ಮಂಗಳೂರು: ರಾಜ್ಯದಲ್ಲಿ ತಾಲಿಬಾನ್ ಸಂಸ್ಕೃತಿ ಸರಕಾರ ಹೇಳಿಕೆ ವಿಚಾರವಾಗಿ ಯು.ಟಿ ಖಾದರ್ ಗೆ ಇಂಧನ ಸಚಿವ ಸುನಿಲ್ ಕುಮಾರ್ ತಿರುಗೇಟು ನೀಡಿದ್ದಾರೆ.
ನಗರದಲ್ಲಿಂದು ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೇಸ್ ಸರಕಾರದ ಕಾಲಘಟ್ಟದಲ್ಲಿ ಪ್ರಯೋಜಿತ ಹತ್ಯೆಗಳು ನಡೆದಿವೆ. ಉಡುಪಿ, ಕೊಡಗು ಮತ್ತು ಉತ್ತರಕನ್ನಡದಲ್ಲಿ ಸಂಘಟನೆ ಗುರಿಯಾಗಿಸಿ ಹತ್ಯೆ ನಡೆದಿದೆ. ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಇಂಥ ಘಟನೆಗಳಿಗೆ ಕಡಿವಾಣ ಹಾಕಲಾಗಿದೆ ಎಂದರು.
ಇನ್ನು, ಸಿದ್ಧರಾಮಯ್ಯ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಮಂಗಳೂರಿನಲ್ಲಿ ಹಿಂದೂ ಯುವಕನ ಹತ್ಯೆಯಾಗಿತ್ತು. ಮುಖ್ಯಮಂತ್ರಿಗಳು ಇದ್ದರೂ ಯುವಕನ ಮನೆಗೆ ಭೇಟಿಯಾಗಿಲ್ಲ. ತಾಲೀಬಾನ್ ಸಂಸ್ಕತಿಯ ಬಗ್ಗೆ ಮಾತನಾಡುವ ಯು.ಟಿ.ಖಾದರ್ ಜಿಲ್ಲೆಯ ಶಾಂತಿ ಕದಡಲು ಎಷ್ಟು ಕೊಡುಗೆ ನೀಡಿದ್ದಾರೆ ಎನ್ನುವುದು ಜನತೆಗೆ ಗೊತ್ತಿದೆ ಎಂದು ಪುತ್ತೂರಿನಲ್ಲಿ ಇಂಧನ ಸಚಿವ ಸುನಿಲ್ ಕುಮಾರ್ ತಿರುಗೇಟು ನೀಡಿದ್ದಾರೆ.