ಕಲಬುರಗಿ: ತುಂಬಿ ತುಳುಕುತ್ತಿರೋ ಸರಕಾರಿ ಆಸ್ಪತ್ರೆ. ಆಸ್ಪತ್ರೆಯ ಬೆಡ್ ಮೇಲೆ ನರಳಾಡುತ್ತಿರುವ ಪುಟ್ಟ ಪುಟ್ಟ ಮಕ್ಕಳು ಅಷ್ಟಕ್ಕೂ ಕಾರಣ ವಾಂತಿಭೇದಿ. ಇಂತಹ ದೃಶ್ಯ ಕಂಡು ಬಂದದ್ದು ಕಲಬುರಗಿ ಜಿಲ್ಲೆಯ ಚಿತಾಪೂರ ಪಟ್ಟಣದಲ್ಲಿ. ಹೌದು ಕಳೆದ 15 ದಿನಗಳಿಂದ ಆಸ್ಪತ್ರೆಯಲ್ಲಿ ದಾಖಲಾಗುವವರು ವಾಂತಿ ಭೇದಿಯಿಂದಲೇ ಅನ್ನೊದು ವಿಶೇಷ. ಹೀಗೆ ವಾಂತಿ ಭೇದಿಯಿಂದ ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿರೋದಕ್ಕೆ ಕಾರಣ ಕಲುಷಿತ ನೀರು ಹೌದು. ಚಿತ್ತಾಪುರ ತಾಲೂಕಿನ ಹಲವು ಹಳ್ಳಿಗಳಲ್ಲಿ ಶುದ್ಧ ಕುಡಿಯುವ ನೀರು ಅನ್ನೋದು ಮರಿಚಿಕೆಯಾಗಿದೆ. ಚಿತ್ತಾಪುರ ಪಟ್ಟಣದಲ್ಲಿ ಇಂದು ಸರಿ ಸುಮಾರು 20ಕ್ಕಿಂತಲೂ ಅಧಿಕ ಜನರು ಕಲುಷಿತ ನೀರು ಕುಡಿದು ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದು, ಶುದ್ಧ ಕುಡಿಯುವ ನೀರಿಗಾಗಿ ಜನರು ಪರದಾಡುವಂತಹ ಸ್ಥಿತಿ ಬಂದಿದೆ. ಈ ಬಗ್ಗೆ ಚಿತ್ತಾಪುರ ಮತಕ್ಷೇತ್ರದ ಶಾಸಕ ಪ್ರಿಯಾಂಕ ಖರ್ಗೆಯವರನ್ನು ಕೇಳಿದ್ರೆ, ಸಮಸ್ಯೆ ಬಗೆಹರಿಸ್ತಿನಿ ಅನ್ನೊದು ಬಿಟ್ಟು. ಜನರಿಗೆ ಶುದ್ಧ ಕುಡಿಯುವ ನೀರು ಕೊಡೊದು ನನ್ನ ಜವಾಬ್ದಾರಿ ನೀಜ. ಆದರೆ ಉಸ್ತುವಾರಿ ಸಚಿವರು ನಾಪತ್ತೆಯಾಗಿದ್ದಾರೆ ಅವರಿಗೆ ಜವಾಬ್ದಾರಿ ಇಲ್ವಾ ಎಂದು ಪ್ರಶ್ನೆ ಮಾಡಿದ್ರು.
ಬೇಸಿಗೆ ಬಂದ್ರೆ ಸಾಕು ಕಲಬುರಗಿ ಜಿಲ್ಲೆಯಲ್ಲಿ ಶುದ್ಧ ಕುಡಿಯುವ ನೀರಿನ ಸಮಸ್ಯೆ ಭೀಕರವಾಗುತ್ತೆ. ಬಾವಿ,ಕೆರೆ, ಬೊರವೆಲ್ ಗಳು ಬತ್ತುತ್ತವೆ. ಮತ್ತೊಂದೆಡೆ ಕುಡಿಯುವ ನೀರು ಸರಬರಾಜು ಮಾಡುವ ಪೈಪ್ ಒಡೆದು ನೀರು ಕಲುಷಿತವಾಗುತ್ತೆ. ಇದಕ್ಕೆ ಸಾಕ್ಷಿ ಎಂಬಂತೆ ದಂಡೋತಿ ಗ್ರಾಮದಲ್ಲಿಯೂ ನೂರಾರು ಜನ ಕಲುಷಿತ ನೀರು ಸೇವಿಸಿ ಆಸ್ಪತ್ರೆಗೆ ದಾಖಲಾಗಿದ್ದರು. ಆದ್ರೂ ಸಹ ಅಧಿಕಾರಿಗಳಾಗಲಿ ಸ್ಥಳಿಯ ಶಾಸಕರಾಗಲಿ ಗಮನ ಹರಿಸಿ ಶಾಶ್ವತ ಪರಿಹಾರ ಕಲ್ಪಿಸಿಲ್ಲ ಅನ್ನೋದು ಮೇಲ್ನೋಟಕ್ಕೆ ಗೊತ್ತಾಗುತ್ತಿದೆ. ಇನ್ನೂ ಕ್ಷೇತ್ರವಲ್ಲದೇ ಜಿಲ್ಲೆ ನಮ್ಮಿಂದನೇ ಸಿಕ್ಕಾಪಟೆ ಅಭಿವೃದ್ಧಿಯಾಗಿದೆ ಅಂತಾ ಬಡಾಯಿಕೊಚ್ಚಿಕೊಳ್ಳುವ ಚಿತ್ತಾಪುರ ಕ್ಷೇತ್ರದ ಶಾಸಕ ಪ್ರೀಯಾಂಕ್ ಖರ್ಗೆಯವರಿಗೆ ತಮ್ಮ ಕ್ಷೇತ್ರದ ಜನರಿಗೆ ಇದುವರೆಗೆ ಶುದ್ಧ ಕುಡಿಯುವ ನೀರು ಕೊಡಲು ಆಗ್ತಿಲ್ಲ ಅಂತಾ ಕಿಡಿಕಾರಿದ್ದಾರೆ.
ಒಟ್ಟಾರೆ ಶುದ್ಧ ಕುಡಿಯುವ ನೀರು ಬೇಕೆ ಬೇಕು. ಹೀಗಾಗಿ ಚಿತ್ತಾಪುರ ಹಾಗೂ ದಂಡೋತಿ ಜನರಿಗೆ ಕುಡಿಯುವ ನೀರು ಒದಗಿಸಿಕೊಡಬೇಕೆಂಬುದು ಜನರ ಮಾತಾಗಿದೆ. ಶುದ್ಧ ಕುಡಿಯುವ ನೀರಿಗಾಗಿ ಸರಕಾರ ಕೋಟಿ ಕೊಟಿ ಲೆಕ್ಕ ಹಚ್ಚುತ್ತೆ. ಆದ್ರೆ ಹಳ್ಳಿ ಹಳ್ಳಿಯಲ್ಲಿ ಇವತ್ತಿಗೂ ಕೂಡಾ ಶುದ್ಧ ಕುಡಿಯುವ ನೀರು ಸಿಗುತ್ತಿಲ್ಲ.