ದೇವನಹಳ್ಳಿ : ಮನೆಯಲ್ಲಿ ಇದ್ದದ್ದು ಒಂದೇ ಮೊಬೈಲ್. ಕುಟುಂಬ ಸದಸ್ಯರೆಲ್ಲರೂ ಇದೇ ಮೊಬೈಲ್ ಬಳಸ್ತಾ ಇದ್ರು ಚಾರ್ಚಿಂಗ್ ಹಾಕಿದ ಮೊಬೈಲ್ ನೋಡುತ್ತಿದ್ದ ಮಗಳನ್ನ ಪೋಷಕರು ಮೊಬೈಲ್ ನೋಡ್ಬೇಡ ಅಂದಿದಕ್ಕೆ ಆ ಯುವತಿ ನೇಣಿಗೆ ಶರಣಾಗಿದ್ದಾಳೆ. ಯೆಸ್, ದೊಡ್ಡಬಳ್ಳಾಪುರ ನಗರ ಹೊರವಲಯ ಮಾದಗೊಂಡನಹಳ್ಳಿ ಬಳಿ ಈ ಘಟನೆ ನಡೆದಿದೆ. ದೊಡ್ಡಬಳ್ಳಾಪುರ ನಗರ ರಾಜೀವ್ ಗಾಂಧಿ ಬಡಾವಣೆಯ ನರಸಪ್ಪ ಮತ್ತು ಜಯಲಕ್ಷ್ಮಮ್ಮ ದಂಪತಿ ಪುತ್ರಿ 19 ವರ್ಷದ ಜಯಲಕ್ಷ್ಮಿ ಮೃತ ದುರ್ದೈವಿ.
ಇಷ್ಟಕ್ಕೂ ಆಗಿದ್ದಿಷ್ಟೇ ಜಯಲಕ್ಷ್ಮಿಗೆ ಒಬ್ಬ ಅಕ್ಕ ಹಾಗೂ ತಂಗಿ ಇದ್ದು, ಅಕ್ಕನಿಗೆ ಮದುವೆ ಫಿಕ್ಸ್ ಆಗಿದ್ದು, ಮದುವೆ ಖರ್ಚಿಗೆ ಹಣ ಕೊಡುವರು ಪೋನ್ ಮಾಡುವರಿದ್ದರು. ಹೀಗಾಗಿ ಫೋನ್ ಚಾರ್ಜಿಂಗ್ ಹಾಕಿದ್ದರು. ಇದೇ ಹೊತ್ತಿಗೆ ಜಯಲಕ್ಷ್ಮಿ ಚಾರ್ಜಿಂಗ್ ಆಗುತ್ತಿದ್ದ ಫೋನ್ ಆಪರೇಟ್ ಮಾಡುತ್ತಿದ್ದಳು. ಇದರಿಂದ ಸಿಟ್ಟಿಗೆದ್ದ ತಂದೆ ನರಸಪ್ಪ ಮಗಳನ್ನು ಗದರಿದ್ದರು. ಇದಕ್ಕೆ ಸಿಟ್ಟಿಗೆದ್ದ ಆಕೆ ಫೋನ್ ಒಡೆದು ಹೊರ ಹೋಗಿದ್ದಳು. ಇಡೀ ರಾತ್ರಿಯಿಡೀ ಹುಡುಕಿದ್ರೂ ಸಿಕ್ಕಿರಲಿಲ್ಲ. ಮಾರನೇ ದಿನ ಊರಿನ ಹೊರಗಿರುವ ಮರದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದಾಳೆ.ಆದರೆ, ಇದು ಹತ್ಯೆಯೋ ಆತ್ಮಹತ್ಯೆಯೋ ಎಂಬ ಅನುಮಾನ ಮೂಡಿದೆ.
ಅದೇನೇ ಇರಲಿ, ಯುವತಿ ಸಾವಿಗೆ ಮೊಬೈಲ್ ಫೋನ್ ಬಳಕೆಯೇ ಕಾರಣ ಅನ್ನೋದು ಮೇಲ್ನೋಟಕ್ಕೆ ಕಾಣಿಸುತ್ತಿದೆ. ಇನ್ನಾದ್ರೂ ತಂದೆ-ತಾಯಿ ತಮ್ಮ ಮಕ್ಕಳಿಗೆ ಫೋನ್ ಕೊಡೋದನ್ನು ಕಡಿಮೆ ಮಾಡಿದ್ರೆ ಒಳ್ಳೆಯದು.