Sunday, January 19, 2025

ಕಾರು ಡಿಕ್ಕಿ: ಸ್ಥಳದಲ್ಲೇ 8 ಎಮ್ಮೆಗಳ ದಾರುಣ ಸಾವು

ಶಿವಮೊಗ್ಗ : ಕಾರು ಡಿಕ್ಕಿ ಹೊಡೆದ ಪರಿಣಾಮ 8 ಎಮ್ಮೆಗಳು ಸ್ಥಳದಲ್ಲೇ ಸಾವನಪ್ಪಿರುವ ಘಟನೆ ಸಾಗರ ರಸ್ತೆಯ ಗಾಡಿಕೊಪ್ಪ ಚಾನಲ್ ಬಳಿ ನಡೆದಿದೆ.

ನಗರದ ವಿದ್ಯಾನಗರದಿಂದ ಸಾಗರ ಕಡೆಗೆ ಹೊರಟಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ಈ ದುರ್ಘಟನೆ ಸಂಭವಿಸಿದೆ. ಘಟನೆಯಲ್ಲಿ ಮಾರುತಿ ಬ್ರೀಜಾ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ. ಅತಿ ವೇಗವಾಗಿ ಬಂದ ಕಾರು ಎಮ್ಮೆಗಳಿಗೆ ಗುದ್ದಿದ ಪರಿಣಾಮ ರಸ್ತೆಯ ನಡುವೆಯೇ ಒದ್ದಾಡಿ ಮೂಕ ಪ್ರಾಣಿಗಳು ಸಾವನಪ್ಪಿವೆ.

ಚಾಲಕನ ಅಜಾಗರೂಕತೆಯೇ ಈ ಘಟನೆಗೆ ಕಾರಣ ಎನ್ನಲಾಗುತ್ತಿದೆ.

ಸದ್ಯ ಈ ಪ್ರಕರಣವು ನಗರದ ತುಂಗಾ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ದಾಖಲಾಗಿದೆ.

RELATED ARTICLES

Related Articles

TRENDING ARTICLES