ಬೆಂಗಳೂರು: ನನ್ನ ಹೆಸರನ್ನ ದೆಹಲಿಗೆ ಕಳ್ಸಿರೋದಕ್ಕೆ ಮುಖ್ಯಮಂತ್ರಿಗಳಿಗೆ,ರಾಜ್ಯಧ್ಯಕ್ಷರಿಗೆ,ಪಕ್ಷದ ಮುಖಂಡರಿಗೆ ಎಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಬಿಜೆಪಿ ಉಪಾಧ್ಯಕ್ಷ ಬಿವೈ ವಿಜಯೇಂದ್ರ ಹೇಳಿದ್ದಾರೆ.
ನಗರದಲ್ಲಿಂದು ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ನೆನ್ನೆಯ ಕೋರ್ ಕಮಿಟಿಯಲ್ಲಿ ಪರಿಷತ್‌ನ 4 ಸ್ಥಾನಗಳಲ್ಲಿ ನನ್ನ ಹೆಸರು ಪ್ರಸ್ತಾಪ ಮಾಡಿರೋದು ಗಮನಕ್ಕೆ ಬಂದಿದೆ. ನನ್ನ ಹೆಸರನ್ನ ದೆಹಲಿಗೆ ಕಳ್ಸಿರೋದಕ್ಕೆ ಮುಖ್ಯಮಂತ್ರಿಗಳಿಗೆ,ರಾಜ್ಯಧ್ಯಕ್ಷರಿಗೆ,ಪಕ್ಷದ ಮುಖಂಡರಿಗೆ ಎಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.
ಅದುವಲ್ಲದೇ, ಕೇಂದ್ರದ ಪಾರ್ಲಿಮೆಂಟರಿ ಬೋರ್ಡ್ ನಿರ್ಧಾರ ಮಾಡುತ್ತೆ. ಈಗಲೇ ಏನೆ ಹೇಳುದ್ರೆ ಪ್ರಿ ಮೆಚುರ್ ಆಗುತ್ತೆ ನೋಡೊಣ ಏನು ನಿರ್ಧಾರ ತೆಗೆದುಕೊಳ್ಳುತ್ತಾರೆ ಅಂತ ಎಲ್ಲಕ್ಕೂ ಮುಖ್ಯವಾಗಿ ದೆಹಲಿಯ ಸಂಸದೀಯ ಮಂಡಳಿಯಲ್ಲಿ ಆಯ್ಕೆ ಆಗಬೇಕು ಇನ್ನೂ ಮೂರು ನಾಲ್ಕು ದಿನಗಳಾಗಬಹುದು ನನ್ನ ಹೆಸರು ದೆಹಲಿಗೆ ಶಿಫಾರಸು ಮಾಡಿರೋದು ಸಂತೋಷ ತಂದಿದೆ ನನಗೆ ಹೆಮ್ಮೆ ಅನಿಸುತ್ತಿದೆ. ನಾನು ಯಾವುದೇ ಸ್ಥಾನಮಾನ ಬಯಸಿದವನಲ್ಲ ವರಿಷ್ಠರ ನಿರ್ಧಾರಕ್ಕೆ ಕಾಯುತ್ತೇನೆ ಎಂದು ಹೇಳಿದರು.
ಇನ್ನು, ಹಳೇ ಮೈಸೂರು ಭಾಗ ಅಷ್ಟೇ ಅಲ್ಲ, ರಾಜ್ಯದ ಎಲ್ಲ ಕಡೆಯಿಂದಲೂ ಬಿಜೆಪಿಗೆ ಬರಲು ಆಸಕ್ತಿ ತೋರುತ್ತಿದ್ದಾರೆ. ಮುಂದಿನ ಸಲ ಬಿಜೆಪಿ ಅಧಿಕಾರಕ್ಕೆ ತರಲು ಶ್ರಮಿಸುತ್ತಿದ್ದೇವೆ. ಮುಂದಿನ ದಿನಗಳಲ್ಲಿ ನಮ್ಮ ಶ್ರಮ ಯಶಸ್ವಿ ಆಗುವ ವಿಶ್ವಾಸ ಇದೆ. ಕಾಂಗ್ರೆಸ್ನಲ್ಲಿ ಒಂದು ಕುಟುಂಬಕ್ಕೆ ಒಂದೇ ಟಿಕೆಟ್ ನಿಯಮ ತರಲಿರುವ ವಿಚಾರ ಎಂದು ವಿಜಯೇಂದ್ರ ಹೇಳಿದ್ದಾರೆ.