ್​​ಲೈನ್ ಮೂಲಕ ಹರಾಜಿಗೆ ಮುಂದಾಗಿದ್ದ ಬ್ಯಾಂಕ್ ಆಫ್​​ ಬರೋಡಾ ಬ್ಯಾಂಕ್​ಗೆ ರೈತರು ಮುತ್ತಿಗೆ ಹಾಕಿ ಪ್ರತಿಭಟನೆ ಮಾಡಿದ್ರು. ಬ್ಯಾಂಕ್ ಆಫ್ ಬರೋಡಾದಿಂದ ರೈತ ನಾಗಪ್ಪ 4 ಎಕರೆ ಜಮೀನಿನ ಮೇಲೆ 4 ಲಕ್ಷ ಪಡೆದಿದ್ರು.

ಬಡ್ಡಿ, ಅಸಲು ಸೇರಿ 32 ಲಕ್ಷ ಸಾಲವನ್ನ ರೈತ ನಾಗಪ್ಪ ತೀರಿಸಬೇಕಿತ್ತು. ಈಗ ನಾನು ಸಂಕಷ್ಟದಲ್ಲಿದ್ದೀನಿ ಸಾಲ ಹಿಂತಿರುಗಿಸಲು ಸ್ವಲ್ಪ ಸಮಯಾವಕಾಶ ಕೊಡಿ ಅಂತ ರೈತ ಮನವಿ ಮಾಡಿ ಆನ್​ಲೈನ್ ಹರಾಜಿಗೆ ತಡೆಯಾಜ್ಞೆ ತಂದಿದ್ರು..ಆದ್ರೆ ಇದ್ಯಾವುದನ್ನು ಲೆಕ್ಕಿಸದೆ ಆನ್​​ಲೈನ್ ಹರಾಜು ಮಾಡಲು ಬ್ಯಾಂಕ್ ನಿರ್ಧರಿಸಿತ್ತು.. ಹೀಗಾಗಿ ರೈತ ಮುಖಂಡ ಮುತ್ತಪ್ಪ ಕೋಮಾರ ನೇತೃತ್ವದಲ್ಲಿ ನಡೆದ ರೈತರು ಪ್ರತಿಭಟನೆ ನಡೆಸಿದ್ರು..ಬಳಿಕ ಮೇಲಾಧಿಕಾರಿಗಳ ಮೂಲಕ ಸಮಸ್ಯೆ ಬಗೆಹರಿಸಲು ಬ್ಯಾಂಕ್ ಸಿಬ್ಬಂದಿ ಒಪ್ಪಿಕೊಂಡ್ರು.

RELATED ARTICLES

Related Articles

TRENDING ARTICLES