Thursday, December 26, 2024

ಕತ್ತು ಕೊಯ್ದು ಮಹಿಳೆಯ ಬರ್ಬರ ಕೊಲೆ

ಬೆಂಗಳೂರು : ಬೆಳ್ಳಂ ಬೆಳಗ್ಗೆ ಮಹಿಳೆಯ ಕತ್ತು ಕೊಯ್ದು ಕೊಲೆ ಮಾಡಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದ ವಡಗೆರದಲ್ಲಿ ನಡೆದಿದೆ.

ಇನ್ನು ಮಹಿಳೆಯ ಗಂಡ ಸಂಬಂಧಿಕರ ಗೃಹ ಪ್ರವೇಶಕ್ಕೆ ಹೋಗಿದ್ದು, ಘಟನೆ ನಂತರ ಗಂಡನ ಪೋನ್ ಸ್ವಿಚ್ ಆಫ್ ಆಗಿರುವ ಕಾರಣ ಗಂಡನ ಮೇಲೆ ಹಲವು ಅನುಮಾನ ವ್ಯಕ್ತವಾಗುತ್ತಿದೆ. ತಾಲೂಕಿನ  ವಡಗೆರೆ ಗ್ರಾಮದಲ್ಲಿ ಇಂದು ಬೆಳಗ್ಗೆ 5 ಗಂಟೆಯ ಸಮಯದಲ್ಲಿ  ಮಹಿಳೆಯ ಕೊಲೆಯಾಗಿದೆ.

ಅದೆರೀತಿ ಗ್ರಾಮದ ಭಾಗ್ಯಶ್ರೀ (35) ಕೊಲೆಯಾದ ದುರ್ದೈವಿ  ಘಟನೆ ನಂತರ ಗಂಡ ಚನ್ನಬಸವಯ್ಯನ ಪೋನ್ ಸ್ವಿಚ್ ಆಫ್ ಆಗಿದ್ದು, ಗಂಡನೇ ಕೊಲೆ ಮಾಡಿ ಹೋಗಿರುವ ಶಂಕೆ ವ್ಯಕ್ತವಾಗುತ್ತಿದೆ. ಆದ್ರೆ ಕೊಲೆಯಾದ ಭಾಗ್ಯಶ್ರೀ ಇದೇ ಗ್ರಾಮದ ರಿಯಾಜ್ ಎಂಬ ಯುವಕನೊಂದಿಗೆ ಅನೈತಿಕ ಸಂಬಂಧದ ಜೊತೆಯಲ್ಲಿ ಹಣಕಾಸಿನ ವ್ಯವಹಾರ ಇತ್ತು ಎನ್ನಲಾಗಿದ್ದು, ಕೆಲವು ದಿನಗಳಿಂದ ರಿಯಾಜ್ ನನ್ನ ಬಾಗ್ಯಶ್ರೀ ಅವೈಡ್ ಮಾಡಿದ್ಳು.. ಇದರಿಂದ ಕೋಪಗೊಂಡ ರಿಯಾಜ್, ಚನ್ನಬಸಪ್ಪ ಸಂಬಂಧಿಕರ ಗೃಹ ಪ್ರವೇಶಕ್ಕೆ ತೆರಳಿದ ಭಾಗ್ಯಶ್ರೀಯನ್ನ ಕೊಲೆಗೈದು ಪರಿಯಾಗಿರುವ ಸಂಶಯ ಮತ್ತೊಂದು ಕಡೆ ಪೊಲೀಸರಿಗೆ ಇದೆ. ಇನ್ನು ಸ್ಥಳಕ್ಕೆ ದೊಡ್ಡಬೆಳವಂಗಲ  ಪೊಲೀಸರು ಭೇಟಿ ನೀಡಿ  ಪರಿಶೀಲನೆ ನಡೆಸಿದ್ದು ತನಿಖೆ ಕೈಕೊಂಡಿದ್ದಾರೆ.

RELATED ARTICLES

Related Articles

TRENDING ARTICLES