Sunday, December 22, 2024

ಪ್ರಿಯಕರನಿಗಾಗಿ ಮನೆಯಲ್ಲಿದ್ದ ಚಿನ್ನ ಕದ್ದ ಮಗಳು : ತಾಯಿಯಿಂದಲೇ ದೂರು

ಬೆಂಗಳೂರು: ಮಗಳ ಮೇಲೆ ತಾಯಿಯಿಂದಲೇ ಪೊಲೀಸ್ ಠಾಣೆಯಲ್ಲಿ‌ ದೂರು ದಾಖಲಿಸಿರುವ ವಿಚಿತ್ರ ಘಟನೆ ನಗರದ ಅಮೃತಹಳ್ಳಿಯ ಜಕ್ಕೂರು ಲೇಔಟ್​​ನಲ್ಲಿ ನಡೆದಿದೆ.

ದೀಪ್ತಿ(24) ಮದನ್(27) ಬಂಧಿತ ಜೋಡಿ. ಮನೆಯಲ್ಲಿದ್ದ ಚಿನ್ನವನ್ನು ಪ್ರಿಯತಮೆಗೆ ಒಂದೊಂದಾಗೇ ತೆಗೆದುಕೊಂಡು ಹೋಗಿ ನೀಡಿದ್ದು ಬರೋಬ್ಬರಿ ೧ ಕೆಜಿ ಚಿನ್ನವನ್ನು ಕೊಟ್ಟಿದ್ದಾರೆ. ಬಳಿಕ ಕದ್ದ ಚಿನ್ನವನ್ನು ಪ್ರಿಯಕರನ ಜೊತೆ ಸೇರಿ ಅಡಮಾನ ಇಟ್ಟಿದ್ದಾಳೆ ಚಾಲಕಿ ಮಗಳು.

ಇನ್ನು ದೀಪ್ತಿಗೆ ಮದುವೆಯಾಗಿ ಡಿವೋರ್ಸ್ ಆಗಿದೆ. ಮನೆಯಲ್ಲಿ ಅಮ್ಮ ಮತ್ತು ಮಗಳು ಮಾತ್ರ ಇದ್ದರು. ಅಲ್ಲದೇ  ಮದನ್​ಗೆ ಮದುವೆಯಾಗಿ ಇಬ್ಬರು ಮಕ್ಕಳಿದ್ದಾರೆ. ಈತ ಡ್ರೈವಿಂಗ್ ಶಾಲೆಯೊಂದರಲ್ಲಿ‌ ಟ್ರೈನರ್ ಆಗಿ ಕೆಲಸ ಮಾಡುತ್ತಿದ್ದ. ಅದೇ ಶಾಲೆಗೆ ದೀಪ್ತಿ ಕೂಡ ಡ್ರೈವಿಂಗ್ ಕಲಿಯಲು ಹೋಗಿದ್ದಾಳೆ. ಈ ವೇಳೆ ಇಬ್ಬರ ನಡುವೆ ಪ್ರೇಮವಾಗಿದೆ.

ನಂತರ ಪ್ರಿಯತಮನಿಗಾಗಿ ಮನೆಯಲ್ಲಿದ್ದ ತಾಯಿಯ ಒಡವೆ ಎಲ್ಲವನ್ನು ನೀಡಿ, ಬಳಿಕ ಆ ಜಾಗಕ್ಕೆ ರೋಲ್ಡ್ ಗೋಲ್ಡ್ ಚಿನ್ನ ತಂದು ಇಟ್ಟಿದ್ದಾಳೆ. ಈ ವೇಳೆ ಚಿನ್ನದಲ್ಲಿ ವ್ಯತ್ಯಾಸ ಕಂಡು ಬಂದ ಹಿನ್ನೆಲೆ ತಾಯಿಯು  ಮಗಳನ್ನು ಪ್ರಶ್ನಿಸಿದ್ದಾರೆ. ಆಗ ತನಗೆ ಗೊತ್ತಿಲ್ಲ ಎಂಬ ನಾಟಕವನ್ನು ಆಡಿದ್ದಾಳೆ.

ಇದ್ದ ಇಬ್ಬರಲ್ಲಿ ಕದ್ದವರ್ಯಾರು ಅನ್ನೋ ಅನುಮಾನ ತಾಯಿಗೆ ಬಂದು ಮಗಳ ಮೇಲೆಯೇ ಶಂಕೆ ವ್ಯಕ್ತಪಡಿಸಿ ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ಮಗಳ ಮೇಲೆಯೇ ದೂರು ನೀಡಿದ್ದಾರೆ. ವಿಚಾರಣೆ ವೇಳೆ ಅವರ ಅಮರ ಮಧುರ ಪ್ರೇಮ ಬೆಳಕಿಗೆ ಬಂದಿದೆ. ನಂತರ ಕದ್ದ ಚಿನ್ನವನ್ನು ಮುತ್ತೂಟ್ ಗೋಲ್ಡ್ ಲೋನ್ ಹಾಗೂ ಮಣಪ್ಪುರಂ ಗೋಲ್ಡ್​​ನಲ್ಲಿ ಅಡಮಾನ ಇಟ್ಟು, ಬಂದ ಹಣದಲ್ಲಿ ಮೋಜು ಮಸ್ತಿ ಮಾಡಿದ್ದಾರೆ.

ಸದ್ಯ ಕಳುವಾಗಿದ್ದ ಚಿನ್ನಾಭರಣವನ್ನು ಪೊಲೀಸರು ವಶಕ್ಕೆ ಪಡೆದು ತನಿಖೆ ಮುಂದುವರಿಸಿದ್ದಾರೆ.

RELATED ARTICLES

Related Articles

TRENDING ARTICLES