Wednesday, January 22, 2025

‘ಕಾಣೆಯಾದವರ ಬಗ್ಗೆ ಪ್ರಕಟಣೆ’  ಚಿತ್ರಕ್ಕೆ ರಾಕಿಭಾಯ್​​ ಲಿಂಕ್​​

ದಿಲ್​ವಾಲಾ, ಱಂಬೋ – 2 ಸಿನಿಮಾ ಮೂಲಕ ಚಿತ್ರಪ್ರೇಮಿಗಳ ದಿಲ್​​ ಗೆದ್ದಿದ್ದ ಅನಿಲ್​​ ಆ್ಯಕ್ಷನ್​​ ಕಟ್​​ ಹೇಳಿರೋ ಸಿನಿಮಾ ಕಾಣೆಯಾದವರ ಬಗ್ಗೆ ಪ್ರಕಟಣೆ. ಕ್ಯಾಚಿ ಟೈಟಲ್​ ಇರೋ ಈ ಚಿತ್ರದಲ್ಲಿ ನಾಣಿ, ಚಿಕ್ಕಣ್ಣ, ರಂಗಾಯಣ ರಘು ಅವರ ಕಾಮಿಡಿ ಕಿಕ್ಕಿದೆ. ಆದ್ರೆ ಅಸಲಿ ಮ್ಯಾಟ್ರೇನಂದ್ರೆ, ಈ ಸಿನಿಮಾ ಸ್ಪೂರ್ತಿಯ ಹಿಂದಿರೋದು  ಸ್ಯಾಂಡಲ್​​ವುಡ್​​ ಸುಲ್ತಾನ್​​ ರಾಕಿಭಾಯ್​​​. ಯೆಸ್​​, ಕಾಣೆಯಾದವ್ರಿಗೂ,ಕೆಜಿಎಫ್​​ ತೂಫಾನ್​​ಗೂ ಏನು ಕನೆಕ್ಷನ್​​. ಈ ಸ್ಟೋರಿ ಓದಿ

  • ನರಾಚಿಯ ನಡುಗಿಸಿದ  ರಣಧೀರ ಸಿನಿಮಾ  ಕಥೆಗೆ ಸ್ಪೂರ್ತಿ

ಸ್ಯಾಂಡಲ್​​ವುಡ್​​ನ ಹಾಸ್ಯ ಕಲಾವಿದರಾದ ರಂಗಾಯಣ ರಘು, ಚಿಕ್ಕಣ್ಣ, ತಬಲಾ ನಾಣಿ ಸೇರಿದಂತೆ ಘಟಾನುಘಟಿ ಕಲಾವಿದರ ತಂಡವೇ ಇರೋ ಸಿನಿಮಾ ‘ಕಾಣೆಯಾದವರ ಬಗ್ಗೆ ಪ್ರಕಟಣೆ’. ನಿರ್ದೇಶಕ ಅನಿಲ್​​ಕುಮಾರ್​​ ತಮ್ಮ ಸ್ನೇಹಿತರೊಂದಿಗೆ ಸೇರಿ ಈ ಸಿನಿಮಾ ನಿರ್ಮಾಣ ಮಾಡ್ತಿದ್ದಾರೆ. ಪಕ್ಕಾ ಫ್ಯಾಮಿಲಿ ಎಂಟರ್ಟೈನ್​ಮೆಂಟ್​​ ಚಿತ್ರಕಥೆ  ಇರೋ ಸಿನಿಮಾ ಮೇಲೆ ಸಿಕ್ಕಾಪಟ್ಟೆ ಕ್ಯೂರಿಯಾಸಿಟಿ ಇದೆ. ಪ್ರತಿ ಮನೆಯಲ್ಲಿ ನಡೆಯೋ ಸಿಂಪಲ್​ ಸನ್ನಿವೇಶಗಳನ್ನು ಚಿತ್ರದಲ್ಲಿ ತೋರಿಸಲಾಗಿದೆಯಂತೆ. ಆದ್ರೆ ಈ ಸಿನಿಮಾ ಹಿಂದೆ ಕೆಜಿಎಫ್​​ ರಾಕಿಭಾಯ್​​ ಮಿಂಚಿದೆ ಅಂತಾರೆ ನಿರ್ದೇಶಕ ಅನಿಲ್​​.

‘ಕಾಣೆಯಾದವರ ಬಗ್ಗೆ ಪ್ರಕಟಣೆ’ ಸಿನಿಮಾ ಹಿಂದಿನ ಸ್ಪೂರ್ತಿಯ ಬಗ್ಗೆ ಅನಿಲ್​ ಅವರನ್ನ ಚಿಕ್ಕಣ್ಣ ಪ್ರಶ್ನೆ ಮಾಡಿದ್ರು. ಸಿನಿಮಾವನ್ನು ಮಾಡೋ ಮುಂಚೆ ಅನಿಲ್​​ ರಾಕಿಭಾಯ್​​ ಯಶ್​​ಗೆ ಕಥೆ ಹೇಳಿದ್ರಂತೆ. ಮುಲಾಜಿಲ್ಲದೆ ಸಿನಿಮಾ ಮಾಡಿ ನಿಮ್​ ಜೊತೆ ನಾನಿದ್ದೇನೆ ಎಂದಿದ್ದ ರಾಕಿಭಾಯ್​​ ಅನಿಲ್​​ ಬೆನ್ನಿಗೆ ದೊಡ್ಡ ಶಕ್ತಿಯಾಗಿ ನಿಂತಿದ್ರು. ಇಷ್ಟೆ ಅಲ್ಲದೆ ಇಂತಹ ಸಿನಿಮಾಗಳು ಬರಬೇಕು. ನಾನೆಂದಿಗೂ ನಿಮ್​ ಜೊತೆ ಇದ್ದೇನೆ ಅಂದಿದ್ರು.

  • ಕಿರಾತಕ’, ‘ಕೆಜಿಎಫ್’​​.. ಏನೀ ‘ಕ’  ರಿಲೇಷನ್​​
  • ಚಿಕ್ಕಣ್ಣನ ಫನ್ನಿ ಪ್ರಶ್ನೆಗೆ ಅನಿಲ್​ಕುಮಾರ್​ ಆನ್ಸರ್​​

ರಾಕಿಭಾಯ್​ ಸಿನಿಮಾಗಳಲ್ಲಿ ವರ್ಕ್​​ ಮಾಡಿರೋ ನಿರ್ದೇಶಕ ಅನಿಲ್​ಕುಮಾರ್​ಗೆ ಯಶ್​​ ಜೊತೆ ಉತ್ತಮ ಒಡನಾಟವಿದೆ. ಅನಿಲ್​ ಪ್ರತಿಯೊಂದನ್ನು ಮುಕ್ತವಾಗಿ ಯಶ್​​ ಜೊತೆ ಹಂಚಿಕೊಳ್ತಾರೆ. ಕಿರಾತಕ ಸಿನಿಮಾ ಹಿಟ್​ ಆಗಿದೆ, ಕೆಜಿಎಫ್ ಸಿನಿಮಾ ಧೂಳೆಬ್ಬಿಸಿದೆ.  ಹಾಗಾಗಿಯೇ  ಕಾ ಅಕ್ಷರದಲ್ಲೆ ಚಿತ್ರದ ಟೈಟಲ್​ ಇಟ್ಟಿದ್ದೀರಾ ಅಂತ ಚಿಕ್ಕಣ್ಣ ಅನಿಲ್​ ಕಾಲೆಳೆದ್ರು. ಇದಕ್ಕೆ ತಮಾಷೆಯಾಗೆ ರಿಯಾಕ್ಟ್​ ಮಾಡಿದ ಅನಿಲ್​​ ಸಿನಿಮಾ ಟೈಟಲ್​ ಹಿಂದಿನ ರಹಸ್ಯ ಬಿಚ್ಚಿಟ್ರು.

ಕಾಣೆಯಾದವರು ಸಿನಿಮಾ ಎಲ್ಲಾ ಸಿನಿಮಾಗಳಂತೆ ರೆಗ್ಯೂಲರ್ ಫಾರ್ಮ್ಯಾಟ್​​ ಚಿತ್ರವಲ್ಲ. ಮನುಷ್ಯರ ನಡುವಿನ ಸಂಬಂಧಗಳನ್ನು ಮನಸ್ಸಿಗೆ ಮುಟ್ಟುವಂತೆ ತೋರಿಸಲಾಗಿದೆಯಂತೆ. ಈ ಚಿತ್ರಕ್ಕೆ ಅರ್ಜುನ್​ ಜನ್ಯಾ ಮ್ಯೂಸಿಕ್ ಕಂಪೋಸಿಂಗ್​ ಮಾಡಿದ್ದು ಚಂದನ್​​ ಶೆಟ್ಟಿ, ಆಲ್​ ಓಕೆ ಬ್ಯಾಂಕಾಕ್​ ಸಾಂಗ್​​ ಕಿಕ್ಕೇರಿಸಿದೆ. ಮೇ 27 ಬೆಳ್ಳಿ ತೆರೆಯ ಮೇಲೆ ಕಾಣೆಯಾದವರು ರಾರಾಜಿಸೋಕೆ ಸಜ್ಜಾಗಿದ್ದಾರೆ.

ಬಹುತೇಕ ಸ್ಯಾಂಡಲ್​ವುಡ್​​ನ ಕಾಮಿಡಿ ಕಲಾವಿದರೇ ನಟಿಸಿ ಮಸ್ತ್​ ಮನರಂಜನೆ ನೀಡಿರೋ ಚಿತ್ರಕ್ಕೆ ಪ್ರೇಕ್ಷಕನ ರೆಸ್ಪಾನ್ಸ್​ ಹೇಗಿರುತ್ತೆ ಅನ್ನೋದನ್ನ ಕಾದು ನೋಡ್ಬೇಕು..

ಫಿಲ್ಮ್​ ಬ್ಯೂರೋ.. ಪವರ್​ ಟಿವಿ..

RELATED ARTICLES

Related Articles

TRENDING ARTICLES