Sunday, January 19, 2025

ಮಹಿಳೆಯರ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ ಗ್ರಾ.ಪಂ. ಲೈಟ್​​ಮ್ಯಾನ್

ಆನೆಕಲ್​ : ದಿನದಿಂದ ದಿನಕ್ಕೆ ಮಹಿಳೆಯರ ಮೇಲಿನ ಮಾರಣಾಂತಿಕ ಹಲ್ಲೆ ಜಾಸ್ತಿಯಾಗುತ್ತಿದೆ. ನಿನ್ನೆ ಬಾಗಲಕೋಟೆ ಆಯ್ತು, ಇದೀಗ ಆನೇಕಲ್​ನಲ್ಲಿ ತಾಯಿ ಮತ್ತು ಮಗಳ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ ಘಟನೆ ಆನೇಕಲ್‌ನ‌ ಇಂಡ್ಲವಾಡಿಯಲ್ಲಿ‌ ನಡೆದಿದೆ.

ಮಹಿಳೆಯರ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ ಭೂಪ. ಗ್ರಾ.ಪಂ ಲೈಟ್ ಮ್ಯಾನ್‌ ಇಬ್ಬರು ಮಹಿಳೆಯರನ್ನು ಥಳಿಸಿರುವ ವಿಡಿಯೋ ಲಭ್ಯವಾಗಿದ್ದು, ಲಕ್ಷ್ಮಮ್ಮ ಹಾಗೂ ಮಗಳು ರೂಪ ಹಲ್ಲೆಗೊಳಗಾಗಿದ್ದಾರೆ. ಇದೇ ತಿಂಗಳು 10ರಂದು ಅಮಾನವೀಯ ಘಟನೆ ನಡೆದಿದ್ದು, ಗಂಡು ದಿಕ್ಕಿಲ್ಲದ ಲಕ್ಷ್ಮಮ್ಮನ ಮೇಲೆ ಇಂಡ್ಲವಾಡಿ ಪಂಚಾಯತಿಯ ಲೈಟ್ ಮ್ಯಾನ್ ಹಲ್ಲೆ ಮಾಡಿದ್ದಾರೆ.

ಅದುವಲ್ಲದೇ, ಸ್ಥಳದ ವಿಚಾರವಾಗಿ ಕ್ಯಾತೆ ತೆಗೆದು ಲಕ್ಷ್ಮಮ್ಮನಿಗೆ ರಾಡ್​ನಿಂದ ಹಲ್ಲೆ ನಡೆದಿದ್ದು, ರಾಡ್​ನಿಂದ ಹೊಡೆದಾಗ ಲಕ್ಷ್ಮಮ್ಮ ಮಗಳು ರೂಪ ಅಸ್ವಸ್ಥರಾಗಿದ್ದಾರೆ. ಪೊಲೀಸರಿಗೆ ದೂರು ಕೊಟ್ರು ಸಣ್ಣ ಪುಟ್ಟ ಕೇಸ್ ದಾಖಲಿಸಿ ಕೈ ತೊಳೆದುಕೊಂಡ ಪೊಲೀಸರು 307 ಪ್ರಕರಣ ದಾಖಲಿಸಲು ಪೊಲೀಸರು ಹಿಂದೇಟು ಹಾಕಿದ್ದಾರೆ.

RELATED ARTICLES

Related Articles

TRENDING ARTICLES