Monday, December 23, 2024

ಕಾಡಾನೆಗಳ ಶಾಶ್ವತ ಪರಿಹಾರಕ್ಕೆ ರೈತರ ಒತ್ತಾಯ

ಹಾಸನ : ಕಾಡಾನೆಗಳು ಸಮಸ್ಯೆ ಶಾಶ್ವತ ಪರಿಹಾರಕ್ಕೆ ಒತ್ತಾಯಿಸಿ ಹಾಸನ ಜಿಲ್ಲೆಯ ಸಕಲೇಶಪುರದ ಬಾಗೆಯಲ್ಲಿ ರೈತರು ಪ್ರತಿಭಟನೆಯನ್ನು ಮಾಡಿದ್ದಾರೆ.

ನಗರದಲ್ಲಿಂದು, ಡಿಸಿಎಫ್ ಬಸವಾರಜು ವಿರುದ್ಧ ಪ್ರತಿಭಟನಾಕಾರರ ಆಕ್ರೋಶ ವ್ಯಕ್ತಪಡಿಸಿದ್ದು, ಆನೆದಾಳಿಗೆ ಶಾಶ್ವತ ಪರಿಹಾರಕ್ಕೆ ಆಗ್ರಹಿಸಿ ಬೆಳಗ್ಗೆಯಿಂದ ಪ್ರತಿಭಟನೆ ನಡೆಸುತ್ತಿದ್ದ ರೈತರು ಸಕಲೇಶಪುರ ತಾಲೂಕಿನ, ಬಾಗೆ ಗ್ರಾಮದಲ್ಲಿ ಶಾಸಕ ಹೆಚ್‌ಕೆ.ಕುಮಾರಸ್ವಾಮಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಗುತ್ತಿತ್ತು.

ಇನ್ನು, ಮಧ್ಯಾಹ್ನ ಒಂದೂವರೆ ನಂತರ ಬಂದ ಅರಣ್ಯ ಇಲಾಖೆಯ ಅಧಿಕಾರಿ ಬಸವರಾಜ್ ನಾವು ಬೆಳಗ್ಗೆಯಿಂದ ಹೋರಾಟ ಮಾಡುತ್ತಿದ್ರೆ ಈಗ ಬಂದಿದ್ದೀರ..? ನಮ್ಮ ಪ್ರತಿಭಟನೆಗೆ ಬೆಲೆಯಿಲ್ಲವಾ, ತಡವಾಗಿ ಬಂದಿದ್ದಲ್ಲದೆ ವೇದಿಕೆ ಮೇಲೆ ಕೂರುತ್ತೀರಾ..? ತಡವಾಗಿ ಬಂದವರನ್ನ ಯಾಕೆ ಚೇರ್ ಹಾಕಿ ಕೂರಿಸಿದ್ರಿ..? ಕ್ಷಮೆ ಕೇಳಿ ನಂತರ ಏನು ಮಾಡಿದ್ದೀರಿ ಹೇಳಿ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದು, ನಾನು ಉದ್ದೇಶಪೂರ್ವಕವಾಗಿ ತಡವಾಗಿ ಬಂದಿಲ್ಲ ಎಂದು ಅಧಿಕಾರಿ ಬಸವರಾಜ್ ಕ್ಷಮೆಯನ್ನು ಕೋರಿದ್ದಾರೆ.

RELATED ARTICLES

Related Articles

TRENDING ARTICLES