Monday, December 23, 2024

ಥಿಯೇಟರ್​​ನಲ್ಲಿ ನಿಂತಿಲ್ಲ ಅವತಾರ ಪುರುಷನ ದರ್ಬಾರ್​

ಸಿಂಪಲ್ ಸುನಿ ಸಿನಿಮಾಗಳಂದ್ರೆ ಮಸ್ತ್​ ಮನರಂಜನೆಗೇನು ಕೊರತೆಯಿಲ್ಲ ಬಿಡಿ. ಸುನಿ ಆಕ್ಷನ್​ ಕಟ್​​ ಹೇಳಿರೋ ಅವತಾರ ಪುರುಷ ಚಿತ್ರ ಬೆಳ್ಳಿತೆರೆಯ ಮೇಲೆ ಗೆಲುವಿನ ನಾಗಾಲೋಟ ಮುಂದುವರೆಸಿದೆ. ಕಾಮಿಡಿ ಕಿಂಗ್​ ಶರಣ್​, ಪಟಾಕಿ ಪೋರಿ ಆಶಿಕಾ ಕಾಂಬಿನೇಷನ್​ಗೆ ಚಿತ್ರರಸಿಕರು ಫುಲ್​ ಮಾರ್ಕ್ಸ್​ ಕೊಟ್ಟಿದ್ದಾರೆ. ಹಾಗಾದ್ರೆ ಅವತಾರ ಪುರುಷನ ಹಾವಳಿ ಹೇಗಿದೆ ನೀವೇ ಓದಿ.

ಮಾಟ ಮಂತ್ರ ಗಿಮಿಕ್​​.. ಫುಲ್​ ಕಾಮಿಡಿ ಕಿಕ್ಕು
ಸದ್ಯದಲ್ಲೆ ಬರಲಿದೆ ಅವತಾರ ಪುರುಷ 2 ಸಿನಿಮಾ
ಜ್ಯೂನಿಯರ್​ ಆರ್ಟಿಸ್ಟ್​​ ಅನಿಲನ ಭರ್ಜರಿ ಗೆಲುವು

ಸಿಂಪಲ್​ ಸುನಿಯ ಸಿನಿಮಾ ನೋಡಿದವ್ರಿಗೆ ಅವ್ರ ಸಿಗ್ನೇಚರ್​ ಸ್ಟೈಲ್​ ಫೀಲ್​ ಆಗಿರುತ್ತೆ. ಪಕ್ಕಾ ಪೈಸಾ ವಸೂಲ್​ ಸಿನಿಮಾ ಮಾಡೋದು ಸುನಿಯ ಸ್ಪೆಷಾಲಿಟಿ. ಆ ಸಾಲಿಗೆ ಮಸ್ತ್​ ಮನರಂಜನೆ ಕೊಟ್ಟು ಚಿತ್ರಪ್ರೇಮಿಗಳ ಮನಗೆದ್ದಿರೋ ಸಿನಿಮಾ ಅವತಾರ ಪುರುಷ. ಶರಣ್​ ಮಸ್ತ್​ ಆಕ್ಟಿಂಗ್​, ಎಲ್ರಿಗು ಸಖತ್ ಇಂಪ್ರೆಸ್ಸಿವ್​ ಆಗಿದೆ. ವೆನಿಲ್ಲಾ ಐಸ್​ ಕ್ರೀಮ್​ ಮೇಲೆ ಚೆರ್ರಿ ಹಣ್ಣಿನಂತಿರೋ ಆಶಿಕಾ ಪಡ್ಡೆ ಹೈಕಳ ಎದೆಗೆ ಚುಟು ಚುಟು ಕಚಗುಳಿ ಕೊಟ್ಟಿದ್ದಾರೆ. ಇದ್ರೊಂದಿಗೆ ಚಿತ್ರದ ಸಕ್ಸಸ್ ಖುಷಿಯಲ್ಲಿದೆ ಚಿತ್ರತಂಡ.

ಸಿಂಪಲ್ ಸುನಿ ಸಿನಿಮಾಗಳಲ್ಲಿ ಕಾಮಿಡಿಗೆ ಹೆಚ್ಚು ಇಂಪಾರ್ಟೆನ್ಸ್​. ಅವತಾರ ಪುರುಷ ಸಿನಿಮಾದಲ್ಲಿ ತಂತ್ರ ಮಂತ್ರ ಹಾಗೂ ಹಾಸ್ಯವನ್ನು ಹದವಾಗಿ ಬೆರೆಸಿ ಚಿತ್ರರಸಿಕರಿಗೆ ಕಾಮಿಡಿ ಜೊತೆ ಥ್ರಿಲ್ಲಿಂಗ್​ ಎಲಿಮೆಂಟ್ಸ್​​ ಫೀಲ್​ ಕೊಡಲಾಗಿದೆ. ಕಾಮಿಡಿ ಪಂಚ್​​, ಅಮ್ಮನ ಸೆಂಟಿಮೆಂಟ್​​,, ಗ್ಲಾಮರಸ್​ ಗೊಂಬೆ ಆಶಿಕಾ ಅಭಿನಯದ ಜೊತೆ ಕಮರ್ಷಿಯಲ್​ ಸಿನಿಮಾ ಅವತಾರ ಪುರುಷ ಸಕ್ಸಸ್ ಕಂಡಿದೆ.

ಅವತಾರ ಪುರುಷ ತೆರೆಕಂಡ ಎಲ್ಲಾ ಚಿತ್ರಮಂದಿರಗಳಲ್ಲೂ ಹೌಸ್​ ಫುಲ್​ ಪ್ರದರ್ಶನ ಕಾಣ್ತಿದೆ. ಟೆಕ್ನಿಕಲ್ಲಿ ಸಖತ್​ ಆಗಿರೋ ಚಿತ್ರಕ್ಕೆ ಅರ್ಜುನ್​ ಜನ್ಯಾ ಸಂಗೀತ ಇನ್ನಷ್ಟು ಮೈಲೇಜ್​ ಕೊಟ್ಟಿದೆ. ಬ್ಲ್ಯಾಕ್ ಮ್ಯಾಜಿಕ್ ದೃಶ್ಯಗಳನ್ನು ಇಟ್ಟು ಬೇರೆಯದೇ ​ ಲಾಜಿಕ್​ ಲೆಕ್ಕಚಾರ ಹಾಕಿರೋ ಸುನಿಯ ತಂತ್ರಗಳು ಪ್ರೇಕ್ಷಕರಿಗೆ ರೀಚ್​ ಆಗಿವೆ.ಸಾಯಿಕುಮಾರ್​, ಸುಧಾರಾಣಿ, ಸಾಧುಕೋಕಿಲ, ಶ್ರೀನಗರ ಕಿಟ್ಟಿ, ಮುಂತಾದವರ ತಾರಾಗಣದಲ್ಲಿ ಅದ್ಧೂರಿಯಾಗಿ ಸಿನಿಮಾ ಮೂಡಿ ಬಂದಿದೆ.

ಸಿಂಪಲ್​ ಕಥೆಗೆ ಕಾಮಿಡಿ ಚಮಕ್​ ಕೊಟ್ಟು ಮಾಟ ಮಂತ್ರ ವಾಮಾಚಾರದ ಉಪ್ಪಿನಕಾಯಿ ಬೆರೆಸಿ , ಭರ್ಜರಿ ಬಾಡೂಟವನ್ನು ಬಡಿಸಲಾಗಿದೆ. ಮೊದಲ ವಾರದಲ್ಲೆ ಸಿನಿಮಾದ ಪ್ರತಿಕ್ರಿಯೆ ಕಂಡ ಪ್ರೇಕಕ ನಿಧಾನವಾಗಿ ಥಿಯೇಟರ್​ ಕಡೆ ಲಗ್ಗೆ ಇಡ್ತಿದ್ದಾನೆ. ಮೌತ್​ ಟು ಮೌತ್​ ಸಿನಿಮಾಗೆ ಪಾಸಿಟಿವ್​ ರೆಸ್ಪಾನ್ಸ್​ ಸಿಕ್ತಿರೋದ್ರಿಂದ ಸುನಿ ಸೇಫರ್​ ಸೈಡ್​​ ಕಂಫರ್ಟ್​ ಜೋನ್​​ನಲ್ಲಿದ್ದಾರೆ.

ಪ್ರತಿ ಸಿನಿಮಾಗಳಲ್ಲೂ ಒಂದಿಲ್ಲೊಂದು ಪ್ರಯೋಗ ಮಾಡ್ತಾ ಗೆಲುವಿನ ನಗೆ ಬೀರ್ತಿರೋ ಸಿಂಪಲ್​ ಸುನಿ ಈ ಸಿನಿಮಾ ಮೂಲಕ ಮತ್ತೆ ಕಮ್​ ಬ್ಯಾಕ್​ ಆಗಿದ್ದಾರೆ.. ಚಿತ್ರದ ಕ್ಲೈಮ್ಯಾಕ್ಸ್​ ಪಾರ್ಟ್ ಟು ಟ್ವಿಸ್ಟ್​ ಕೊಟ್ಟಿದ್ದ ಚಿತ್ರತಂಡ ಬಹುತೇಕ ಸೀಕ್ವೆಲ್​ ಸಿನಿಮಾದ ಶೂಟಿಂಗ್​ ಕಂಪ್ಲೀಟ್​ ಮಾಡಿದೆ. ಶರಣ್​ ಕಾಮಿಡಿ ಕಚಗುಳಿ ನೋಡಬೇಕಾದ್ರೆ ಅವತಾರ ಪುರುಷನ ಅವತಾರವನ್ನು ನೋಡಲೇಬೇಕು.

ಫಿಲ್ಮ್​ ಬ್ಯೂರೋ.. ಪವರ್​ ಟಿವಿ.

RELATED ARTICLES

Related Articles

TRENDING ARTICLES