ಬೆಂಗಳೂರು : ಉರ್ದು ಶಾಲೆಯಲ್ಲಿ ಈ ಹಿಂದಿನಿಂದಲೂ ರಾಷ್ಟ್ರಗೀತೆ ಹಾಡುತ್ತಾ ಬರಲಾಗುತ್ತಿದೆ. ರಾಷ್ಟ್ರಗೀತೆ ಹಾಡುತ್ತಿಲ್ಲಾ ಎಂಬುದು ಸುಳ್ಳು ಆರೋಪ ಎಂದು ಪ್ರಮೋದ್ ಮುತಾಲಿಕ್ಗೆ ಶಾಸಕ ಜಮೀರ್ ಅಹ್ಮದ್ ಖಾನ್ ತಿರುಗೇಟು ನೀಡಿದ್ದಾರೆ.
ಮದರಾಸಗಳಲ್ಲಿ ರಾಷ್ಟ್ರಗೀತೆ ಕಡ್ಡಾಯ ವಿಚಾರಕ್ಕೆ ಸಂಬಂಧಿಸಿದಂತೆ ನಗರದಲ್ಲಿಂದು ಮಾತನಾಡಿದ ಅವರು, ರಾಷ್ಟ್ರಗೀತೆಯನ್ನು ಉರ್ದು ಶಾಲೆಯಲ್ಲಿ ಹಾಡಲಾಗುತ್ತಿದೆ. ನಾವು ಈ ಹಿಂದಿನಿಂದಲೂ ಹಾಡಿಕೊಂಡು ಬರ್ತಾ ಇದ್ದೇವೆ. ಆದರೆ, ಬೇಕೆಂದೇ ಉರ್ದು ಶಾಲೆಯಲ್ಲಿ ರಾಷ್ಟ್ರಗೀತೆ ಹಾಡುತ್ತಿಲ್ಲ ಎನ್ನೋ ವಿವಾದ ಸೃಷ್ಠಿಸಲಾಗುತ್ತಿದೆ ಎಂದರು.
ಮುತಾಲಿಕ್ ಕಡೆಯಿಂದ ಹೇಳಿಸಿಕೊಂಡು ನಾವು ಹಾಡಬೇಕಿಲ್ಲ ? ಇದೆಲ್ಲಾ ಮುಂಬರುವ ವಿಧಾನಸಭಾ ಚುನಾವಣೆಯ ಗಿಮಿಕ್ ಅಷ್ಟೇ. ಈಗ ಅದನ್ನೆಲ್ಲಾ ನಾನು ಮಾತನಾಡೋದಿಲ್ಲ. ಮುಂದಿನ ದಿನಗಳಲ್ಲಿ ಈ ವಿಚಾರವಾಗಿ ಮಾತನಾಡುವೆ ಎಂದರು.
ಅಲ್ಲದೇ ರಾಷ್ಟ್ರಗೀತೆ ಬಗ್ಗೆ ನಮಗೂ ಗೌರವ ಇದೆ. ರಾಷ್ಟ್ರಗೀತೆ ಕಡ್ಢಾಯ ಮಾಡಿದರೆ ತಪ್ಪಿಲ್ಲ ಮತ್ತು ಮುಸ್ಲಿಮರು ಕೂಡ ರಾಷ್ಟ್ರಗೀತೆ ಹಾಡ್ತಾರೆ, ಸ್ಕೂಲ್ ಕಾರ್ಯಕ್ರಮದಲ್ಲಿ ರಾಷ್ಟ್ರಗೀತೆ ಮೂಲಕವೇ ಕಾರ್ಯಕ್ರಮವನ್ನು ಆರಂಭ ಮಾಡುತ್ತೇವೆ ಎಂದು ಮದರಸಾಗಳಲ್ಲಿ ರಾಷ್ಟ್ರಗೀತೆ ಬಗ್ಗೆ ಜಮೀರ್ ಅವರು ಸ್ಪಷ್ಟನೆ ನೀಡಿದರು.