Monday, January 6, 2025

ಸಿನಿಪ್ರೇಕ್ಷಕರ ದಿಲ್​ ದೋಚಿದ 777 ಚಾರ್ಲಿ

ಕಂಟೆಂಟ್​ ಸಿನಿಮಾಗಳ ಸರದಾರ, ಮ್ಯಾನ್​ ಆಫ್​ ಮಲ್ಟಿ ಟ್ಯಾಲೆಂಟ್​​ ರಕ್ಷಿತ್​​ ಶೆಟ್ಟಿಯ ಮೋಸ್ಟ್​​ ಎಕ್ಸ್​ಪೆಕ್ಟೆಡ್​​ ಮೂವಿ 777 ಚಾರ್ಲಿ ಚಿತ್ರದ ಟ್ರೈಲರ್​​ ರಿಲೀಸ್​ ಆಗಿದೆ. ರಿಲೀಸ್​​ ಆದ ಕೆಲವೇ ಕ್ಷಣಗಳಲ್ಲಿ ಯ್ಯೂಟ್ಯೂಬ್​​ ಟ್ರೆಂಡಿಂಗ್​ ನಲ್ಲಿರೋ ಚಾರ್ಲಿಗೆ  ಪ್ಯಾನ್ ಇಂಡಿಯಾ ಬಹುಪರಾಕ್ ಅಂತಿದೆ. ಇಷ್ಟಕ್ಕೂ ಟ್ರೈಲರ್​​ನಲ್ಲಿ ಅಂಥದ್ದೇನಿದೆ..? ನಾವ್​ ಹೇಳ್ತೀವಿ ಈ ಸ್ಟೋರಿನಾ  ಮಿಸ್​ ಮಾಡದೇ ನೀವೇ ಓದಿ.

  • ಚಾರ್ಲಿ ಜೊತೆ ಶೆಟ್ರ ವಂಡರ್​ಫುಲ್​ ಜರ್ನಿ
  • ಜಬರ್ದಸ್ತ್​​ ಟ್ರೈಲರ್​​ಗೆ ಪ್ಯಾನ್ ಇಂಡಿಯಾ ಫಿದಾ
  • ಭಜರಂಗಿ ಭಾಯಿಜಾನ್ ಮೀರಿಸೋ ಎಮೋಷನ್

ಚಾರ್ಲಿ ಚಿತ್ರದ ಟ್ರೈಲರ್​ ಯಾವಾಗ ಬರುತ್ತಪ್ಪಾ ಅಂತ ಬಹಳ ಕಾತರದಿಂದ ಕಾಯ್ತಿದ್ದ ಕೋಟ್ಯಂತರ ಅಭಿಮಾನಿಗಳ ನಿರೀಕ್ಷೆಗೆ ಇಂದು ಉತ್ತರ ಸಿಕ್ಕಿದೆ. ಐ ಕಾಂಟ್​ ವೈಟ್​​ ರಕ್ಷಿತ್​​ ಅಂತ ಸೋಶಿಯಲ್​ ಮೀಡಿಯಾದಲ್ಲಿ ಸಿಂಪಲ್​ ಸ್ಟಾರ್​ಗೆ ಮಾಡ್ತಿದ್ದ ರಿಕ್ವೆಸ್ಟ್​ಗಳಿಗೆ,  777 ಚಾರ್ಲಿ ಗುಡ್ ನ್ಯೂಸ್ ಕೊಟ್ಟಿದೆ.  ಟ್ರೈಲರ್​ ನೋಡಿ ಥ್ರಿಲ್​ ಆಗಿರೋ ಶೆಟ್ರ ಫ್ಯಾನ್ಸ್​, ಆಲ್​ ರೆಕಾರ್ಡ್ಸ್​ ಬ್ರೇಕ್​ ಆಂತ ಕಮೆಂಟ್​ ಮಾಡ್ತಿದ್ದಾರೆ. ಕೆಜಿಎಫ್​ ನಂತ್ರ ಕನ್ನಡದ  ಸಿನಿಮಾವೊಂದು ದೊಡ್ಡ ಮಟ್ಟದಲ್ಲಿ  ಘರ್ಜಿಸೋಕೆ ರೆಡಿಯಾಗಿ ನಿಂತಿದೆ.

ಚಾರ್ಲಿ- ಧರ್ಮನ ಕಾಂಬಿನೇಷನ್​ ಟ್ರೈಲರ್​ನಲ್ಲಿ ಸಿಕ್ಕಾಪಟ್ಟೆ ಕಿಕ್​ ಕೊಡ್ತಿದೆ. ಸೋಶಿಯಲ್ ಮೀಡಿಯಾ ಟ್ರೆಂಡಿಂಗ್​ನಲ್ಲಿ ಕಮಾಲ್​ ಮಾಡ್ತಿರೋ 777 ಚಾರ್ಲಿ ಟ್ರೈಲರ್,​ ಬಹು ನಿರೀಕ್ಷಿತ ಸಿನಿಮಾಗಳ ಸಾಲಿಗೆ ಸೇರೋ ಹಿಂಟ್ ನೀಡಿದೆ. ಕನ್ನಡಿಗರ ಎದೆಯಲ್ಲಿ ಕ್ಯೂರಿಯಾಸಿಟಿಯ  ಮಹಾಕೋಟೆಯನ್ನೇ ಕಟ್ಟಿದ್ದ ರಕ್ಷಿತ್​, ಈ ಸಿನಿಮಾದಿಂದ ಹಿಸ್ಟರಿ ಕ್ರಿಯೇಟ್​ ಮಾಡೋಕೆ ಸಜ್ಜಾಗಿದ್ದಾರೆ. ಒನ್ಸ್​ ಅಗೈನ್​ ರಕ್ಷಿತ್​​ ಕಮ್​ ಬ್ಯಾಕ್​ ಅಂತಿದೆ ಗಾಂಧಿನಗರ.

ಸಿಂಪಲ್​ ಸ್ಟಾರ್​​ ರಕ್ಷಿತ್ ಶೆಟ್ಟಿ​​ ಸಿನಿಮಾಗಳಂದ್ರೆ ಅಲ್ಲೊಂದು ಹೊಸತನ ಇದ್ದೇ ಇರಲಿದೆ. ಥಿಯೇಟರ್​ನಿಂದ ಹೊರಬಂದ ಮೇಲೂ ಅದ್ರ ಗುಂಗು ಹಾಗೆಯೇ ಉಳಿಯೋದು​ ಪಕ್ಕಾ . ಇನ್ನು 777 ಚಾರ್ಲಿ ಸಿನಿಮಾ ಕ್ರಿಯೇಟ್​ ಮಾಡಿರೋ  ಎಗ್ಸೈಟ್​ಮೆಂಟ್​​ನ ಪದಗಳಲ್ಲಿ ಬಣ್ಣಿಸಲು ಸಾಧ್ಯವಿಲ್ಲ ಬಿಡಿ. ಅಂತೂ ಈ ಟ್ರೈಲರ್​ ನೋಡಿದ್ಮೇಲೆ  ಚಿತ್ರವನ್ನು ಸಿಲ್ವರ್​ ಸ್ಕ್ರೀನ್​ ಮೇಲೆ ಎಂಜಾಯ್​ ಮಾಡೋಕೆ ತುದಿಗಾಲಲ್ಲಿ ಅಭಿಮಾನಿಗಳು ಕಾಯ್ತಿದ್ದಾರೆ.

ಇದ್ರ ಜೊತೆಯಲ್ಲಿ ಕನ್ನಡಿಗರ ದಿಲ್​​ ದೋಚೋಕೆ ಸಾಯಿ ಪಲ್ಲವಿ ಚಾರ್ಲಿ ಜೊತೆ ನಿಂತಿದ್ದಾರೆ. ಹೌದು, ರಕ್ಷಿತ್​ ಸಿನಿಮಾಗೆ ಡ್ಯಾನ್ಸ್​ ಕ್ವೀನ್​ ಸಾಥ್ ನೀಡಿದ್ದಾರೆ. ತೆಲುಗು ಅವತರಣಿಕೆಯ ಟ್ರೈಲರ್​ನ ಸಾಯಿಪಲ್ಲವಿ ರಿಲೀಸ್​ ಮಾಡಿ ಚಿತ್ರಕ್ಕೆ ಮತ್ತಷ್ಟು ಮೈಲೇಜ್​ ಕೊಟ್ಟಿದ್ದಾರೆ. ​ಅಂದಹಾಗೆ ಇದು ಧರ್ಮ ಹಾಗೂ ಆತನು ದತ್ತು ಪಡೆಯೋ ಚಾರ್ಲಿಯ ಭಾವನಾತ್ಮಕ ಜರ್ನಿ.

ಸಲ್ಮಾನ್ ಖಾನ್​ರ ಭಜರಂಗಿ ಭಾಯಿಜಾನ್​ನ ಮೀರಿಸೋ ಎಮೋಷನ್ ಈ ಚಿತ್ರದ ಟ್ರೈಲರ್​ನಲ್ಲಿ ಕಾಣಸಿಗುತ್ತಿದೆ. ಕಾಮಿಡಿ ಟ್ರ್ಯಾಕ್ ಇದ್ರೂ, ಶ್ವಾನಪ್ರಿಯರಿಗೆ ಅಥ್ವಾ ಶ್ವಾನಗಳನ್ನ ಇಷ್ಟ ಪಡದಂತಹವ್ರಿಗೆ ಈ ಸಿನಿಮಾ ಒಂದು ಬಲವಾದ ಸಂದೇಶ ನೀಡಲಿದೆ. ಅಷ್ಟರ ಮಟ್ಟಿಗೆ ಧರ್ಮ- ಚಾರ್ಲಿಯ ಸಂಬಂಧ ಪ್ರತಿ ಫ್ರೇಮ್​ನಲ್ಲೂ ಕಟ್ಟಿಕೊಟ್ಟಿದ್ದಾರೆ ನಿರ್ದೇಶಕ ಕಿರಣ್ ರಾಜ್. ಮಿಲಿಟರಿ, ಗಡಿ, ಮಂಜಿನ ಮಳೆ, ಕಾಶ್ಮೀರದ ಸುಂದರ ತಾಣಗಳು ಹೀಗೆ ಎಲ್ಲವೂ ಕೌತುಕತೆಯನ್ನ ಮತ್ತಷ್ಟು ಹೆಚ್ಚಿಸಿವೆ.

ಶೆಟ್ರ ಬಳಗದಲ್ಲಿ ರಾಜ್​​ ಬಿ ಶೆಟ್ಟಿ ಸೇರಿದಂತೆ ಡ್ಯಾನಿಶ್ ಶೇಠ್​, ನಾಯಕಿಯಾಗಿ ಸಂಗೀತ ಶೃಂಗೇರಿ ಹಾಗೂ ಬಹುಭಾಷಾ ನಟ ಬಾಬಿಸಿಂಹ ಪ್ರಮುಖ ಪಾತ್ರಗಳಲ್ಲಿ ಬಣ್ಣ ಹಚ್ಚಿದ್ದಾರೆ. ಪರಮ್​ವ್ಹಾ ಬ್ಯಾನರ್​ನಡಿಯಲ್ಲಿ ಮೂಡಿ ಬರ್ತಿರೋ ಈ ಚಿತ್ರಕ್ಕೆ ಎಸ್.​​ ಎಸ್​​ ಗುಪ್ತಾ ಹಾಗೂ ರಕ್ಚಿತ್​ ಶೆಟ್ಟಿ ಅವ್ರೇ ಬಂಡವಾಳ ಹೂಡಿದ್ದಾರೆ. ಕನ್ನಡದ ಜೊತೆ ಪಂಚಭಾಷೆಯಲ್ಲಿ ಇದೇ ಜೂನ್ 10ಕ್ಕೆ ಪ್ರೇಕ್ಷಕರ ಮುಂದೆ ಬರ್ತಿದೆ ಚಿತ್ರ. ಪ್ರಾಣಿಗಳ್ನ ಪ್ರೀತಿಸುವವರು ಸಿನಿಮಾ ನೋಡಲು ಕೈಯಲ್ಲಿ ಟಿಶ್ಯೂ ಹಿಡ್ಕೊಂಡು ಹೋಗ್ಬೇಕು ಅಂತಾ ಟ್ವೀಟ್​ ಮಾಡಿರೋ ಸಾಯಿಪಲ್ಲವಿ ಮಾತು ಸತ್ಯ ಅನಿಸ್ತಿದೆ.

ರಾಕೇಶ್ ಆರುಂಡಿ, ಫಿಲ್ಮ್​ ಬ್ಯೂರೋ, ಪವರ್​ ಟಿವಿ

RELATED ARTICLES

Related Articles

TRENDING ARTICLES