Wednesday, January 22, 2025

ಕಾಂಗ್ರೆಸ್​​ನಿಂದ ದೇಶಭಕ್ತಿ ನಿರೀಕ್ಷೆ ಮಾಡ್ಬೇಡಿ : C T ರವಿ

ಕಲಬುರಗಿ : ಒಂದು ಕುಟುಂಬಕ್ಕೆ ಒಂದೇ ಟಿಕೆಟ್ ಎನ್ನುವ ಕಾಂಗ್ರೆಸ್ ನಿಯಮಕ್ಕೆ ಸಿಟಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ವ್ಯಂಗ್ಯವಾಡಿದ್ದಾರೆ.

ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್​​ಗೆ ನಿಯಮ ಮಾಡೋದೂ ಗೊತ್ತು ಅದನ್ನೂ ಬೈಪಾಸ್ ಮಾಡೋದೂ ಗೊತ್ತು.ಐದು ವರ್ಷ ಕಾರ್ಯಕರ್ತನಾಗಿ ದುಡಿದಿದರೆ ಟಿಕೆಟ್ ನೀಡಬಹುದು ಎನ್ನುವ ಪರ್ಯಾಯ ಮಾರ್ಗವನ್ನೂ ಹುಡುಕಿ ಕೊಂಡಿದ್ದಾರೆ ಎಂದು ಕಿಡಿಕಾರಿದರು.

ಇನ್ನು ಕಾಂಗ್ರೆಸ್​​​ ನಾಯಕರಿಂದ ಪ್ರಾಮಾಣಿಕತೆ, ದೇಶಭಕ್ತಿ ನಿರೀಕ್ಷೆ ಮಾಡಲೇಬೇಡಿ. ವಂಶವಾಹಿನಿ ಹೊರತಾದ ರಾಜಕಾರಣ. ಮತಿಯ ಓಲೈಕೆ ಇಲ್ಲದ ರಾಜಕಾರಣ, ಭ್ರಷ್ಡಾಚಾರ ರಹಿತ ಆಡಳಿತ ಕಾಂಗ್ರೆಸ್​​ನಿಂದ ನಿರೀಕ್ಷೆ ಮಾಡಿದರೆ ಭ್ರಮ ನಿರಸನವಾಗುತ್ತದೆ ಎಂದರು.

ಅಷ್ಟೇ ಅಲ್ಲದೇ ಬಿಜೆಪಿಯವರಿಗೆ ಸಂವಿಧಾನ ಕಲಿಸಬೇಕಾಗಿದೆ ಎನ್ನುವ ಶಾಸಕ ಪ್ರಿಯಾಂಕ್​​​ ಖರ್ಗೆ ಹೇಳಿಕೆಗೆ ಪ್ರತಿಕ್ರಿಯಿಸಿ, ನಮಗೆ ಅಂಬೇಡ್ಕರ್ ಸಂವಿಧಾನದ ಬಗ್ಗೆ ಗೊತ್ತು. ಆದರೆ ಅವರಿಗೆ ಅವರ ಸಂವಿಧಾನದ ಬಗ್ಗೆ ಗೊತ್ತಿಲ್ಲ ಎಂದು ತಿರುಗೇಟು ನೀಡಿದ್ದಾರೆ.

RELATED ARTICLES

Related Articles

TRENDING ARTICLES