ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಲ್ಲಿ ಓಡಾಡಿದಲೆಲ್ಲಾ ಗುಂಡಿ ದರ್ಶನವಾಗುತ್ತಿದ್ದು, ವಾಹನ ಸವಾರರಿಗೆ ಯಮಸ್ವರೂಪಿಯಾಗಿ ನಿಂತಿದೆ.
ರಾಜಧಾನಿ ಬೆಂಗಳೂರಿನಲ್ಲಿ 9,207 ರಸ್ತೆ ಗುಂಡಿಗಳು ಪತ್ತೆಯಾಗಿದ್ದು, ಆ್ಯಪ್ ಮೂಲಕ ಗುಂಡಿಗಳನ್ನು ಪತ್ತೆ ಹಚ್ಚಿದ ಪಾಲಿಕೆ. ಪೂರ್ವ ವಲಯದಲ್ಲಿ ಅತಿ ಹೆಚ್ಚು ಗುಂಡಿಗಳು ಪತ್ತೆಯಾಗಿದ್ದು, ಗುಂಡಿಮುಕ್ತ ರಸ್ತೆಗಳಿಗೆ ಬಿಬಿಎಂಪಿ ಆ್ಯಪ್ ಮುಖಾಂತರ ಮೊರೆಹೋಗಿದೆ.
‘ಫಿಕ್ಸ್ ಮೈ ಸ್ಟ್ರೀಟ್’ ಎಂಬ ಆ್ಯಪ್ ಡೆವೆಲಪ್ ಮಾಡಿರುವ ಬಿಬಿಎಂಪಿ ಇಷ್ಟು ದಿನ ಈ ಆ್ಯಪ್ ಬಳಸಲು ಅಧಿಕಾರಿಗಳಿಗೆ ಮಾತ್ರ ಅನುಮತಿ ಇತ್ತು ಆದರೆ ಇದೀಗ ‘ಫಿಕ್ಸ್ ಮೈ ಸ್ಟ್ರೀಟ್’ ಆ್ಯಪ್ ಸಾರ್ವಜನಿಕರಿಗೂ ಲಭ್ಯವಾಗಿದ್ದು, ಯಾವ ರಸ್ತೆಯಲ್ಲಿ ಎಷ್ಟು ಗುಂಡಿ ಇವೆ..? ಎಷ್ಟು ಗುಂಡಿ ಮುಚ್ಚಲಾಗಿದೆ ..? ಪಾಟ್‌ಹೋಲ್ ಕುರಿತು ಸಂಪೂರ್ಣ ಮಾಹಿತಿ ನೀಡಲಿರುವ ಆ್ಯಪ್ ಪ್ರತಿ ಗುಂಡಿಗಳ ಲೊಕೇಶನ್‌ನನ್ನು ಈ ಆ್ಯಪ್‌ನಲ್ಲಿ ಎಂಟ್ರಿ ಮಾಡಬಹುದು. ಸಾರ್ವಜನಿಕರು ಪಾಟ್‌ಹೋಲ್ ಕಂಡಲ್ಲಿ ನೇರವಾಗಿ ಈ ಆ್ಯಪ್ಗೆ ಅಪ್ಲೋಡ್ ಮಾಡಬಹುದು, ಅಪ್ಲೋಡ್ ಮಾಡಿದ ರಸ್ತೆ ಗುಂಡಿಯನ್ನ AE ಸರ್ಟಿಫೈ ಮಾಡ್ತಾರೆ. ಸರ್ಟಿಫೈ ಮಾಡಿದ ತಕ್ಷಣ ಆಟೋಮ್ಯಾಟಿಕ್ ವರ್ಕ್ ಆರ್ಡರ್‌ಗೆ ಜನರೇಟ್ ಆಗುತ್ತೆ ಬಳಿಕ ಮಾಹಿತಿ ಬ್ಯಾಚ್ಮಿಕ್ಸ್ ಕಂಟ್ರ್ಯಾಕ್ಟರ್ ಬಳಿಗೆ ಹೋಗಲಿದೆ ಮೇಜರ್ ರೋಡ್ ಗುಂಡಿಗಳಿದ್ರೆ ಫೈಥಾನ್ ಮಿಷನ್ ಅವರಿಗೆ ಹೋಗುತ್ತದೆ.
ಎಲ್ಲೆಲ್ಲಿ ಎಷ್ಟೆಷ್ಟು ಗುಂಡಿ..?
ಬೆಂಗಳೂರು ಪೂರ್ವ-2066
ಬೆಂಗಳೂರು ದಕ್ಷಿಣ -1,414
ಬೆಂಗಳೂರು ಪಶ್ಚಿಮ-1,232
ಬೊಮ್ಮನಹಳ್ಳಿ- 1,076
ದಾಸರಹಳ್ಳಿ- 867
ಯಲಹಂಕ-755
ಮಹದೇವಪುರ-729