Monday, December 23, 2024

IPL 2022 : RCBಗೆ ಮಾಡು ಇಲ್ಲವೇ ಮಡಿ ಮ್ಯಾಚ್​​..!

IPL 2022 ಟೂರ್ನಿ ರೋಚಕ ಘಟ್ಟದತ್ತ ತಲುಪುತ್ತಿದೆ. ಒಂದು ತಂಡದ ಸೋಲು- ಗೆಲುವು ಮತ್ತೊಂದು ತಂಡದ ಅಳಿವು- ಉಳಿವಿನ ಲೆಕ್ಕಚಾರ ಆರಂಭವಾಗಿದೆ.

ನಿನ್ನೆ ನಡೆದ ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ 17 ರನ್​ಗಳ ಮೂಲಕ ಜಯ ಸಾಧಿಸುವ ಮೂಲಕ ಪ್ಲೇ ಆಫ್ ರೇಸ್​​ನಲ್ಲಿ ಉಳಿದುಕೊಂಡಿದೆ. ಇದರೊಂದಿಗೆ ರಿಷಬ್ ಪಂತ್ ಪಡೆ ಆಡಿದ 13 ಪಂದ್ಯಗಳಲ್ಲಿ 7ರಲ್ಲಿ ಜಯ, 6ರಲ್ಲಿ ಸೋಲು ಕಂಡು 14 ಅಂಕದೊಂದಿಗೆ ನಾಲ್ಕನೇ ಸ್ಥಾನಕ್ಕೆ ಜಿಗಿದಿದೆ.

RCB ಕೂಡ 13 ಪಂದ್ಯ ಗಳಲ್ಲಿ 7ರಲ್ಲಿ ಜಯ ಸಾಧಿಸಿ 6ರಲ್ಲಿ ಸೋಲು ಕಂಡು 14 ಅಂಕ ಸಂಪಾದಿಸಿದೆ. ಆದರೆ ಮೈನಸ್ ರನ್​​ರೇಟ್​​ನಲ್ಲಿರುವ ಕಾರಣ ಐದನೇ ಸ್ಥಾನಕ್ಕೆ ಕುಸಿದಿದೆ. ಮೇ 19ರಂದು ವಾಂಖೆಡೆಯಲ್ಲಿ ಗುಜರಾತ್ ಟೈಟಾನ್ಸ್​ ವಿರುದ್ಧ RCB ಪಂದ್ಯವಾಡಲಿದೆ.

RCB ಪ್ಲೇ ಆಫ್ ಪ್ರವೇಶಿಸಬೇಕಾದ್ರೆ ಈ ಪಂದ್ಯದಲ್ಲಿ ಕೇವಲ ಗೆಲುವು ಸಾಧಿಸಿದರೆ ಸಾಲದು, ಬದಲಾಗಿ ದೊಡ್ಡ ಮೊತ್ತದ ಅಂತರದಿಂದ ಜಯಿಸಿ ಪ್ಲಸ್ ರನ್​​ರೇಟ್​ಗೆ ಮರಳಬೇಕಿದೆ.

RELATED ARTICLES

Related Articles

TRENDING ARTICLES