Monday, January 6, 2025

ನಿರ್ಮಾಪಕ ಆನೇಕಲ್ ಬಾಲರಾಜ್ ಇನ್ನಿಲ್ಲ

ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ಹಲವು ಸಿನಿಮಾಗಳನ್ನು ನಿರ್ಮಾಣ ಮಾಡಿದ್ದ ಆನೇಕಲ್ ಬಾಲರಾಜ್ ಅವರು ನಿಧನರಾಗಿದ್ದಾರೆ.

ಬೆಂಗಳೂರಿನಲ್ಲಿ ನಡೆದ ಅಪಘಾತದಲ್ಲಿ ಅವರು ಕೊನೆಯುಸಿರೆಳೆದಿದ್ದಾರೆ. ‘ಕರಿಯ’ ಸಿನಿಮಾ ನಿರ್ಮಾಣ ಮಾಡಿ ಬಾಲರಾಜ್ ಅವರು ಯಶಸ್ಸು ಕಂಡಿದ್ದರು. ಬಳಿಕ ಕರಿಯಾ -2 , ಗಣಪ ,ಬರ್ಕ್ಲಿ ಸೇರಿದಂತೆ ಹಲವು ಸಿನಿಮಾಗಳನ್ನ ನಿರ್ಮಾಣ ಮಾಡಿದ್ರು.ಇದೀಗ ಆನೇಕಲ್ ಬಾಲರಾಜ್ ನಿಧನದ ಸುದ್ದಿ ಕೇಳಿ ಸ್ಯಾಂಡಲ್​​ವುಡ್​​ನ ಅನೇಕರು ಸಂತಾಪ ಸೂಚಿಸುತ್ತಿದ್ದಾರೆ.

ಬೆಳಗ್ಗೆ ಜೆ.ಪಿ. ನಗರದ ಅವರ ನಿವಾಸದ ಬಳಿ ವಾಕಿಂಗ್​​ಗೆ ತೆರಳಿದ್ದಾಗ ಅಪಘಾತವಾಯ್ತು. ನಂತರ ಅವರನ್ನು ಆಸ್ಪತ್ರೆಗೆ ದಾಖಲಿಸಿದರೂ ಕೂಡ ಚಿಕಿತ್ಸೆ ಫಲಕಾರಿಯಾಗದೇ ಅವರು ನಿಧನರಾಗಿದ್ದಾರೆ.

RELATED ARTICLES

Related Articles

TRENDING ARTICLES