Wednesday, January 22, 2025

ಹೆಬ್ಬಾಳ ಫ್ಲೈಓವರ್ ಮರು ವಿನ್ಯಾಸಕ್ಕೆ ಬಿಎಂಆರ್ ಸಿಎಲ್ ಅಡ್ಡಿ

ಬೆಂಗಳೂರು: ಹೆಬ್ಬಾಳ ಮೇಲ್ಸೇತುವೆ ಮೇಲೆ ಹೋಗ್ಬೇಕು ಅಂದ್ರೆ ಜೀವ ಕೈಯಲ್ಲಿ ಇಟ್ಟುಕೊಂಡೇ ಹೋಗ್ಬೇಕು. ಟ್ರಾಫಿಕ್ ಅಂತೂ 27/7 ಇದ್ದೇ ಇರುತ್ತೆ. ಸರಣಿ ಅಪಘಾತಗಳಾಗಿ ಎಷ್ಟೋ ವಾಹನ ಸವಾರರು ಪ್ರಾಣ ಕಳೆದ್ರುಕೊಂಡ್ರೂ, ಇನ್ನೂ ಟ್ರಾಫಿಕ್ ಕಿರಿಕಿರಿಗೆ ಬ್ರೇಕ್ ಬಿದ್ದಿಲ್ಲ. ಕಳೆದ ಮೂರು ವರ್ಷಗಳ ಹಿಂದೆ ಫ್ಲೈಓವರ್ ಮರು ವಿನ್ಯಾಸಕ್ಕೆ ಬಿಡಿಎ ಕೈ ಹಾಕಿತ್ತು. ಆದ್ರೆ ಅಲ್ಲಿ ಮೆಟ್ರೋ ಲೇನ್ ಬರುತ್ತೆ ಅಂತಾ ಬಿಎಂಆರ್ ಸಿಎಲ್ ಅಡ್ಡಗಾಲು ಹಾಕಿದೆ. ಬಿಡಿಎ, ಬಿಬಿಎಂಪಿ, ಬಿಎಂಆರ್ ಸಿಎಲ್ ನ ಅಧಿಕಾರಿಗಳು ಪ್ಲಾನ್ ರೆಡಿ ಮಾಡುವಂತೆ ಸರ್ಕಾರ ಸೂಚಿಸಿತ್ತು. ಆದ್ರೆ ಅವ್ರ ನಡುವಿನ ತಿಕ್ಕಾಟದಿಂದ ಫ್ಲೈಓವರ್ ರಿ-ಡಿಸೈನಿಂಗ್ ಕೆಲಸಕ್ಕೆ ಸಿಗ್ನಲ್ಲೇ ಸಿಕ್ಕಿಲ್ಲ. ವಾಹನ ಸವಾರರು ಪರದಾಡ್ತಿದ್ರೆ, ಅಧಿಕಾರಿಗಳು ಚೆಲ್ಲಾಟವಾಡ್ತಿದ್ದಾರೆ.

ಇನ್ನು ಈ ಮೊದಲು, ವಿಮಾನ ನಿಲ್ದಾಣದಿಂದ ನಗರಕ್ಕೆ ಬರುವ ದಿಕ್ಕಿನಲ್ಲಿ ಕೇವಲ ಎರಡು ಲೇನ್‌ಗಳ ನಿರ್ಮಾಣ ಕಾಮಗಾರಿಯನ್ನು ಬಿಡಿಎ ಆರಂಭಿಸಿತ್ತು. ಈಗ ಆ ಕಾಮಗಾರಿ ಸ್ಥಗಿತಗೊಂಡಿದೆ. ಬದಲಾಗಿ ಐದು ಲೇನ್ ಗಳನ್ನ ನಿರ್ಮಾಣ ಮಾಡಿ, ಮೆಟ್ರೋ ಲೇನ್ ಗೂ ಅನುಕೂಲ ಆಗುವಂತೆ ಪ್ಲಾನ್ ರೂಪಿಸಬೇಕಾಗಿದೆ. ಆದ್ರೆ ಬಿಎಂಆರ್ ಸಿಎಲ್ ಅಧಿಕಾರಿಗಳು ಆ ಕೆಲಸ ಮಾಡ್ತಾ ಇಲ್ಲ. ನಾವು ಕೆಲಸ ಮಾಡೋದಕ್ಕೆ ರೆಡಿ ಆಗಿದ್ದೀವಿ. ಬಿಎಂಆರ್ ಸಿಎಲ್ ನವ್ರು ಬಿಡ್ತಾ ಇಲ್ಲ ಅಂತಾ ಬಿಡಿಎ ಅಧ್ಯಕ್ಷ ಎಸ್ ಆರ್ ವಿಶ್ವನಾಥ್ ದೂರಿದ್ದಾರೆ.

ಬಿಎಸ್ ವೈ ಅವಧಿಯಲ್ಲಿ 200 ಕೋಟಿ ವೆಚ್ಚದಲ್ಲಿ ಟೆಂಡರ್ ರೂಪಿಸಲಾಗಿತ್ತು. ಅಧಿಕಾರಿಗಳ ನಡುವೆ ಕೋಆರ್ಡಿನೇಶನ್ ಇಲ್ಲದೇ, ಈಗ ಕಾಮಗಾರಿ ವೆಚ್ಚ 250 ಕೋಟಿಗೆ ಮುಟ್ಟಿದೆ.

RELATED ARTICLES

Related Articles

TRENDING ARTICLES