Wednesday, January 22, 2025

ವಿಕ್ರಮ್ ಚಿತ್ರದಲ್ಲಿ ಕೆಜಿಎಫ್​ನ ರಾಕಿಭಾಯ್ ಗನ್ ಕಾಪಿ..?

ಬೆಸ್ಟ್ ಡೈರೆಕ್ಟರ್​ಗೆ ಬೆಸ್ಟ್ ಆ್ಯಕ್ಟರ್ ಸಿಕ್ರೆ ಅಲ್ಲೊಂದು ದಾಖಲೆ ಕಟ್ಟಿಟ್ಟ ಬುತ್ತಿ. ಆದ್ರೆ ಬೆಸ್ಟ್ ಆ್ಯಕ್ಟರ್​ಗಳೆಲ್ಲಾ ಒಂದೇ ಸಿನಿಮಾದಲ್ಲಿ ಕಾಣಿಸಿಕೊಂಡ್ರೆ, ಅದ್ರ ಎಫೆಕ್ಟ್ ಯಾವ ರೇಂಜ್​ಗೆ ಇರಲಿದೆ ಅನ್ನೋದನ್ನ ನೀವೇ ಊಹಿಸಿ. ನಮ್ಮ ರಾಕಿಭಾಯ್ ಸ್ಟೈಲ್​​ನಲ್ಲಿ ದೊಡ್ಡಮ್ಮ ಗನ್ ಹಿಡಿದು ಕಮಾಲ್ ಮಾಡ್ತಿರೋ ಕಮಲ್ ಹಾಸನ್​ ಅವರ ಈ ಸ್ಟೋರಿ ಓದಿ.

  • ಅಬ್ಬಬ್ಬಾ.. ಕಮಲ್ ಕೈಯಲ್ಲಿ ದೊಡ್ಡಮ್ಮ, ಕ್ರಾಂತಿಗೆ ಸಜ್ಜು
  • ಮೇಕಿಂಗ್ ಮಾಸ್ಟರ್ ಜೊತೆ ಫಹಾದ್, ಕಮಲ್, ಸೇತುಪತಿ
  • ಸಕಲಕಲಾವಲ್ಲಭನ ಕ್ಯಾಲಿಬರ್​ಗೆ ಹೇಳಿ ಮಾಡಿಸಿದ ಪ್ರಾಜೆಕ್ಟ್

ವಿಕ್ರಮ್.. ವಿಕ್ರಮ್.. ವಿಕ್ರಮ್. ದಿ ವೆಯ್ಟ್ ಈಸ್ ಓವರ್. ಯೂನಿವರ್ಸಲ್ ಸ್ಟಾರ್ ಕಮಲ್ ಹಾಸನ್ ಹೊಸ ಅವತಾರಕ್ಕೆ ಸಿನಿಪ್ರಿಯರು ಕ್ಲೀನ್ ಬೋಲ್ಡ್ ಆಗಿದ್ದಾರೆ. ಬಹುನಿರೀಕ್ಷಿತ ವಿಕ್ರಮ್ ಟ್ರೈಲರ್ ರಿಲೀಸ್ ಆಗಿ, ಕೆಲವೇ ಗಂಟೆಗಳಲ್ಲಿ ಮಿಲಿಯನ್ ಗಟ್ಟಲೆ ವೀವ್ಸ್​ನಿಂದ ಎಲ್ಲರ ಹುಬ್ಬೇರಿಸಿದೆ.

ಸಕಲಕಲಾವಲ್ಲಭ ಕಮಲ್ ಕ್ಯಾಲಿಬರ್​ಗೆ ಇಂತಹ ಸಿನಿಮಾಗಳು ಸಿಗಬೇಕು ಅಂತ ಎಲ್ರೂ ಮಾತನಾಡಿಕೊಳ್ಳೋ ರೇಂಜ್​ಗೆ ಟ್ರೈಲರ್ ಕಿಕ್ ಕೊಡ್ತಿದೆ. ಕಾರಣ ಚಿತ್ರದ ಮೇಕಿಂಗ್, ಪಾತ್ರಗಳು, ಡೈಲಾಗ್ಸ್ ಹಾಗೂ ಅವುಗಳ ಹಿಂದಿನ ಮಾಸ್ಟರ್​ ಡೈರೆಕ್ಟರ್ ಲೋಕೇಶ್ ಕನಗರಾಜ್. ಹೌದು.. ಇವ್ರ ಖೈದಿ ಹಾಗೂ ಮಾಸ್ಟರ್ ಸಿನಿಮಾಗಳು ಬ್ಲಾಕ್ ಬಸ್ಟರ್ ಹಿಟ್ ಆಗಿದ್ವು. ಇದೀಗ ಆ ಸಕ್ಸಸ್ ಓಟ ಹಾಗೆಯೇ ಮುಂದುವರೆಯೋ ಮನ್ಸೂಚನೆ ಸಿಕ್ಕಿದೆ.

ಔಟ್ ಅಂಡ್ ಔಟ್ ಆ್ಯಕ್ಷನ್ ಥ್ರಿಲ್ಲರ್ ಸಿನಿಮಾ ಇದಾಗಿದ್ದು, ಇಲ್ಲಿ ಕಮಲ್ ಹಾಸನ್ ಜೊತೆ ಇಡೀ ಸೌತ್ ಇಂಡಿಯಾ ಮೆಚ್ಚಿದ ಬೆಸ್ಟ್ ಆ್ಯಕ್ಟರ್​​ಗಳಿಬ್ಬರು ಅವ್ರಿಗೆ ಸಾಥ್ ನೀಡಿರೋದು ಮತ್ತೊಂದು ಇಂಟರೆಸ್ಟಿಂಗ್. ಕಮಲ್ ಹಾಸನ್ ಜೊತೆ ಮಲಯಾಳಂನ ಫಹಾದ್ ಫಾಸಿಲ್ ಹಾಗೂ ತಮಿಳಿನ ವಿಜಯ್ ಸೇತುಪತಿ ಕೂಡ ಈ ಚಿತ್ರದ ಗಮ್ಮತ್ತು ಹೆಚ್ಚಿಸಿದ್ದಾರೆ.

ಆ್ಯಕ್ಷನ್​ ಸೀಕ್ವೆನ್ಸ್​ಗಳು ಶಿಳ್ಳೆ- ಚಪ್ಪಾಳೆ ತರಿಸುವಂತಿದ್ದು, ಕಮಲ್ ಹಾಸನ್ ಗನ್ ಹಿಡಿದು ಘರ್ಜಿಸೋ ದೃಶ್ಯ ಮಾತ್ರ ಚರ್ಚೆಗೆ ಗ್ರಾಸವಾಗಿದೆ. ಹೌದು. ಕೆಜಿಎಫ್-2 ಚಿತ್ರದಲ್ಲಿ ರಾಕಿಭಾಯ್  ಯಶ್ ಹಿಡಿದ ದೊಡ್ಡಮ್ಮ ಗನ್​ನ ಇಲ್ಲಿ ಕಮಲ್ ಹಿಡಿದಿದ್ದಾರೆ. ಇದು ಕಾಪಿ ಅನ್ಬೇಕಾ ಅಥ್ವಾ ಡೈರೆಕ್ಟರ್ ಲೋಕೇಶ್ ನಮ್ಮ ನೀಲ್​ ಪ್ರಭಾವಕ್ಕೆ ಒಳಗಾಗಿ ಸ್ಫೂರ್ತಿಯಾಗಿ ತೆಗೆದುಕೊಂಡ್ರಾ ಗೊತ್ತಿಲ್ಲ.

ಅದೊಂದು ದೃಶ್ಯವನ್ನು ಹೊರತು ಪಡಿಸಿ, ಉಳಿದಂತೆ ಌಕ್ಷನ್ ಸೀಕ್ವೆನ್ಸ್​ಗಳು ನೋಡುಗರ ಎದೆ ನಡುಗಿಸುವಂತಿವೆ. ಸಿನಿಮಾ ರಿಲೀಸ್​ಗೂ ಮೊದಲೇ 112 ಕೋಟಿ ಪ್ರೀ ರಿಲೀಸ್ ಬ್ಯುಸಿನೆಸ್ ಮಾಡಿರೋ ವಿಕ್ರಮ್, ಮೂವರು ಸೂಪರ್ ಸ್ಟಾರ್​ಗಳ ಸಮಾಗಮದಿಂದ ಧೂಳೆಬ್ಬಿಸಲಿದೆ. ಮೂವರಿಗೂ ಬಹುದೊಡ್ಡ ಪ್ರೇಕ್ಷಕವರ್ಗವಿದ್ದು, ಹಿಟ್ ಡೈರೆಕ್ಟರ್ ಕಾಂಬೋ ಆಗಿರೋದ್ರಿಂದ ಸಹಜವಾಗಿಯೇ ಸಿನಿಮಾದ ನಿರೀಕ್ಷೆಗಳು ಗರಿಗೆದರಿವೆ. ಇದೇ ಜೂನ್ 3ಕ್ಕೆ ಥಿಯೇಟರ್ ಅಂಗಳಕ್ಕೆ ಬರ್ತಿರೋ ವಿಕ್ರಮ್, ಯಾವ ರೀತಿಯ ಕ್ರಾಂತಿ ಮಾಡಲಿದೆ ಅನ್ನೋದನ್ನ ಕಾದು ನೋಡಬೇಕಿದೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ

RELATED ARTICLES

Related Articles

TRENDING ARTICLES