Thursday, January 9, 2025

ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ : ಶಿಕ್ಷಕನ ವಿರುದ್ದ ದೂರು ದಾಖಲು

ಮಂಡ್ಯ: ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ಹಿನ್ನಲೆ ಶಿಕ್ಷಕನ ವಿರುದ್ದ ದೂರು ದಾಖಲಿಸಿರುವ ಘಟನೆ ಮಂಡ್ಯದ ಕೆ ಆರ್ ಪೇಟೆ ತಾಲೂಕಿನ ಗಂಗನಹಳ್ಳಿ ಗ್ರಾಮದಲ್ಲಿ ನಡೆದಿದೆ.

ಕಳೆದ 10 ವರ್ಷದಿಂದ ಗಂಗನಹಳ್ಳಿ ಗ್ರಾಮದ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಚಂದ್ರಶೇಖರ್ ಎಂಬ ಶಿಕ್ಷಕನಿಂದ ಕಳೆದ ಮಾರ್ಚ್ 31 ರಂದು 2 ನೇ ತರಗತಿ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ಕೊಟ್ಟಿದ್ದಾರೆ.

ಇದರಿಂದ ಭಯಗೊಂಡ ವಿದ್ಯಾರ್ಥಿನಿ ನಿನ್ನೆ ಶಾಲೆ ಆರಂಭವಾದ ಹಿನ್ನಲೆ ಅವರ ಪೋಷಕರು ಶಾಲೆಗೆ ಹೋಗಲು ಹೇಳಿದ್ದಾರೆ, ಆದರೆ ನಾನು ಹೋಗುವುದಿಲ್ಲ ಎಂದು ಹಠ ಮಾಡಿದಾಗ ಪೋಷಕರು ಯಾಕೆ ಎಂದು ವಿಚಾರಿಸಿದಾಗ ವಿದ್ಯಾರ್ಥಿನಿ ವಿಷಯ ತಿಳಿಸಿದ್ದಾರೆ.

ತಕ್ಷಣ ಪೋಷಕರು ಶಾಲೆಗೆ ತೆರಳಿ ಗಲಾಟೆ ಮಾಡಿದ್ದಾರೆ. ಇನ್ನು ಈ ವೇಳೆ ವಿಷಯ ತಿಳಿದ ಬಿಇಓ ಬಸವರಾಜು ತಕ್ಷಣ ಆ ಶಿಕ್ಷಕನನ್ನು ಅಮಾನತು ಮಾಡಿದ್ದಾರೆ.

ಅದುವಲ್ಲದೇ ಕಿಕ್ಕೇರಿ ಪೋಲೀಸ್​​ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಸದ್ಯ ಅಧಿಕಾರಿಗಳು ತನಿಖೆ ಕೈಗೊಂಡಿದ್ದಾರೆ.

RELATED ARTICLES

Related Articles

TRENDING ARTICLES