ಬೆಂಗಳೂರು: ಹನಿಟ್ರ್ಯಾಪ್ ಗೆ ಬಿಜೆಪಿ ಮುಖಂಡ ಬಲಿಯಾದ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ.
ಕೆ ಆರ್ ಪುರಂನ ರೇಖಾ ವಿನೋದ್ ಹಾಗೂ ಸ್ಪಂದನ ಎಂಬುವರು ಅಶ್ಲೀಲ ಪೋಟೊಗಳನ್ನ ಇಟ್ಟುಕೊಂಡು ಬ್ಲಾಕ್ ಮೇಲ್ ಮಾಡುತ್ತಿದ್ದರು ಎಂದು ಡೆತ್‌ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಅನಂತರಾಜು ಈ ಹಿಂದೆಯೂ ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನಪಟ್ಟಿದ್ದ. ಪದೇ ಪದೇ ಹಣಕ್ಕೆ ರೇಖಾ ಹಾಗೂ ಟೀಮ್ ಬೇಡಿಕೆ ಇಡುತ್ತಿದ್ದರು ಇದರಿಂದ ಗಂಡ ನೇಣಿಗೆ ಶರಣಾಗಿದ್ದಾರೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.
ಫೇಸ್ ಬುಕ್ ಮೂಲಕ ಪರಿಚಯ ಆಗಿದ್ದ ರೇಖಾ, ನಂತರ ಗಂಡನ ಅಮಾಯಕತೆಯನ್ನು ಬಳಸಿಕೊಂಡಿದ್ದಾರೆ. ವಿನೋದ್ ಹಾಗೂ ಸ್ಮಂದನ ಎಂಬುವವರ ಜೊತೆ ಸೇರಿ ಸಂಚು ಮಾಡಿದ್ದಾರೆ. ಹಾಗೆನೇ ಖಾಸಗಿ ಫೋಟೋ ಹಾಗೂ ವೀಡಿಯೋ ಇಟ್ಟುಕೊಂಡು ಬ್ಲಾಕ್ ಮೇಲ್ ಮಾಡಿದ್ದಾರೆ ಎಂದು ಅನಂತರಾಜು ಹೆಂಡತಿ ದೂರು ನೀಡಿದ್ದಾರೆ.
ಸುಮ ನನ್ನನ್ನು ಕ್ಷಮಿಸು ನಿನಗೆ ಮೋಸ ಮಾಡಿದ್ದೇನೆ ನಿನ್ನಿಂದ ಕ್ಷಮೆ ಕೇಳಲು ಅರ್ಹನಲ್ಲ, ಹೆಣ್ಣಿನ ಸಹವಾಸ ಮಾಡಿದ್ದೇನೆ. ಅವಳಿಂದ ಫೋಟೋ ಹಾಗೂ ವೀಡಿಯೋ ಟ್ರ್ಯಾಪ್ಗೆ ಸಿಲುಕಿದ್ದೇನೆ. ಬ್ಲಾಕ್ ಮೇಲ್ ಸಹ ಮಾಡಿದ್ದಾರೆ. ನಿನಗೆ ಮುಖ ತೋರಿಸಲು ಆಗ್ತಿಲ್ಲ, ಮಕ್ಕಳನ್ನು ಚೆನ್ನಾಗಿ ನೋಡಿಕೋ ಇಂತಿ ನಿನ್ನ ಮೋಸಗಾರ ಅಂತ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿದ್ದಾರೆ.
ಇನ್ನು, ಬ್ಯಾಡರಹಳ್ಳಿ ಪೊಲೀಸರು ತನಿಖೆಯನ್ನು ಮುಂದುವರೆಸಿದ್ದು, ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದ ಅಡಿಯಲ್ಲಿ FIR ದಾಖಲಿಸಿ ತನಿಖೆ ಮಾಡಲಾಗುತ್ತಿದ್ದು, ರೇಖಾ, ವಿನೋದ್, ಸ್ಪಂದನ ಮೂವರ ವಿರುದ್ದ ಪ್ರಕರಣ ದಾಖಲಿಸಿದ್ದಾರೆ.