Wednesday, January 22, 2025

ಬಿಡಿಎ ಪ್ರಾಧಿಕಾರದಲ್ಲಿ ಒಬ್ಬರಿಗೆ ಎರಡೆರಡು ಪೋಸ್ಟಿಂಗ್..!

ಬೆಂಗಳೂರು :ಬಿಡಿಎನಲ್ಲಿ ಮೇಯುವರಿಗೆ ಕಾಲ ಅನ್ನೋದು ಪದೇ ಪದೇ ಸಾಬೀತು ಆಗ್ತಿದೆ ಯಾಕೆಂದ್ರೆ ಪ್ರಭಾವಿ ಆಫೀಸರ್ಸ ನಿಯಮ ಮೀರಿ ಅಲ್ಲೇ ಉಳಿದುಕೊಳ್ತಿದ್ದಾರೆ.ಅಲ್ಲದೆ ಎರಡೆರಡು ಕಡೆ ಪೋಸ್ಟಿಂಗ್ ನಡೆಸಿ ಎಂಜಾಯ್ ಮಾಡ್ತಿದ್ದಾರೆ.

ಬಿಡಿಎ ಅಂದ್ರೆನೇ ಭ್ರಷ್ಟ ಕೂಪ.ಇಲ್ಲಿ ನಡೆಯೋ ಅಕ್ರಮ ಗಳು ಒಂದೆರಡು ಅಲ್ಲವೇ ಅಲ್ಲ ಬಿಡಿ.ಸಾಲು ಸಾಲು ಆಕ್ರಮಗಳು ನಡೆಯುತ್ತಿದ್ರೂ ಫುಲ್ ಸ್ಟಾಪ್ ಇಡೋರೇ ಇಲ್ಲ.ಸುಷ್ಮಾ ಎಂಬುವವರು ಬಿಡಿಎ ನಲ್ಲಿ ಕಾರ್ಯಪಾಲಕ ಅಭಿಯಂತರರು. ಬರೋಬ್ಬರಿ 8 ವರ್ಷದಿಂದ ಕೆಲಸ ಮಾಡ್ತಿದ್ದಾರೆ.ಪ್ರಾಧಿಕಾರಲ್ಲಿ ಇವರ ವಿರುದ್ಧ ಯಾರ್ ಮಾತನಾಡುವ ಹಾಗೆ ಇಲ್ಲ. ಅಷ್ಟರ ಮಟ್ಟಿಗೆ ಹವಾ ಸೃಷ್ಟಿಸಿದ್ದಾರೆ.ಆದ್ರೆ ಈ ಅಧಿಕಾರಿಗೆ ಎರಡೆರಡು ಹುದ್ದೆ ಕೊಟ್ಟು ಕೂರಿಸಲಾಗಿದೆ.

ಬಿಡಿಎನಲ್ಲಿ 75 ಎಂಜಿನಿಯರ್ ಗಳು ಕೆಲಸ ಮಾಡ್ತಿದ್ದಾರೆ. ಅವರಿಗೆ ಬಹುತೇಕ ಮಂದಿಗೆ ಕೆಲಸ ಇಲ್ಲದೆ ಖಾಲಿ ಹೊಡೆಯುತ್ತಿದ್ದಾರೆ. ಈಗಿದ್ರೂ ಈ ಸುಷ್ಮಾ ಅನ್ನೋ ಅಧಿಕಾರಿಗೆ ಎರಡೆರಡು ಹುದ್ದೆ ನೀಡಲಾಗಿದೆ. ಕೆಂಪೇಗೌಡ ಬಡಾವಣೆಯ ಕಾರ್ಯಪಾಲಕ ಅಭಿಯಂತರ ಹಾಗೂ ಹೌಸಿಂಗ್ ಪ್ರೊಜೆಕ್ಟ್ ನ ಕಾರ್ಯಪಾಲಕ ಅಭಿಯಂತರ ಜವಾಬ್ದಾರಿಯನ್ನ ನೀಡಲಾಗಿದೆ. ನಿಯಮದ ಪ್ರಕಾರ 3 ವರ್ಷ ದ ಮೇಲೆ ಯಾರನ್ನ ಉಳಿಸಿಕೊಳ್ಳುವಂತಿಲ್ಲ. ಆದ್ರೆ ಪ್ರಭಾವ ಬಳಿಸಿ ಬರೋಬ್ಬರಿ 8 ವರ್ಷದಿಂದ ಬಿಡಿಎ ಠಿಕಾಣಿ ಹೂಡಿದ್ದಾರೆ.

ಇನ್ನೂ ಬಿಡಿಎ ನಲ್ಲಿ ಭ್ರಷ್ಟರಿಗೆ ಹೆಚ್ಚು ಡಿಮ್ಯಾಂಡ್ ಅನ್ನೋದು ಪದೇ ಸಾಬೀತು ಆಗಿದೆ.ಈ ಅಧಿಕಾರಿ ವಿರುದ್ಧ ಈ ಹಿಂದೆ ಸಾಕಷ್ಟು ದೂರುಗಳು ದಾಖಲಾಗಿವೆ .ಹೌಸಿಂಗ್ ಪ್ರೊಜೆಕ್ಟ್ ಹಾಗೂ ಕೆಂಪೇಗೌಡ ಬಡಾವಣೆಯಲ್ಲಿ ಕೋಟ್ಯಂತರ ರೂ ಅಕ್ರಮ ಎಸಗಿರೋ ಆರೋಪ ಇದೆ.ಆದರೆ ಇದೀಗ ಎರಡೆರಡು ಹುದ್ದೆ ನೀಡಿರೋದು ಮತ್ತಷ್ಟು ಅಕ್ರಮ ಎಸಗಲು ದಾರಿ ಮಾಡಿದಂತೆ ಆಗಿದೆ.ಈ ಬಗ್ಗೆ ಸುಷ್ಮಾ ಅವರನ್ನು ಕೇಳಿದರೆ ನನಗೆ ಏನು ಅಧಿಕಾರ ಇಲ್ಲ. ಈ ಬಗ್ಗೆ ಮಾತನಾಡಲ್ಲ ಅಂತ ಓಡಿಹೋಗ್ತಾರೆ.

ಒಟ್ಟಿನಲ್ಲಿ ಬಿಡಿಎನಲ್ಲಿ ಚನ್ನಾಗಿ ದುಡ್ಡ ಮಾಡಬಹುದು ಅಂತ ಆಧಿಕಾರಿಗಳ ರಾಜಕರಣಿಗಳ ಪ್ರಭಾವ ಬಳಿಸಿ ಪ್ರಾಧಿಕಾರಕ್ಕೆ ಬಂದು ಸೇರುತ್ತಾರೆ.ಇಂತಹ ಅಧಿಕಾರಿಗಳಿಂದ ಈಗಾಗಲೇ ಕುಲಗೆಟ್ಟು ಹೋಗಿರುವ ಬಿಡಿಎಗೆ ಇನ್ನಷ್ಟು ಮಸಿ ಬಳೆಯುವ ಕೆಲಸವನ್ನ ಅಧಿಕಾರಿಗಳು ಮಾಡ್ತಿದ್ದಾರೆ. ಬಿಡಿಎ ನಲ್ಲಿ ಕಾನೂನು ಉಲ್ಲಂಘಿಸಿ ಸೇವೆ ಸಲ್ಲಿಸಿದ್ರು ಯಾವದೇ ಕ್ರಮ ಆಗುತ್ತಿಲ್ಲ. ಏನು ಕೆಲಸ ಇಲ್ಲದಿದೂ ಮತ್ತೆ ಪ್ರಭಾವಿಗಳ ಮೂಲಕ ಪ್ರಾಧಿಕಾರಕ್ಕೆ ಸೇರ್ಪಣೆ ಆಗುತ್ತಿದ್ರೂ ಬಿಡಿಎ ಅಧ್ಯಕ್ಷರು ಸುಮ್ಮನೆ ಇರೋದು ಹಲವು ಅನುಮಾನಕ್ಕೆ ಕಾರಣವಾಗಿದೆ.

RELATED ARTICLES

Related Articles

TRENDING ARTICLES