Monday, December 23, 2024

ಬೆಸ್ಕಾಂಗೆ ಉಂಡೆನಾಮ ಹಾಕಿದ ಗ್ರಾಮ ಪಂಚಾಯತಿಗಳು..!

ಬೆಂಗಳೂರು : ಶ್ರೀಸಾಮಾನ್ಯರು ಎರಡು ತಿಂಗಳು ಕರೆಂಟ್ ಬಿಲ್ ಕಟ್ಟಿಲ್ಲ ಅಂದ್ರೆ ಏಕಏಕಿ ಮುಲಾಜಿಲ್ಲದೆ ಪವರ್ ಕನೆಕ್ಷನ್ ಕಟ್ ಮಾಡ್ತಾರೆ. ಆದರೆ ಗ್ರಾಮ ಪಂಚಾಯತಿ ಇಲಾಖೆ ವರ್ಷಾನುಗಟ್ಟಲೆಯಿಂದ ಕೋಟಿಗಟ್ಟಲೆ ಕರೆಂಟ್ ಬಿಲ್ ಪಾವತಿ ಮಾಡದಿದ್ರೂ ಕನೆಕ್ಷನ್ ಕಟ್ ಮಾಡಿಲ್ಲ. ಗ್ರಾಮ ಪಂಚಾಯಿತಿಯಿಂದ ಬೆಸ್ಕಾಂಗೆ ಸಾವಿರಾರು ಕೋಟಿ ಬಾಕಿ ಬರಬೇಕಿದೆ. ಆದ್ರೆ ಬೆಸ್ಕಾಂ ಮಾತ್ರ ನೊಟೀಸ್ ಅನ್ನೋ ನಾಟಕವಾಡ್ತಿದೆ.

ಗ್ರಾಹಕರೇ ನಮಗೆ ದೇವರು. ಅವರ ಹಿತಶಾಕ್ತಿ ಕಾಪಾಡುವುದು ನಮ್ಮ ಧೈರ್ಯ ಎಂಬೆಲ್ಲಾ ಘೋಷವ್ಯಾಕ್ಯಗಳನ್ನ ಬೆಸ್ಕಾಂ ಹಾಕುತ್ತದೆ. ಆದರೆ ಈ ಘೋಷವಾಖ್ಯೆ ಸರ್ಕಾರಿ ಇಲಾಖೆಗೆ ಅನ್ವಯಿಸದಂತಿದೆ. ಪ್ರತಿ ತಿಂಗಳು ವಿದ್ಯುತ್ ಪಾವತಿ ಎಂದು ಕೇಳಿದರೆ ನಮ್ಮದು ಸರ್ಕಾರಿ ಇಲಾಖೆ ಗ್ರಾಮ ಪಂಚಾಯತಿ ಅಲ್ವಾ ನಾವಿಬ್ಬರು ಒಂದೇ ಅಲ್ಲವೇ. ಬಿಲ್ ತಾನೇ ಕಟ್ಟರಾಯ್ತು ಬಿಡಿ ಅಂತ ಬೆಸ್ಕಾಂ ಅಧಿಕಾರಿಗಳಿಗೆ ಹೇಳಿಕಳಿಸುವ ಇಲಾಖೆಗಳೇ ಹೆಚ್ಚಾಗಿದ್ದರಿಂದ ಬೆಸ್ಕಾಂ ಬಾಕಿ ಬಿಲ್ ಮೊತ್ತ ಹನುಮಂತನ ಬಾಲದಂತೆ ಬೆಳೆಯತೊಡಗಿದೆ.

ಗ್ರಾಮ ಪಂಚಾಯತಿ ಯಿಂದ ಬೆಸ್ಕಾಂಗೆ ಬರಬೇಕಾದ ಕರೆಂಟ್ ಬಾಕಿ ಮೊತ್ತವೇ ಬರೋಬ್ಬರಿ 2848 ಕೋಟಿ. ಇಷ್ಟು ಹಣವನ್ನ ವಸೂಲಿ ಮಾಡೋದಕ್ಕೆ ಬೆಸ್ಕಾಂ ಹೈರಾಣವಾಗಿದೆ. ಕಳೆದ ಹಲವು ವರ್ಷಗಳಿಂದ ಬೆಸ್ಕಾಂಗೆ ಬಿಲ್ ಬಾಕಿ ಉಳಿದುಕೊಂಡಿವೆ.

ಯಾವೆಲ್ಲಾ ವರ್ಷದಲ್ಲಿ ಎಷ್ಟೆಷ್ಟು ಕೋಟಿ ಬಾಕಿ ಮೊತ್ತ.?

  1. 2015-16- 245 ಕೋಟಿ
  2. 2016-17-419 ಕೋಟಿ
  3. 2017-18 -736 ಕೋಟಿ
  4. 2018-19-1177 ಕೋಟಿ
  5. 2019-20-1783 ಕೋಟಿ
  6. 2020-21-2028 ಕೋಟಿ
  7. 2021-22- 2843 ಕೋಟಿ

ಬರಬೇಕಾದ ಬಿಲ್ ವಸೂಲಿಗೆ ಬೆಸ್ಕಾಂ ಸರ್ಕಸ್ ನಡೆಸ್ತಿದೆ.ಇನ್ನು ಸರ್ಕಾರಿ ಇಲಾಖೆಗಳಲ್ಲಿ ಶೇ.60ರಷ್ಟು ಹಣ ವಿದ್ಯುತ್ ಬಿಲ್ಗಾಗಿ ಮೀಸಲಿದ್ದರೂ, ಇವರ ನಿರ್ಲಕ್ಷ್ಯದಿಂದ ಕೋಟಿಗಟ್ಟಲೆ ಬಿಲ್ ಬಾಕಿ ಉಳಿದಿದೆ. ಸಾರ್ವಜನಿಕರು ಬಿಲ್ ಪಾವತಿ ಮಾಡದಿದ್ದರೆ ಹೇಳದೆ ಕೇಳದೆ ವಿದುತ್ ಸಂಪರ್ಕ ಕಟ್ ಮಾಡುವ ಬೆಸ್ಕಾಂ ಅಧಿಕಾರಿಗಳು, ಗ್ರಾ. ಪಂಚಾತಿ ಕೋಟಿಗಟ್ಟಲೆ ಬಿಲ್ ಬಾಕಿ ಇದ್ದರೂ ಯಾವುದೇ ಕ್ರಮ ಜರುಗಿಸಿಲ್ಲ. ವಿದ್ಯುತ್, ಅತಿ ಮುಖ್ಯವಾಗಿ ಬೇಕಾಗಿರುವ ಸಂಪನ್ಮೂಲ. ಎಲ್ಲ ಕ್ಷೇತ್ರಗಳಲ್ಲಿಗೂ ವಿದ್ಯುತ್ ಅತ್ಯಗತ್ಯವಾಗಿದೆ. ಕರೆಂಟ್ ಇಲ್ಲದೆ ಇದ್ದರೆ ಯಾವ ಕೆಲಸ ಮಾಡಲೂ ಸಾಧ್ಯವಿಲ್ಲ ಎಂಬ ಸ್ಥಿತಿಗೆ ತಲುಪಿದ್ದೇವೆ. ಇತ್ತೀಚೆಗೆ ಅಗತ್ಯಕ್ಕಿಂತ ಹೆಚ್ಚಾಗಿ ವಿದ್ಯುತ್ ಬಳಕೆಯಾಗುತ್ತಿದೆ. ಆದರೆ, ಬಿಲ್ ಪಾವತಿ ಮಾತ್ರ ಸರಿಯಾಗಿ ಆಗುತ್ತಿಲ್ಲ. ಆದ್ರೆ ಇಲಾಖೆ ನಿರ್ಧಾರದಿಂದ ಬೇಸತ್ತು ಒಂದು ತಿಂಗಳು ಒಳಗೆ ಬಿಲ್ ಕಟ್ಟಿ ಇಲ್ಲದ್ರೆ ಕನಕ್ಷನ್ ಕಟ್ ಮಾಡ್ತೀವಿ ಅಂತ ಎಚ್ಚರಿಕೆ ನೀಡಿದೆ.

ಸಾರ್ವಜನಿಕರು ಲೇಟ್ ಮಾಡಿದ್ರೆ ದಿಢೀರ್ ಅಂತಾ ಕನೆಕ್ಷನ್ ಕಟ್ ಮಾಡುತ್ತಾರೆ. ಆದರೆ ಸರ್ಕಾರಿ ಇಲಾಖೆ ಆದ ಗ್ರಾಮ ಪಂಚಾಯಿತಿ ಹಲವು ವರ್ಷದಿಂದ ವಿದ್ಯುತ್ ಬಿಲ್ ಸರಿಯಾಗಿ ಕಟ್ಟುತ್ತಿಲ್ಲ. ಇದು ನಮಗೊಂದು ನ್ಯಾಯ ಅವರಿಗೊಂದು ನ್ಯಾಯನಾ ಎನ್ನೋ ಆಗಿದೆ. ಕೋಟಿಗಟ್ಟಲೇ ಇರುವ ಬಾಕಿ ಹಣ ವಸೂಲಿ ಮಾಡದೆ ಬೆಸ್ಕಾಂ, ಇಲಾಖೆಗೆ ಶ್ರೀರಕ್ಷೆಯಾಗಿ ನಿಂತಿದೆ. ಒಟ್ಟಿನಲ್ಲಿ ಇಷ್ಟು ಮೊತ್ತದ ಹಣ ವಸೂಲಿ ಮಾಡದೆ ಜನರ ಮೇಲೆ ವಿದ್ಯುತ್ ಬಿಲ್ ಜಾಸ್ತಿ ಮಾಡಿರೋದು ನಿಜಕ್ಕೂ ದುರಂತವೇ ಸರಿ.

RELATED ARTICLES

Related Articles

TRENDING ARTICLES