ಬೆಂಗಳೂರು : ಸಿಲಿಕಾನ್ ಸಿಟಿಯಲ್ಲಿ ಅಧಿಕಾರಿಗಳ ನಿರ್ಲಕ್ಷ್ಯ ಧೋರಣೆಗೆ ಮತ್ತಿಬ್ಬರು ಅಮಾಯಕರು ಬಲಿಯಾಗಿದ್ದಾರೆ. ಜ್ಞಾನ ಭಾರತಿ ಪೊಲೀಸ್ ಠಾಣಾ ವ್ಯಾಪ್ತಿಯ ರಸ್ತೆಯಲ್ಲಿ ಕಳೆದ ಒಂದೂವರೆ ವರ್ಷದಿಂದ bwssb ಇಲಾಖೆಯವರು ಕಾಮಗಾರಿ ಮಾಡ್ತಾ ಇದ್ದಾರೆ. ಮಂಗಳವಾರ ಸಂಜೆ ಕೂಡ ಬಿಹಾರ ಹಾಗೂ ಯುಪಿ ಮೂಲದ ಅಂಕಿತ್ ಕುಮಾರ್, ದೇವ್ ಭರತ್ ಹಾಗೂ ತ್ರಿಲೋಕ್ ಎಂಬುವರು ಮ್ಯಾನ್ ಹೋಲ್ ಪಕ್ಕದ ಈ ಪೈಪ್ ಲೈನ್ ಗುಂಡಿಯಲ್ಲಿ ವೆಡ್ಡಿಂಗ್ ಕೆಲಸ ಮಾಡ್ತಾ ಇದ್ರು ಸುಮಾರು 7. ಗಂಟೆ ಸಮಯಯಲ್ಲಿ ಸುರಿದ ಭಾರೀ ಮಳೆಗೆ ಮ್ಯಾನ್ ಹೋಲ್ ಕಂಪ್ಲೀಟ್ ತುಂಬಿ ಅದರ ಮುಚ್ಚಳ ಓಪನ್ ಆಗಿ ಪಕ್ಕದಲ್ಲೆ ಇದ್ದ ಪೈಪ್ ಲೈನ್ ಗುಂಡಿಗೆ ನೀರು ನುಗ್ಗಿದೆ.ಈ ರಭಸಕ್ಕೆ ಈ ಗುಂಡಿಯಲ್ಲಿ ಕೆಲಸ ಮಾಡ್ತಿದ್ದ ಅಂಕಿತ್ ಕುಮಾರ್, ದೇವ್ ಭರತ್ ಉಸಿರುಗಟ್ಟಿ ಸಾವನ್ನಪ್ಪಿದ್ರೆ. ತ್ರಿಲೋಕ್ ಬಚಾವ್ ಆಗಿದ್ದಾನೆ.
ಇನ್ನು ಜ್ಞಾನಭಾರತಿ ಪೊಲೀಸರು ನಿರ್ಲಕ್ಷ್ಯ ಪ್ರಕರಣದಡಿ ಪ್ರಕರಣ ದಾಖಲಿಸಿಕೊಂಡು ಹೈದ್ರಾಬಾದ್ ಮೂಲದ ಮೆಗಾ ಪ್ರಾಜೆಕ್ಟ್ ಗುತ್ತಿಗೆ ಕಂಪನಿಯ ಪ್ರಾಜೆಕ್ಟ್ ಮ್ಯಾನೇಜರ್ ಶಿವಕುಮಾರ್, ಸೈಟ್ ಎಂಜಿನಿಯರ್ ಹರೀಶ್ ರೆಡ್ಡಿ, ಹೆಚ್.ಆರ್.ಮ್ಯಾನೇಜರ್ ನರಸಿಂಹರಾಜು ಹಾಗೂ ಮನೋಜ್ ಯಾದವ್ ಎಂಬುವರನ್ನು ಬಂಧಿಸಿದ್ದಾರೆ.
ಹೈದ್ರಾಬಾದ್ ಮೂಲದ ಈ ಮೆಗಾ ಪ್ರಾಜೆಕ್ಟ್ ಗುತ್ತಿಗೆ ಕಂಪನಿ ಕಳೆದ ಒಂದೂವರೆ ವರ್ಷದಿಂದ ಇಲ್ಲಿ ಕಾಮಗಾರಿ ಮಾಡ್ತಾ ಇತ್ತು.. ಇನ್ನು ಸ್ಥಳಕ್ಕೆ ಬಂದ ಉಲ್ಲಾಳ ವಾರ್ಡ್ ನ ಕಾರ್ಪೋರೇಟರ್ ಪತಿ ಶಾರದಾ ಮುನಿರಾಜ್, ಮೃತರ ಕುಟುಂಬಕ್ಕೆ bwssb ಹಾಗೂ ಗುತ್ತಿಗೆದಾರರು ಪರಿಹಾರ ಕೊಡಬೇಕೆಂದು ಮನವಿ ಮಾಡಿದರು.
ಒಟ್ಟಾರೆ ಯಾವುದೇ ಸೇಫ್ಟಿ ಮೆಜರ್ಸ್ ವ್ಯವಸ್ಥೆ ಮಾಡದೆ ಕೂಲಿ ಕಾರ್ಮಿಕರು ಜೀವನದಲ್ಲಿ ಚೆಲ್ಲಾಟವಾಡಿರೋ bwssb ಹಾಗೂ ಮೆಗಾ ಪ್ರಾಜೆಕ್ಟ್ ಕಂಪನಿಯವರ ನಿರ್ಲಕ್ಷ್ಯಕ್ಕೆ ಬೇರೆ ರಾಜ್ಯಗಳಿಂದ ಬಂದು ಇಲ್ಲಿ ಕೂಲಿ ನಾಲಿ ಮಾಡಿ ಬದುಕು ಕಟ್ಟಿಕೊಂಡಿದ್ದ ಇವರಿಬ್ಬರ ಸಾವು ಮಾತ್ರ ದುರಂತವೇ ಸರಿ.