Monday, February 24, 2025

ದತ್ತಾತ್ರೇಯ ಪೀಠದಲ್ಲಿ ಮಾಂಸದೂಟ : ಹಿಂದೂ ಸಂಘಟನೆಗಳ ಆಕ್ರೋಶ

ಚಿಕ್ಕಮಗಳೂರು : ದತ್ತಪೀಠದಲ್ಲಿ ಹೋಮ-ಹವನ ನಡೆಯುವ ಜಾಗದಲ್ಲಿ ಮಾಂಸಹಾರದ ಊಟ. ಮುಜರಾಯಿ ಇಲಾಖೆ ಅಧಿಕಾರಿಗಳ ವಿರುದ್ಧ ಹಿಂದೂ ಪರ ಸಂಘಟನೆಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಚಿಕ್ಕಮಗಳೂರು ತಾಲ್ಲೂಕಿನ ವಿವಾದಿತ ಸ್ಥಳವಾಗಿರುವ ದತ್ತಪೀಠ ಕ್ಷೇತ್ರ ಮತ್ತು ವಿವಾದಿತ ಜಾಗದಲ್ಲಿ ಕೋರ್ಟ್ ಆದೇಶ ಉಲ್ಲಂಘನೆ ಮಾಡಿ ಹೋಮ ಮಾಡುವ ಜಾಗದಲ್ಲಿ ಮುಸ್ಲಿಮರು ಮಾಂಸದೂಟ ಮಾಡಿ ಹಂಚಿದ್ದಾರೆ.

ಇನಾಂ ಪೀಠದಲ್ಲಿರುವ ಗೋರಿಗಳಿಗೆ ಪೂಜೆ-ಪುನಸ್ಕಾರ ಮಾಡಲಾಗುತ್ತದೆ. ಆದರೆ ಈಗ ಕೆಲ ಮುಸ್ಲಿಮರು ಅದೇ ಜಾಗದಲ್ಲಿ ಬಿರಿಯಾನಿ ಮಾಡಿರುವ ವಿಡಿಯೋ ಸದ್ಯ ವೈರಲ್‌ ಆಗಿದೆ.

ಈ ವೇಳೆ ಹಿಂದೂ ಪರ ಸಂಘಟನೆಗಳು  ತಾತ್ಕಾಲಿಕ ಶೆಡ್‌ನಲ್ಲಿ ಮಾಂಸದೂಟಕ್ಕೆ ಅವಕಾಶ ಕೊಟ್ಟಿದ್ದು ಯಾಕೆ..? ಎಂದು ಪ್ರಶ್ನೆ ಮಾಡಿದ್ದಾರೆ. ಅಲ್ಲದೇ, ಮುಜರಾಯಿ ಇಲಾಖೆ ಅಧಿಕಾರಿಗಳ ವಿರುದ್ಧ ಕಿಡಿಕಾರಿದ್ದಾರೆ.

RELATED ARTICLES

Related Articles

TRENDING ARTICLES