Wednesday, January 22, 2025

ಆರೋಗ್ಯ ಸಚಿವರೇ ನಿಮಗೆ ಜನರ ಆರೋಗ್ಯದ ಬಗ್ಗೆ ಕಾಳಜಿ ಇಲ್ವಾ..?

ಬೆಂಗಳೂರು :ಮಾರ್ಚ್ 16 ನ ಪ್ರತಿ ವರ್ಷ ರಾಷ್ಟ್ರೀಯ ಡೆಂಗ್ಯೂ ದಿನವಾಗಿ ಆಚರಿಸಲಾಗುತ್ತದೆ.. ಈ ಮೂಲಕ ಜನರನ್ನು ಜಾಗೃತಗೊಳಿಸಲಾಗುತ್ತೆ ಆದ್ರೆ ಆರೋಗ್ಯ ಇಲಾಖೆಯ ಸಚಿವರಿಗೆ ಮಾತ್ರ ಜನರ ಮೇಲೆ ಕಾಳಜಿ ಇಲ್ಲ ಅನ್ನೋದು ಸ್ಪಷ್ಟವಾಗಿದೆ. ಸಿನಿಮಾ ಪ್ರಮೋಷನ್ ಗಳಲ್ಲಿ ಕಾಣಿಸಿಕೊಳ್ಳುವ ಸುಧಾಕರ್ ಆರೋಗ್ಯ ಇಲಾಖೆಯ ಕಾರ್ಯಕ್ರಮಗಳಲ್ಲಿ ಅಬ್ಸೆಂಟ್ ಇರುತ್ತಾರೆ.

ರಾಜ್ಯದಲ್ಲಿ ಕೊರೊನಾ ನಡುವೆಯೂ ಡೆಂಗ್ಯೂ ಪ್ರಕರಣಗಳಲ್ಲಿ ಭಾರೀ ಏರಿಕೆ ಕಂಡು ಬಂದಿದ್ದು, ಆರೋಗ್ಯ ಇಲಾಖೆ ಇದೀಗ ಕೋವಿಡ್‌ ಜತೆ-ಜತೆಗೆ ಸಾಂಕ್ರಾಮಿಕ ರೋಗಗಳ ನಿಯಂತ್ರಣಕ್ಕೆ ಮುಂದಾಗಬೇಕಿದೆ . ಅದರಲ್ಲೂ ಕೂಡ ಮಳೆ ಗಳದಲ್ಲಿ ಡೆಂಗ್ಯೂ ಪ್ರಕರಣಗಳ ಸಂಖ್ಯೆ ಜಾಸ್ತಿಯಾಗುತ್ತೆ . ಹೀಗಾಗಿ ಇಂದು ಬಿಬಿಎಂಪಿ ವ್ಯಾಪ್ತಿಯಲ್ಲಿ ರಾಷ್ಟ್ರೀಯ ಡೆಂಗ್ಯೂ ದಿನವನ್ನು ಆಚರಿಸಿ ಜಾಗೃತಿ ಗೊಳಿಸಲಾಯಿತು .

ಆದ್ರೆ ಇವತ್ತಿನ ಕಾರ್ಯಕ್ರಮಕ್ಕೆ ಆರೋಗ್ಯ ಇಲಾಖೆಯ ಸಚಿವರು ಬರೋದಾಗಿ ನೆನ್ನೆಯೇ ಸಮಯ ನಿಗದಿ ಮಾಡಲಾಗಿತ್ತು . ಡೆಂಘ್ಯೂ ಜಾಗೃತಿ ಅಭಿಯಾನದ ಅಂಗವಾಗಿ ಮ್ಯಾರಥಾನ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಇದಕ್ಕೆ ಚಾಲನೆ ನೀಡಲು ಸಚಿವರು ಈಗ ಬರುತ್ತಾರೆ , 10 ನಿಮಿಷ ಲೇಟ್ ಆಗಬಹುದು ಅಂತ ಸುಮಾರು 1.30 ಗಂಟೆಗಳ ಕಾಲ ಆಶಾ ಕಾರ್ಯಕರ್ತೆಯರು , ಸಮಜಸೇವಕರು ಕಾದು ಕಾದು ಸುಸ್ತಾದ್ರು. ಇನ್ನು ಸಚಿವರು ಬರಲ್ಲ ಅಂತ ತಿಳಿದ ಮೇಲೆ ಬಿಬಿಎಂಪಿ ಆರೋಗ್ಯ ಸಚಿವರು ಮ್ಯಾರಥಾನ್ ಗೆ ಚಾಲನೆ ನೀಡಿದ್ರು .

ಇನ್ನು ರಾಜ್ಯದಲ್ಲಿ ಕಳೆದ ವರ್ಷ 2021ರಲ್ಲಿ 7393 ಡೆಂಗ್ಯೂ ಪ್ರಕರಣ ವರದಿಯಾಗಿದೆ. ಅತ್ಯಧಿಕ ಪ್ರಕರಣ ಬೆಂಗಳೂರು ನಗರದಲ್ಲಿ 1,629 ಪ್ರಕರಣಗಳು ದಾಖಲಾಗಿದೆ. ಪ್ರಸ್ತುತ ನಗರದಲ್ಲಿ 2022ರ ಎಪ್ರಿಲ್‌ ಅಂತ್ಯಕ್ಕೆ 1,185 ಪ್ರಕರಣ ವರದಿಯಾಗಿದೆ. ಹೀಗಾಗಿ ಮಳೆಗಲಾದಲ್ಲಿ ಮಳೆ ನೀರು ನಿಲ್ಲದಂತೆ , ಸೊಳ್ಳೆಗಳು ಉತ್ಪತ್ತಿ ಆಗದಂತೆ ನೋಡಿಕೊಳ್ಳಬೇಕಿದೆ

ಒಟ್ಟಾರೆ ಸಚಿವರು ಸುಧಾಕರ್ ಅವರಿಗೆ RRR ಸಿನಿಮಾ ಪ್ರೀ ರಿಲೀಸ್ , ಖಾಸಗಿ ಆಸ್ಪತ್ರೆಗಗಳ ಉದ್ಘಾಟನೆಗೆ ಸಮಯ ಇರುತ್ತೆ ಆದ್ರೆ ತಮ್ಮದೇ ಇಲಾಖೆಯ ಉದ್ಘಾಟನನೆ ಹಾಗೂ ಜಾಗೃತಿ ಅಭಿಯಾನಗಳನ್ನು ನಿರ್ಲಕ್ಷ್ಯ ಮಾಡಿತ್ತಾರೆ .ಕೇವಲ ಇವತ್ತಿನ ಕಾರ್ಯಕ್ರಮ ಒಂದೇ ಅಲ್ಲ ಬಹುತೇಕ ಸರ್ಕಾರಿ ಕಾರ್ಯಕ್ರಮಕ್ಕೆ ಲೇಟ್ ಆಗಿ ಬರೋದು ಅಥವಾ ಕೊನೆ ಕ್ಷಣದಲ್ಲಿ ಪ್ಲಾನ್ ಬಡಳಿಸುತ್ತಾರೆ . ಹೀಗಾಗಿ ಅರೋಗ್ಯ ಸಚಿವ ಸುಧಾಕರ್ ಅವರ ನಡೆ ಈಗ ಆಕ್ರೋಶಕ್ಕೆ ಕಾರಣ ಆಗಿದೆ.

RELATED ARTICLES

Related Articles

TRENDING ARTICLES