Sunday, January 19, 2025

ಯುವತಿಗೆ ಮೆಸೇಜ್ ಮಾಡಿದಕ್ಕೆ ದಲಿತ ಯುವಕನಿಗೆ ಥಳಿತ

ದಾವಣಿಗೆರೆ : ಯುವತಿಗೆ ಮೆಸೇಜ್ ಮಾಡುತ್ತಿದ್ದ ಎಂಬ ಕಾರಣಕ್ಕೆ ಕಂಬಕ್ಕೆ ಕಟ್ಟಿ ಹಾಕಿ ಮನಬಂದಂತೆ ಹಲ್ಲೆ ಮಾಡಿದ ಘಟನೆ ದಾವಣಗೆರೆಯ ಅತ್ತಿಗೆರಿಯಲ್ಲಿ ನಡೆದಿದೆ.

ಯುವತಿಗೆ ಮೆಸೇಜ್ ಮಾಡುತ್ತಿದ್ದ ಎಂಬ ಕಾರಣಕ್ಕೆ ಯುವಕನಿಗೆ ಮನಬಂದಂತೆ ಥಳಿಸಿದ ಯುವತಿ ಸಂಬಂಧಿಕರು ತಪ್ಪಾಗಿದೆ ಬಿಡ್ರಿ ಅಂದ್ರು ಬಿಡದೆ ಹಿಗ್ಗಾಮುಗ್ಗಾ ಥಳಿಸಿದ್ದು, ನೀರು ಕುಡಿಯಲು ಬಿಡದೆ ಅಮಾನವೀಯವಾಗಿ ಹಲ್ಲೆ ಮಾಡಿದ್ದಾರೆ.

ಇನ್ನು, ಹಲ್ಲೆಯಿಂದ ಹೆದರಿ ಮಹಡಿಯಿಂದ ಕೆಳಗೆ ಹಾರಿದ ಯುವಕ ಮತ್ತೆ ಹಿಡಿದು ತಂದು ಮನಬಂದಂತೆ ಹಲ್ಲೆ ಮಾಡಿದ್ದು, ಅದುವಲ್ಲದೇ, ಯುವಕನ ಬಟ್ಟೆ ಬಿಚ್ಚಿಸಿ ಗ್ರಾಮದಲ್ಲಿ ಮೆರವಣಿಗೆ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸದ್ಯ ಸರ್ಕಾರಿ ಆಸ್ಪತ್ರೆಯಲ್ಲಿ ಯುವಕನಿಗೆ ಚಿಕಿತ್ಸೆ ನೀಡಿದ್ದು, ಮಾಯಕೊಂಡ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES

Related Articles

TRENDING ARTICLES