Monday, December 23, 2024

ನಾವು ದೇಶಭಕ್ತರು ರಾಷ್ಟ್ರಕ್ಕೆ ಬದ್ಧರಾಗಿರುತ್ತೇವೆ : ಪ್ರಮೋದ್​ ಮುತಾಲಿಕ್​

ಬಾಗಲಕೋಟೆ : ಮಡಿಕೇರಿಯ ಪೊನ್ನಂಪೇಟೆಯಲ್ಲಿ ಭಜರಂಗದಳದವರು ಕ್ಯಾಂಪ್ ನಲ್ಲಿ 5 ಇಂಚಿನ ಮರದ ತ್ರಿಶೂಲ ದೀಕ್ಷೆ ಮಾಡಿದ್ದಾರೆ ಎಂದು ಜಮಖಂಡಿಯಲ್ಲಿ ಶ್ರೀರಾಮಸೇನೆ ಮುಖಂಡ ಪ್ರಮೋದ ಮುತಾಲಿಕ್ ಹೇಳಿದ್ದಾರೆ.

ನಗರದಲ್ಲಿಂದು ಮಡಿಕೇರಿಯಲ್ಲಿ ತ್ರಿಶೂಲ ದೀಕ್ಷೆ ಮಾಡುತ್ತಿರೋ ವಿಚಾರದ ಬಗ್ಗೆ ಮಾತನಾಡಿದ ಅವರು, ಮಡಿಕೇರಿಯ ಪೊನ್ನಂಪೇಟೆಯಲ್ಲಿ ಭಜರಂಗದಳದವರು ಕ್ಯಾಂಪ್ ನಲ್ಲಿ 5 ಇಂಚಿನ ಮರದ ತ್ರಿಶೂಲ ದೀಕ್ಷೆ ಮಾಡಿದ್ದಾರೆ. ಏರಗನ್ ಸಹ ಮಾಡಿದ್ದಾರೆ. ಇದೇನು ಕಾನೂನು ಬಾಹೀರ ಅಲ್ಲ. ಯುವಕರಲ್ಲಿ ಕ್ಷಾತ್ರತ್ವ, ಧೈಯ೯ ಸ್ಥೈಯ೯ಕ್ಕಾಗಿ ತುಂಬುವುದಕ್ಕಾಗಿ ಮಾಡಿದ್ದಾರೆ ಎಂದು ಹೇಳಿದರು.

ಅದುವಲ್ಲದೇ, ಇದೇನು ಹೊಸದೇನಲ್ಲ, ನಾವು ಹಿಂದೆ ಭಜರಂಗದಳ ಇದ್ದಾಗಲೂ ಮಾಡಿದ್ದೇವೆ. ಇದೇನು ಕಾನೂನು ಬಾಹೀರವಲ್ಲ, ದೇಶದ್ರೋಹ ಅಲ್ಲ. ಕಾನೂನು ಬದ್ಧವಾಗಿ ಯುವಕರಲ್ಲಿ ದೇಶಭಕ್ತಿಯನ್ನ ಸ್ಥೈಯ೯ವನ್ನ ನೀಡುತ್ತಿದ್ದಾರೆ. ಮಿಲಿಟರಿ ಸೇರುವ ಯುವಕರಿಗೆ ಈ ರೀತಿಯ ತರಬೇತಿ ಕೊಟ್ಟರೆ ಮಿಲಿಟರಿಗೆ ಸುಲಭವಾಗಿ ಸೆಲೆಕ್ಟ್ ಆಗ್ತಾರೆ. ಕೆಲವರು ಆಗಿದ್ದಾರೆ. ನಮ್ಮ ಶ್ರೀರಾಮಸೇನೆಯಿಂದ ಶಾರೀರಿಕವಾಗಿ ಟ್ರೈನಿಂಗ್ ಕೊಟ್ಟವರೇ ಅಪಾರ ಜನ ಮಿಲಿಟರಿ ಸೇರಿದ್ದಾರೆ.ಇದೇನು ತಪ್ಪಲ್ಲ ದೇಶಹಿತಕ್ಕೋಸ್ಕರ ದೇಶಭಕ್ತಿ ಹಿನ್ನೆಲೆ ಮಾಡಿದಂತ ತರಬೇತಿ ಇದೆ, ಇದು ತಪ್ಪಲ್ಲ. ಆಪಾದನೆ ಮಾಡುತ್ತಿರೋ PFI & SDPI ಅವರಿಗೆ ನಾಚಿಕೆ ಮಾನ ಮಯಾ೯ದೆ ಇಲ್ಲ ಎಂದು ಗುಡುಗಿದರು.

ಇನ್ನು, ನೀವೆಲ್ಲಾ ಭಯೋತ್ಪಾದಕರಿದ್ದೀರಿ, ದೇಶದ್ರೋಹಿಗಳಿದ್ದೀರಿ. ಒಂದು ವಾರದ ಹಿಂದೆಯಷ್ಟೇ ಕೇರಳ ಹೈಕೋರ್ಟ್ ಚೀ ಥೂ ಅಂತ ಛೀಮಾರಿ ಹಾಕಿದೆ. ನೀವೆಲ್ಲಾ ಉಪದೇಶ ಮಾಡ್ತೀರಿ ನಮಗೆ ನಿಮಗೆ ಮಾನ ಮಯಾ೯ದೆ ಅಲ್ಲ ದೇಶದ ಕಾನೂನು ಮುರಿದು ಕೊಲೆಗಳನ್ನ ಮಾಡುತ್ತಿದ್ದೀರಿ. ಬಾಂಬ್‌ಗಳನ್ನು ಎಸೆಯುತ್ತಿದ್ದೀರಿ ಪಿಸ್ತೂಲ್​ಗಳಿಂದ ಹಿಂದೂ ನಾಯಕರನ್ನ ಕೊಲೆ ಮಾಡಿದ್ದೀರಿ. ನಿಮ್ಮ ಉಪದೇಶ ನಮಗೆ ಬೇಕಾಗಿಲ್ಲ. ನಾವು ದೇಶಭಕ್ತರಾಗಿದ್ದೇವೆ, ದೇಶಕ್ಕೆ ಬದ್ಧರಾಗಿರುತ್ತೇವೆ. ಇನ್ಮುಂದೆ ನಿಮ್ಮ ಕನಸು ಇಲ್ಲಿ ನಡೆಯೋದಿಲ್ಲ ಅನ್ನೋ ಎಚ್ಚರಿಕೆ ಕೊಡ್ತೀನಿ ಎಂದು ಬಾಗಲಕೋಟೆ ಜಿಲ್ಲೆಯ ಜಮಖಂಡಿಯಲ್ಲಿ ಪ್ರಮೋದ ಮುತಾಲಿಕ್ ಹೇಳಿದರು.

RELATED ARTICLES

Related Articles

TRENDING ARTICLES