Thursday, January 23, 2025

RCB ಗೆ ಪಂಜಾಬ್​ ವಿರುದ್ಧ ಹೀನಾಯ ಸೋಲು

ಪಂಜಾಬ್​ ಅಬ್ಬರಕ್ಕೆ ಸಿಕ್ಕು ನಲುಗಿದ RCB ತಂಡ 54 ರನ್​ಗಳ ಹೀನಾಯ ಸೋಲನುಭವಿಸುವ ಮೂಲಕ ಫ್ಲೇ- ಆಫ್​ ತಲುಪುವ ಹಾದಿಯನ್ನು ಕಠಿಣವನ್ನಾಗಿಸಿಕೊಂಡಿದೆ.

ಪಂಜಾಬ್ ತಂಡದ ಬ್ಯಾಟಿಂಗ್ ಅಬ್ಬರ ಹಾಗೂ ಶಿಸ್ತಿನ ಬೌಲಿಂಗ್ ದಾಳಿಯ ಮುಂದೆ ನೀರಸ ಆಟವಾಡಿದ RCB ತಂಡ IPL 2022ರಲ್ಲಿ ತನ್ನ 6ನೇ ಸೋಲು ಕಂಡಿದೆ. ಇದರೊಂದಿಗೆ ಸುಲಭವಾಗಿ ಪ್ಲೇ ಆಫ್ ಗೇರುವ ಅವಕಾಶ ಹೊಂದಿದ್ದ RCB ತಂಡವೀಗ ತನ್ನ ಕೈಯಾರೆ ಈ ಅವಕಾಶವನ್ನು ಕಳೆದುಕೊಂಡಿದೆ.

ಪಂಜಾಬ್ ದೊಡ್ಡ ಹೊಡೆತ ನೀಡಿ 54 ರನ್​​ಗಳ ಬೃಹತ್ ಅಂತರದಿಂದ RCB ತಂಡವನ್ನ ಸೋಲಿಸಿತು..ಈ ವೇಳೆ ದಿನೇಶ್ ಕಾರ್ತಿಕ್ ಹಾಗೂ ಶಾಬಾಜ್ ಅಹ್ಮದ್ ಮೇಲೆ ತಂಡ ನಿರೀಕ್ಷೆ ಇಟ್ಟಿತ್ತು. 11 ಎಸೆತಗಳಲ್ಲಿ 11 ರನ್ ಬಾರಿಸಿ ದಿನೇಶ್ ಕಾರ್ತಿಕ್ ನಿರ್ಗಮನ ಕಂಡ ಬಳಿಕ, RCB ಗೆಲುವಿನ ಹೋರಾಟ ಬಹುತೇಕ ಮುಕ್ತಾಯಗೊಂಡಿತು.

RELATED ARTICLES

Related Articles

TRENDING ARTICLES