Monday, December 23, 2024

ಜ್ಞಾನವಾಪಿ ಮಸೀದಿಯಲ್ಲಿ ಶಿವಲಿಂಗ ಪತ್ತೆ..!

ಉತ್ತರ ಪ್ರದೇಶ: ದೇಶಾದ್ಯಂತ ಸದ್ದು ಮಾಡ್ತಿರುವ ಜ್ಞಾನವಾಪಿ ಮಸೀದಿ ಸರ್ವೇ ಕಾರ್ಯ ಮುಗಿದಿದೆ.. ಇನ್ನೇನು ಕೋರ್ಟ್‌ ಕೊಟ್ಟಿರುವ ಗಡುವು ಬಂದಿದ್ದು, ಅಂತಿಮ ವರದಿ ಸಲ್ಲಿಸಲು ಎಲ್ಲಾ ತಯಾರಿ ನಡೆದಿದೆ.. ಹೀಗಾಗಿ, ದೇಶದ ಚಿತ್ತ ಉತ್ತರ ಪ್ರದೇಶದ ವಾರಣಸಿ ಕೋರ್ಟ್‌ನತ್ತ ನೆಟ್ಟಿದೆ. ಈ ಮಧ್ಯೆ, ಕೋರ್ಟ್‌ಗೆ ವರದಿ ಸಲ್ಲಿಸುವ ಮುಂಚೆಯೇ ಸದ್ದು ಮಾಡ್ತಿರೋದು ಶಿವಲಿಂಗ ಸಿಕ್ಕಿರುವ ವಿಚಾರ. ಹೌದು, ವಿಡಿಯೋ ಸರ್ವೇ ವೇಳೆ ಶಿವಲಿಂಗ ಪತ್ತೆಯಾಗಿದ್ದು, ಬಾಬಾ ಮಿಲ್‌ ಗಯಾ ಎಂದು ಹಿಂದೂ ಸಂಘಟನೆ ಕಾರ್ಯಕರ್ತರು ಹರ್ಷೋದ್ಘಾರ ವ್ಯಕ್ತಪಡಿಸಿದ್ದಾರೆ.

ಮಸೀದಿಯ ವೀಡಿಯೋ ಚಿತ್ರೀಕರಣವು ಪೂರ್ಣಗೊಂಡಿದ್ದು ನಂದಿಯ ಎದುರಿನಲ್ಲಿರುವ ಬಾವಿಯಲ್ಲಿ ಪುರಾತನ ಶಿವಲಿಂಗ ಪತ್ತೆಯಾಗಿದೆ ಎಂದು ಹೇಳಲಾಗ್ತಿದೆ. ಮಸೀದಿಯ ಒಳಗೆ ನಡೆಸಲಾದ ಸಮೀಕ್ಷೆಯು ಮಸೀದಿಯು ಈ ಮುಂಚೆ ಮಂದಿರವಾಗಿತ್ತು ಎಂಬ ವಾದ ದೃಢೀಕರಿಸುತ್ತಿದೆ ಅಂತ ಹೇಳಲಾಗುತ್ತಿದೆ. ಇದೀಗ ಸರ್ವೆ ವೇಳೆ ಮಂದಿರದೊಳಗೆ ಶಿವಲಿಂಗ ಪತ್ತೆಯಾಗಿದೆ ಎನ್ನಲಾಗಿದೆ. ಮೊಘಲ್ ದೊರೆ ಔರಂಗಜೇಬ್ ಕಾಶಿ ವಿಶ್ವನಾಥ ಮಂದಿರದ ಭಾಗವೊಂದನ್ನು ಕೆಡವಿ ಜ್ಞಾನವಾಪಿ ಮಸೀದಿ ನಿರ್ಮಿಸಿದ್ದ ಎನ್ನಲಾಗಿದೆ.

ಜ್ಞಾನವಾಪಿ ಮಸೀದಿಯ ವೀಡಿಯೋ ಚಿತ್ರೀಕರಣವು ಪೂರ್ಣಗೊಂಡಿದ್ದು ನಂದಿಯ ಎದುರಿನಲ್ಲಿರುವ ಬಾವಿಯಲ್ಲಿ ಪುರಾತನ ಶಿವಲಿಂಗ ಪತ್ತೆಯಾಗಿದೆ ಎನ್ನಲಾಗಿದೆ.

ಸರ್ವೇ ಪೂರ್ಣಗೊಂಡಿದ್ದು, ಕೋರ್ಟ್‌ಗೆ ವರದಿ ಸಲ್ಲಿಸಬೇಕಿದೆ. ಇನ್ನು, ಶಿವಲಿಂಗದ ರಕ್ಷಣೆ ಕೋರಿ ಸಿವಿಲ್ ನ್ಯಾಯಾಲಯಕ್ಕೆ ಹೋಗುವುದಾಗಿ ವಕೀಲ ವಿಷ್ಣು ಜೈನ್ ಹೇಳಿದ್ದಾರೆ. ನಂದಿ ಕಡೆ ಮುಖ ಮಾಡಿರುವ ಶಿವಲಿಂಗ ಇದಾಗಿದ್ದು, 12 ಅಡಿ 8 ಇಂಚು ವ್ಯಾಸವನ್ನು ಹೊಂದಿದೆ ಹಿಂದೂ ಬಣದ ಮತ್ತೊಬ್ಬ ವಕೀಲ ಮದನ್ ಮೋಹನ್ ಯಾದವ್ ಹೇಳಿದ್ದಾರೆ. ಭಾರೀ ಭದ್ರತೆ ನಡುವೆ ನಡೆದ ಸಮೀಕ್ಷೆಯ ವರದಿಯನ್ನು ಅಡ್ವೊಕೇಟ್ ಕಮಿಷನರ್ ನ್ಯಾಯಾಲಯಕ್ಕೆ ಸಲ್ಲಿಸಲಿದ್ದಾರೆ.

ವಾರಾಣಸಿಯ ಕಾಶಿ ವಿಶ್ವನಾಥ ಮಂದಿರದ ಬಳಿಯ ಜ್ಞಾನವಾಪಿ ಮಸೀದಿಯಲ್ಲಿ ಶಿವಲಿಂಗ ಪತ್ತೆಯಾಗಿರುವುದು ಸಂತಸದ ಸುದ್ದಿ ಎಂದು ಉತ್ತರ ಪ್ರದೇಶದ ಉಪ ಮುಖ್ಯಮಂತ್ರಿ ಕೇಶವ ಪ್ರಸಾದ್ ಮೌರ್ಯ ಹೇಳಿದ್ದಾರೆ.
ಜ್ಞಾನವಾಪಿ ಸಂಕೀರ್ಣದ ಪಶ್ಚಿಮ ಗೋಡೆಯ ಮೇಲೆ ಹಿಂದೂ ದೇವಾಲಯದ ಅವಶೇಷಗಳು ಗೋಚರಿಸಿತ್ತು. ಇದಕ್ಕಾಗಿ ಸೋಮವಾರ ನಾಲ್ಕನೇ ಬೀಗ ತೆರೆಯಲಾಗಿತ್ತು. ಶನಿವಾರ ನಡೆದ ಸಮೀಕ್ಷೆ ವೇಳೆ ಮೊದಲ ಮೂರು ಕೊಠಡಿ ತೆರೆಯಲಾಗಿತ್ತು. ನಿನ್ನೆ ಶೇಕಡ 65ರಷ್ಟು ಮುಗಿದಿದ್ದ ವಿಡಿಯೊ ಸಮೀಕ್ಷೆ ಇದೀಗ ಸಂಪೂರ್ಣಗೊಂಡಿದ್ದು, ಕೋರ್ಟ್‌ಗೆ ಸರ್ವೇ ವರದಿ ಸಲ್ಲಿಸಲಾಗುತ್ತಿದೆ.

RELATED ARTICLES

Related Articles

TRENDING ARTICLES