Wednesday, January 8, 2025

ವಿಕ್ರಾಂತ್ ರೋಣಗೆ ಆನೆಬಲ.. ಸಲ್ಲೂ- ಕರಣ್ ಸಾಥ್

ಪ್ರೇಕ್ಷಕರನ್ನ ಹೊಸ ಪ್ರಪಂಚಕ್ಕೆ ಕರೆದೊಯ್ಯಲು ಸಜ್ಜಾಗ್ತಿದೆ ಕಿಚ್ಚನ ಫ್ಯಾಂಟಮ್ ವರ್ಲ್ಡ್​. ಯೆಸ್. ವಿಕ್ರಾಂತ್ ರೋಣ ಪ್ರತೀ ದಿನ ಒಂದಿಲ್ಲೊಂದು ಸುದ್ದಿಯಿಂದ ಸಿಕ್ಕಾಪಟ್ಟೆ ಸದ್ದು ಮಾಡ್ತಿದೆ. ಬಾಲಿವುಡ್​​ನಲ್ಲಿ ಸುದೀಪ್ ಬೆನ್ನಿಗೆ ನಿಲ್ತಿರೋ ಭಾಯಿಜಾನ್ ಸಲ್ಲೂಮಿಯಾ ಹಾಗೂ ಕರಣ್ ಕಹಾನಿ ಹೇಳ್ತೀವಿ. ಈ ಸ್ಪೆಷಲ್ ಸ್ಟೋರಿ ನೀವೇ ಓದಿ.

  • ಕಿಚ್ಚ- ಸಲ್ಲು ಸ್ನೇಹದ ಪ್ರತೀಕ.. ಬ್ರದರ್ ಎಂದಿದ್ದ ಟೈಗರ್
  • ಹತ್ತು ಕೋಟಿಗೆ ವಿದೇಶಿ ಡಿಸ್ಟ್ರಿಬ್ಯೂಷನ್ ರೈಟ್ಸ್ ಸೋಲ್ಡ್..!
  • ನೆಕ್ಸ್ಟ್ ಲೆವೆಲ್ ಮೇಕಿಂಗ್​.. ರೋಣನ ಫ್ಯಾಂಟಮ್ ವರ್ಲ್ಡ್​

ಕಿಚ್ಚನ ಗತ್ತು ಆಲ್ ಇಂಡಿಯಾಗೇ ಗೊತ್ತು ಅನ್ನೋದು ಹಳೇ ಡೈಲಾಗ್. ಇದೀಗ ಸುದೀಪ್ ಗಮ್ಮತ್ತು ವಿಶ್ವಕ್ಕೆ ಗೊತ್ತು ಮಾಡೋ ಹೊತ್ತು. ಯೆಸ್. ಪ್ಯಾನ್ ವರ್ಲ್ಡ್​ ರಿಲೀಸ್​ಗೆ ತಯಾರಾಗ್ತಿರೋ ಕನ್ನಡದ ಮತ್ತೊಂದು ಮೈಲಿಗಲ್ಲು ಸಿನಿಮಾ ವಿಕ್ರಾಂತ್ ರೋಣನಿಂದ ಕಿಚ್ಚನ ಕಟೌಟ್ ವಿಶ್ವದ ಮೂಲೆ ಮೂಲೆಯಲ್ಲಿ ಬೀಳಲಿದೆ.

ನೋಡುಗರಿಗೆ ಹತ್ತಾರು ಸರ್​ಪ್ರೈಸಿಂಗ್ ಎಲಿಮೆಂಟ್ಸ್​​ನಿಂದ ಮೇಕಿಂಗ್ ಹಂತದಲ್ಲೇ ಸಖತ್ ಥ್ರಿಲ್ ನೀಡಿದೆ ವಿಕ್ರಾಂತ್ ರೋಣ. ಕಿಚ್ಚನ ಗೆಟಪ್ಸ್, ಫ್ಯಾಂಟಮ್ ವರ್ಲ್ಡ್​, ಸ್ಟೋರಿಲೈನ್, ಪಾತ್ರಗಳು, ನೈಟ್ ಎಫೆಕ್ಟ್​ನ ವಿಶ್ಯುವಲ್ ಟ್ರೀಟ್ ಹೀಗೆ ಎಲ್ಲವೂ ರೋಚಕ ಹಾಗೂ ರೋಮಾಂಚಕ.

ಸುದೀಪ್ ನಟನೆಯಲ್ಲಿ ಚಕ್ರವರ್ತಿ ಅನ್ನೋದನ್ನ ಪ್ಯಾನ್ ಇಂಡಿಯಾಗಷ್ಟೇ ಅಲ್ಲದೆ, ವಿಶ್ವದಾದ್ಯಂತ ಸಾರಲಿದ್ದಾರೆ ನಿರ್ದೇಶಕ ಅನೂಪ್ ಭಂಡಾರಿ. ನಿರ್ಮಾಪಕ ಜಾಕ್ ಮಂಜು ಈ ಸಿನಿಮಾನ ಬಹಳ ಪ್ಯಾಷನ್​ನಿಂದ ಮಾಡಿದ್ದು, ಇವ್ರ ಸಿನಿಮೋತ್ಸಾಹದ ಕಿಚ್ಚು ಪ್ರತೀ ಫ್ರೇಮ್​ನಲ್ಲೂ ರಿಫ್ಲೆಕ್ಟ್ ಆಗಲಿದೆ.

ಕನ್ನಡದ ಜೊತೆ ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿಯಲ್ಲಿ ಸಿನಿಮಾ ತಯಾರಾಗ್ತಿದೆ. ವಿಶೇಷ ಅಂದ್ರೆ ಇದೇ ಮೊದಲ ಬಾರಿ ಕನ್ನಡ ಸಿನಿಮಾವೊಂದು ಇಂಗ್ಲಿಷ್​ನಲ್ಲೂ ತಯಾರಾಗ್ತಿದೆ. ಇತ್ತೀಚೆಗೆ ವಿದೇಶಿ ವಿತರಣಾ ಹಕ್ಕುಗಳು ಸಿನಿಮಾ ರಿಲೀಸ್​ಗೂ ಮೊದಲೇ ಬರೋಬ್ಬರಿ 10 ಕೋಟಿ ದಾಖಲೆ ಮೊತ್ತಕ್ಕೆ ಸೋಲ್ಡ್ ಔಟ್ ಆಗಿತ್ತು. ಇದೀಗ ಮತ್ತೊಂದು ಧಮಾಕೇದಾರ್ ನ್ಯೂಸ್​ನೊಂದಿಗೆ ಚಿತ್ರತಂಡ ಸುದೀಪಿಯನ್ಸ್ ಜೊತೆ ಕನ್ನಡಿಗರ ದಿಲ್​ಖುಷ್ ಆಗೋ ಅಂತಹ ಖಬರ್ ನೀಡಿದೆ.

ಬಾಲಿವುಡ್​ನಲ್ಲಿ ಕಿಚ್ಚನ ಬೆನ್ನಿಗೆ ನಿಲ್ತಿದ್ದಾರೆ ಭಾಯಿಜಾನ್ ಸಲ್ಮಾನ್ ಖಾನ್ ಹಾಗೂ ಕರಣ್ ಜೋಹರ್. ಹೌದು. ಬಿಟೌನ್​​ನ ಸೂಪರ್ ಸ್ಟಾರ್ ಸಲ್ಲೂ, ಬಹುದೊಡ್ಡ ಫ್ಯಾನ್ ಫಾಲೋಯಿಂಗ್ ಇರೋ ನಟ. ಹಿಂದಿಯಲ್ಲಿ ಕಿಚ್ಚನಿಗೂ ವಿಶೇಷ ಅಭಿಮಾನಿ ಬಳವಿದ್ದು, ಸಲ್ಮಾನ್ ಖಾನ್ ಸಾಥ್ ನೀಡ್ತಿರೋದ್ರಿಂದ ಅದ್ರ ಗಾತ್ರ ಮತ್ತಷ್ಟು ದೊಡ್ಡದಾಗಲಿದೆ.

ಸುದೀಪ್ ನನ್ನ ಸಹೋದರ ಎಂದಿದ್ರು ಸಲ್ಮಾನ್ ಖಾನ್. ಹೌದು.. ದಬಾಂಗ್ 3 ಸಿನಿಮಾದಲ್ಲಿ ಒಟ್ಟಿಗೆ ನಟಿಸಿದ್ದ ಈ ಜೋಡಿ, ಬಿಗ್ ಸ್ಕ್ರೀನ್ ಮೇಲೆ ಅಕ್ಷರಶಃ ಮೋಡಿ ಮಾಡಿದ್ರು. ಬೆಂಗಳೂರಿನ ಕಿಚ್ಚನ ನಿವಾಸಕ್ಕೆ ಬಂದ ಸಲ್ಲು, ದುಬಾರಿ ಕಾರ್​ವೊಂದನ್ನ ಗಿಫ್ಟ್ ಮಾಡಿ, ಬಾದ್​ಷಾ ಸುದೀಪ್​ಗೆ ಸರ್​ಪ್ರೈಸ್ ನೀಡಿದ್ರು.

ಹತ್ತಾರು ವೇದಿಕೆಗಳಲ್ಲಿ ಪರಸ್ಪರ ಒಬ್ಬರನ್ನೊಬ್ಬರು ಕೊಂಡಾಡಿದ್ರು. ಆ ಸ್ನೇಹ, ಪ್ರೀತಿಯ ಮುಂದುವರೆದ ಭಾಗವೇ ಈ ವಿಕ್ರಾಂತ್ ರೋಣ ಪ್ರಮೋಷನ್ಸ್. ಮುಂಬೈನಲ್ಲಿ ವಿಕ್ರಾಂತ್ ರೋಣ ಚಿತ್ರದ ಪ್ರಮೋಷನ್ಸ್​ಗೆ ಸಲ್ಲು ನಿಲ್ಲಲಿದ್ದಾರಂತೆ. ಅಲ್ಲದೆ ಕರಣ್ ಜೋಹರ್ ತಮ್ಮ ಧರ್ಮ ಪ್ರೊಡಕ್ಷನ್ಸ್ ಬ್ಯಾನರ್​ನಡಿ ಸಿನಿಮಾನ ಡಿಸ್ಟ್ರಿಬ್ಯೂಟ್ ಕೂಡ ಮಾಡ್ತಿದ್ದಾರೆ. ಸಲ್ಲು- ಕರಣ್ ಕೂಡ ಆಪ್ತರು. ಹಾಗಾಗಿ ವಿಕ್ರಾಂತ್ ರೋಣ ಬಾಲಿವುಡ್​ನಲ್ಲಿ ನಿರೀಕ್ಷೆಗೂ ಮೀರಿದ ಮಟ್ಟದಲ್ಲಿ ಸೌಂಡ್ ಮಾಡೋದ್ರಲ್ಲಿ ಅನುಮಾನವೇ ಇಲ್ಲ.

ಜಾಕ್ವೆಲಿನ್ ಫರ್ನಾಂಡಿಸ್ ಕೂಡ ಚಿತ್ರದ ಪ್ರಮುಖ ಪಾತ್ರದಲ್ಲಿ ಕಾಣಸಿಗಲಿದ್ದು, ಸಲ್ಲು- ಕಿಚ್ಚನಿಗೆ ಈಕೆ ಕಾಮನ್ ಫ್ರೆಂಡ್. ಇವೆಲ್ಲದರಿಂದ ವಿಕ್ರಾಂತ್ ರೋಣ ಬಾಲಿವುಡ್ ಬಾಕ್ಸ್ ಆಫೀಸ್​​ನ ರೂಲ್ ಮಾಡಲಿದೆ. ಜುಲೈ 28ಕ್ಕೆ ಸಿನಿಮಾ ತೆರೆಗಪ್ಪಳಿಸಲಿದ್ದು, ಕನ್ನಡದ ಭಾವುಟ ಮತ್ತೊಮ್ಮೆ ಇಂಟರ್​ನ್ಯಾಷನಲ್ ಲೆವೆಲ್​ನಲ್ಲಿ ಹಾರಲಿದೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ

RELATED ARTICLES

Related Articles

TRENDING ARTICLES