Saturday, November 23, 2024

ಟೊಮ್ಯಟೋ ಫೀವರ್ ಟೆಸ್ಟ್ ಬಗ್ಗೆ ಗೊಂದಲದಲ್ಲಿರುವ ಆರೋಗ್ಯ ಇಲಾಖೆ

ಬೆಂಗಳೂರು: ಕೇರಳದಲ್ಲಿ ಮಕ್ಕಳಲ್ಲಿ ಹೆಚ್ಚಾಗ್ತಿರುವ ಟೊಮ್ಯಾಟೊ ಫ್ಲೂ ವೈರಸ್ ದಿನದಿಂದ ದಿನಕ್ಕೆ ಆತಂಕ ಹೆಚ್ಚಿಸ್ತಿದೆ ಸದ್ಯಕ್ಕೆ 82 ಕ್ಕೂ ಹೆಚ್ಚಿನ ಮಕ್ಕಳಲ್ಲಿ ಸೋಂಕು ಪತ್ತೆಯಾಗಿದ್ದು ಈ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಇನ್ನು ರಾಜ್ಯದ ಆರೋಗ್ಯ ಇಲಾಖೆ ಸಹ ಮುನ್ನೆಚ್ಚರಿಕೆ ವಹಿಸಿದೆ ಕೇರಳ ರಾಜ್ಯದ ಗಡಿ ಭಾಗದ ಜಿಲ್ಲೆಗಳಲ್ಲಿ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ. ಈ ಮಧ್ಯೆ ಆರೋಗ್ಯ ಇಲಾಖೆಗೆ ಮತ್ತೊಂದು ಟೆನ್ಷನ್ ಶುರುವಾಗಿದೆ ಟೊಮ್ಯೋಟೋ ಫೀವರ್ ಟೆಸ್ಟ್ ಬಗ್ಗೆ ಯಾರಿಗೂ ಮಾಹಿತಿಯೇ ಸಿಗ್ತಿಲ್ಲ. ಫೀವರ್ ಅನ್ನ  ಹೇಗೆ ಟೆಸ್ಟ್ ಮಾಡಬೇಕು ಅನ್ನೊ ಬಗ್ಗೆ ಗೊಂದಲದಲ್ಲಿದೆ ಆರೋಗ್ಯ ಇಲಾಖೆ. ಟೊಮ್ಯೋಟೋ ಜ್ವರ ಹರುಡುವಿಕೆಯ ವೇಗ ಚಿಕಿತ್ಸೆಯ ಬಗ್ಗೆ ಕೂಡಾ ಸ್ಪಷ್ಟವಾದ ಚಿತ್ರಣ ಸಿಕ್ಕಿಲ್ಲ, ಈ ಸಮಸ್ಯೆ ಆರೋಗ್ಯ ಇಲಾಖೆಗೆ ಮತ್ತಷ್ಟು ಟೆನ್ಷನ್ ಹೆಚ್ಚಿಸಿದೆ. ಗಡಿ ಜಿಲ್ಲೆಗಳಲ್ಲಿ ಹೆಚ್ಚು ಸರ್ವೈಲೆನ್ಸ್ ಮಾಡಲು ಸೂಚನೆ ಕೊಟ್ಟಿದ್ರು ಸಹ ವೈರಸ್ ಪತ್ತೆ ಮಾಡೋದು ಗೊಂದಲದ ಗೂಡಾಗಿದೆ.

ಕೋವಿಡ್ ತಾಂತ್ರಿಕ ಸಲಹಾ ಸಮಿತಿಯು ಆರೋಗ್ಯ ಇಲಾಖೆಗೆ ಟೊಮ್ಯೋಟೋ ಜ್ವರದ ಬಗ್ಗೆ ಅಲರ್ಟ್ ನೀಡಿದೆ.  ಕೊರೋನಾ ಆರಂಭಿಕ ಹಂತದ ರೀತಿ ತಾತ್ಸಾರ ಮಾಡಬೇಡಿ ಎಚ್ಚರವಾಗಿರಿ ಸೋಂಕಿನ ಬಗ್ಗೆ ಮಾಹಿತಿ ಕಲೆ ಹಾಕಿ ಚಿಕಿತ್ಸೆ ಬಗ್ಗೆ ಗಮನಹರಿಸಿ ಎಂದಿದೆ. ಟ್ಯಾಕ್ ಸಲಹೆಯಂತೆ ಟೊಮ್ಯೋಟೋ ಜ್ವರದ ಸ್ಪ್ರೆಡಿಂಗ್ ತೀವ್ರತೆ ಬಗ್ಗೆ ಆರೋಗ್ಯ ಇಲಾಖೆ ಸ್ಟಡಿ ಮಾಡ್ತಿದೆ, ಹೆಚ್ಚು ಹರಡುವಿಕೆ ಕಂಡು ಬಂದರೆ ಕೋವಿಡ್ ಐಸೋಲೇಷನ್ ಮೆಷರ್ಸ್ ತೆಗೆದುಕೊಳ್ಳಲು ಚಿಂತನೆ ನಡೆಸಲಾಗುತ್ತಿದೆ. ಸದ್ಯಕ್ಕೆ ಕೇರಳದಿಂದ ಬರುವ ಬಸ್, ಟ್ರೈನ್​ಗಳಲ್ಲಿ ತಪಾಸಣೆ ನಡೆಸಲಾಗ್ತಿದೆ. ಜ್ವರ, ಮೈಮೇಲೆ ಗುಳ್ಳೆ ಇರುವ ಮಕ್ಕಳು ಕಂಡುಬಂದ್ರೆ ಅದಕ್ಕೆ ಟ್ರೀಟ್ ಮಾಡಲಾಗ್ತಿದೆ. ಆದ್ರೆ ಕೆಲ ವೈದ್ಯರು ಈ ಫೀವರ್ ಗಾಳಿಯ ಮೂಲಕ ಹರಡುತ್ತೆ ಅಂದ್ರೆ, ಕೆಲವರು ಸ್ಪರ್ಷದಿಂದ ಬರುತ್ತೆ ಅಂತಿರೋದು ಪೋಷಕರಿಗೆ‌ ಮತ್ತಷ್ಟು ಆತಂಕ ಹೆಚ್ಚಿಸ್ತಿದೆ.

ಸದ್ಯ ರಾಜ್ಯಕ್ಕೆ ಆತಂಕ ಸೃಷ್ಟಿಸಿರುವ ಟೊಮ್ಯಾಟೊ ಫ್ಲೂ ವೈರಸ್ ಪತ್ತೆಗೆ ಸಂಶೋಧನೆಗಳು ನಡೆಯುತ್ತಿದ್ದು ಚಿಕಿತ್ಸೆ ಬಗ್ಗೆ ವೈದ್ಯರು ತಲೆಕೆಡಿಸಿಕೊಂಡಿದ್ದಾರೆ. ಕೊರೋನಾಗೆ ಬಳಸಿದ ಟೆಸ್ಟ್, ಚಿಕಿತ್ಸೆ ವಿಧಾನವನ್ನೇ ಅನುಸರಿಸ್ತಿದ್ದು ಮುಂದೆ ಸೋಂಕು ಮಕ್ಕಳ ಮೇಲೆ ಯಾವ ರೀತಿ ಪ್ರಭಾವ ಬೀರುತ್ತೆ ಎಂಬುದನ್ನ ಕಾದುನೋಡಬೇಕಿದೆ.

RELATED ARTICLES

Related Articles

TRENDING ARTICLES