Tuesday, December 24, 2024

ಫ್ಯಾಟ್​​ ಸರ್ಜರಿಗೆ ಬಾಡಿ ಹೋಯ್ತು ನವಚೇತನ

ಬಣ್ಣದ ಲೋಕಕ್ಕೆ ಕನಸಿನ ಮೂಟೆ ಹೊತ್ತು ಬಂದಿದ್ದ ಕಿರುತೆರೆಯ ಜನಪ್ರಿಯ ನಟಿಯನ್ನು ಮೆಡಿಕಲ್​​ ಸರ್ಜರಿ ಬಲಿ ತೆಗೆದುಕೊಂಡಿದೆ. ಗ್ಲಾಮರ್​ ಆಗಿ ಕಾಣೋಕೆ ಏನೆಲ್ಲಾ ಹರಸಾಹಸ ಮಾಡೋ ನಟ ನಟಿಯರ ಪಾಲಿಗೆ ಸರ್ಜರಿಗಳು ಸಾವಿನ ಮನೆಯ ತೆರೆದ ಬಾಗಿಲಾಗಿವೆ. ಯೆಸ್​​, ಹಾಗಾದ್ರೆ ಯಾರೆಲ್ಲಾ ಸರ್ಜರಿ ಮಾಡ್ಸಿದ್ರು, ಏನೆಲ್ಲಾ ಅನಾಹುತ ಆಯ್ತು..? ಇಲ್ಲಿದೆ ಡೀಟೈಲ್ಸ್​​.

  • ನಟಿ ಚೇತನಾ ರಾಜ್​​ಗೆ ಮುಳುವಾಯ್ತು ಸರ್ಜರಿ

ರಂಗೀನ್​ ದುನಿಯಾ ಅಂದ್ರೇನೆ ಹಾಗೆ, ಇಲ್ಲಿ ಮಿಂಚ್ಬೇಕು ಆಂದ್ರೆ  ಕೇವಲ ಟ್ಯಾಲೆಂಟ್ ಇದ್ರೆ ಸಾಕಾಗಲ್ಲ. ಆ್ಯಕ್ಟಿಂಗ್​ ಜೊತೆಗೆ ಗ್ಲಾಮರ್​​​, ಫಿಟ್​ನೆಸ್​​ ಎಲ್ಲವೂ ಇಂಪಾರ್ಟೆಂಟ್​​. ಓಡೋ ಕಾಲದ ಜೊತೆಗೆ ತಮ್ಮ ಚಾರ್ಮಿಂಗ್​ ಉಳಿಸಿಕೊಳ್ಳಬೇಕಾದರೆ ತಮ್ಮ ಅಂದ ಚಂದದ ಬಗ್ಗೆ ಸದಾ ಕಾಳಜಿ ವಹಿಸ್ಬೇಕು. ಹಾಗಾಗಿಯೇ ಸ್ಮಾಲ್​​ ಸ್ಕ್ರೀನ್ ಇರಲಿ, ಬಿಗ್​​ ಸ್ಕ್ರೀನ್​​ ಇರಲಿ ನಟ ನಟಿಯರು ತಮ್ಮ ಬ್ಯೂಟಿ ಬಗ್ಗೆ ಸಿಕ್ಕಾಪಟ್ಟೆ ಕಾಳಜಿ ವಹಿಸ್ತಾರೆ. ಹೀಗೆ ಬ್ಯೂಟಿ ಬಗ್ಗೆ  ಕೇರ್​ ಮಾಡಲು ಹೋಗಿ ಕಿರುತೆರೆ ನಟಿಯೊಬ್ಬಳ ಉಸಿರೇ ನಿಂತು ಹೋಗಿದೆ.

ಯೆಸ್​​​…ಕಲರ್ಸ್​​ ಕನ್ನಡದ ಜನಪ್ರಿಯ ಸೀರಿಯಲ್​​ಗಳಾದ ಗೀತಾ, ದೊರೆಸಾನಿ ಸೀರಿಯಲ್​​ಗಳಲ್ಲದೆ ಸಿನಿಮಾದಲ್ಲೂ ನಟಿಸುತ್ತಿದ್ದ ಚೇತನಾ ರಾಜ್​​​ ಅದ್ಭುತ ಭವಿಷ್ಯದ ಕನಸು ಹೊತ್ತು ಕಿರುತೆರೆಗೆ ಎಂಟ್ರಿ ಕೊಟ್ಟಿದ್ದರು. ಸದಾ ತಮ್ಮ ನಟನೆ, ಬ್ಯೂಟಿ, ಫಿಟ್​ನೆಸ್​​ ಬಗ್ಗೆ ಕಾಳಜಿ ವಹಿಸ್ತಿದ್ದ ಚೇತನಾ ರಾಜ್​​ ಸ್ಕ್ರೀನ್​​ ಬಗ್ಗೆ ಸುಂದರವಾಗಿ ಕಾಣೋಕೆ ಸಿಕ್ಕಾಪಟ್ಟೆ ಡೆಡಿಕೇಷನ್​​ ಮಾಡ್ತಿದ್ರು. ಹಾಗಾಗಿ ಫ್ಯಾಟ್​ ಎಂಬ ಕಾರಣಕ್ಕೆ ಸರ್ಜರಿಗೆ ಒಳಗಾಗಿದ್ದ ಚೇತನಾ ಕ್ರೂರ ವಿಧಿಯ ಆಟಕ್ಕೆ ಬಲಿಯಾಗಿದ್ದಾರೆ.

ಬೆಂಗಳೂರಿನ ನವರಂಗ್ ಸರ್ಕಲ್ ಬಳಿಯಿರುವ ಡಾ.ಶೆಟ್ಟಿ ಕಾಸ್ಮೆಟಿಕ್​​ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೀತಿದ್ದ ಚೇತನಾ ರಾಜ್​​ ಸರ್ಜರಿ ವೇಳೆಯೇ ಸಾವನ್ನಪ್ಪಿದ್ದಾರೆ. ವೈದ್ಯರ ನಿರ್ಲ್ಯಕ್ಷವೇ ಚೇತನಾ ಸಾವಿಗೆ ಕಾರಣ ಆಂತ ಕುಟುಂಬದ ಸದಸ್ಯರು ಸುಬ್ರಮಣ್ಯ ನಗರ ಠಾಣೆಯಲ್ಲಿ ಕೇಸ್​ ದಾಖಲಿಸಿದ್ದಾರೆ.

  • ಬುಲೆಟ್​​ ಪ್ರಕಾಶ್​​ ಬಲಿತೆಗೆದುಕೊಂಡಿದ್ದ ಫ್ಯಾಟ್ ಸರ್ಜರಿ
  • ಸರ್ಜರಿಯ ನಂತ್ರ ಕುಸಿದಿತ್ತು  ರಾಗಿಣಿಯ ಡಿಮ್ಯಾಂಡ್​​

ದೈಹಿಕ ಕಸರತ್ತು ಮಾಡಿ ದೇಹವನ್ನು ದಂಡಿಸೋಕೆ ಬೇರೆ ಬೇರೆ ರೂಟ್​ಗಳಿವೆ. ಆದ್ರೆ ಕೆಲವ್ರು ಶಾರ್ಟ್​​ ಕಟ್ ​​ರೂಟ್​​ ಫಾಲೋ ಮಾಡೋಕೆ ಹೋಗಿ ತಮ್ಮ ಜೀವನವನ್ನೇ ಹಾಳು ಮಾಡಿಕೊಂಡಿದ್ದಾರೆ. ಯೆಸ್​, ಕನ್ನಡದ ಹಾಸ್ಯ ನಟ ಬುಲೆಟ್​​ ಪ್ರಕಾಶ್​​ ಎಲ್ರಿಗೂ ಗೊತ್ತು. ಡಿಫರೆಂಟ್​​ ಮ್ಯಾನರಿಸಂ, ಆಕ್ಟಿಂಗ್​ ಮೂಲಕ ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸ್ತಿದ್ದ ಪ್ರತಿಭಾವಂತ ನಟ. ತುಂಬಾ ದಪ್ಪಗಿದ್ದ ಬುಲೆಟ್​​ಗೂ ತೆಳ್ಳಗೆ ಕಾಣೋ ಆಸೆಯಿತ್ತು. ಸ್ಲಿಮ್​ ಆಗಿ ಕಾಣೋಕೆ ಸರ್ಜರಿಯನ್ನು ಮಾಡಿಸಿದ್ರು. ತೂಕ ಇಳಿಸೋ ಸರ್ಜರಿಯ ನಂತ್ರ ಅವರ ಆರೋಗ್ಯ ಸಾಕ್ಷಷ್ಟು ಹದಗೆಟ್ಟಿತ್ತು. ಇದ್ರ ಜೊತೆ ಜೊತೆಗೆ ಬಂದ ಕಿಡ್ನಿ, ಲಿವರ್​ ಸಮಸ್ಯೆಗಳು ಅವ್ರ ಪ್ರಾಣ ಪಕ್ಷಿಯನ್ನೆ ಹಾರಿಸಿದ್ವು.

ಸರ್ಜರಿಯ ನಂತ್ರ ಬುಲೆಟ್​​ಗೆ ಸಿನಿಮಾಗಳ ಆಫರ್ಸ್​​ ಕಡಿಮೆಯಾಯ್ತು. ಆರ್ಥಿಕವಾಗಿ ಸಿಕ್ಕಾಪಟ್ಟೆ ಕುಗ್ಗಿ ಹೋಗಿದ್ದ ಬುಲೆಟ್​​ ಬಾಳಿಗೆ ಮೆಡಿಕಲ್​​ ಸರ್ಜರಿಯೇ ಮುಳ್ಳಾಯ್ತು. ಇದ್ರ ಜೊತೆಯಲ್ಲೆ ಕನ್ನಡದ ತುಪ್ಪದ ಬೆಡಗಿ ಎಂದೇ ಖ್ಯಾತಿ ಪಡೆದ ಟಾಪ್​ ಮೋಸ್ಟ್​​ ನಟಿಯಾಗಿದ್ದ ರಾಗಿಣಿ ದ್ವಿವೇದಿ ಕೂಡ ಸರ್ಜರಿಗೆ ಒಳಗಾಗಿದ್ರು. ಅತಿ ವೇಗವಾಗಿ ಚಿತ್ರರಂಗದಲ್ಲಿ ಹೆಸ್ರು ಮಾಡ್ಬೇಕು ಅನ್ನೋ ಆಸೆ ರಾಗಿಣಿಯ ಹೆಗಲೇರಿತ್ತು. ಹಾಗಾಗಿಯೇ ಸಿನಿಮಾದಿಂದ ಸ್ವಲ್ಪ ಕಾಲ ದೂರವೇ ಉಳಿದ್ರು. ಬರೋಬ್ಬರಿ 15 ಕೆಜಿಯಷ್ಟು ತೂಕ ಕಡಿಮೆ ಮಾಡಿಕೊಂಡಿದ್ದ ರಾಗಿಣಿ  ದ್ವಿವೇದಿ ಎಲ್ರಿಗೂ ಅಚ್ಚರಿ ಮೂಡಿಸಿದ್ರು.

ಆದ್ರೆ ರಾಗಿಣಿಯ ಗ್ರಹಚಾರ ಸರ್ಜರಿಯ ನಂತ್ರ ಬದಲಾಗಿತ್ತು. ಮೊದಲಿಗಿದ್ದ ಚಾರ್ಮ್​ ಅವಳ ಮುಖದಲ್ಲಿ ಕಾಣಿಸಲಿಲ್ಲ. ಗೆಲುವಿನ ಸ್ಪೀಡ್​ಗೆ ಬ್ರೇಕ್​​ ಬಿತ್ತು. ಸಿನಿಮಾಗಳ ಆಫರ್​ ಕಡಿಮೆಯಾಗಿ ಹೋಯ್ತು. ನಿರ್ಮಾಪಕರ ಕಣ್ಣಿಗೆ ರಾಗಿಣಿ ಕಾಣದಾಗಿಬಿಟ್ಳು. ಅದಾದ ಮೇಲೆ ರಾಗಿಣಿ ಲೈಫಲ್ಲಿ ಏನೆಲ್ಲಾ ಆಯ್ತು ಅಂತ ನಿಮಗೆ ಗೊತ್ತೆ ಇದೆ. ಇದ್ರ ಜೊತೆಗೆ ಮೈಸೂರಿನ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್​ , ಪತ್ರಕರ್ತ ರವಿ ಬೆಳಗೆರೆ ಕೂಡ ಸರ್ಜರಿಗೆ ಒಳಗಾಗಿ ಅನಾರೋಗ್ಯಕ್ಕೆ ಒಳಗಾಗಿದ್ರು ಅನ್ನೋ ಸುದ್ದಿಯೂ ಇದೆ. ಏನೆ ಇರ್ಲಿ,ನ್ಯಾಚುರಲ್​ ಬ್ಯೂಟಿ ಬಿಟ್ಟು ಸರ್ಜರಿ ಮೂಲಕ ತೆಳ್ಳಗಾಗುವ ಪ್ರಯತ್ನ ಮಾಡುವವರಿಗೆ ಚೇತನಾ ರಾಜ್​​​​ ದುರಂತ ಪಾಠವಾಗಬೇಕಿದೆ.

ರಾಕೇಶ್​​ ಆರುಂಡಿ, ಫಿಲ್ಮ್​ ಬ್ಯೂರೋ, ಪವರ್​ ಟಿವಿ

RELATED ARTICLES

Related Articles

TRENDING ARTICLES