Saturday, December 28, 2024

PSI ಅಕ್ರಮ : 32 ಆರೋಪಿಗಳಿಗೆ ಜೈಲೇ ಗತಿ

ಕಲಬುರಗಿ : PSI ನೇಮಕಾತಿ ಪರೀಕ್ಷೆ ಅಕ್ರಮ ಪ್ರಕರಣದ ಕುಣಿಕೆ ದಿನದಿಂದ ದಿನಕ್ಕೆ ಬಿಗಿಯಾಗುತ್ತಿದೆ. ಈಗಾಗಲೇ 32 ಜನ ಆರೋಪಿಗಳನ್ನ ಸಿಐಡಿ ಅಧಿಕಾರಿಗಳು ಜೈಲಿಗೆ ಕಳುಹಿಸಿದ್ದಾರೆ.

ಇನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ಇಲ್ಲಿವರಗೆ 32 ಜನರನ್ನು ಸಿಐಡಿ ಅಧಿಕಾರಿಗಳು ಬಂಧಿಸಿದ್ದು, ಇದೀಗ 32 ಜನರ ವಿಚಾರಣೆ ನಿನ್ನೆಗೆ ಮುಕ್ತಾಯವಾಗಿದೆ. ಆರೋಪಿಗಳ ಪೈಕಿ ಯಾರೊಬ್ಬರಿಗೂ ಜಾಮೀನು ಸಿಗದ ಹಿನ್ನೆಲೆ 32 ಜನರಿಗೂ ಇದೀಗ ಜೈಲು ಭಾಗ್ಯ ಫಿಕ್ಸ್ ಆಗಿದೆ. ಎಲ್ಲರನ್ನು ಕಲಬುರಗಿ ಕೇಂದ್ರ ಕಾರಾಗೃಹಕ್ಕೆ ಸಿಐಡಿ ಸಿಬ್ಬಂದಿ ಕಳುಹಿಸಿದ್ದಾರೆ.

ನಗರದ ಐವಾನ್ ಈ ಶಾಹಿ ಅತಿಥಿ ಗೃಹದಲ್ಲಿರೋ ಸಿಐಡಿ ಕಚೇರಿ, ಕಳೆದ 1 ತಿಂಗಳಿಂದ ಆರೋಪಿಗಳಿಂದ ತುಂಬಿ ಹೋಗಿತ್ತು. ತಿಂಗಳ ನಂತರ ಮೊದಲ ಬಾರಿಗೆ ಆರೋಪಿಗಳಿಲ್ಲದೆ ಸಿಐಡಿ ಕಚೇರಿ ಖಾಲಿಯಾಗಿದೆ.

ಸದ್ಯ ಸಿಐಡಿ ಅಧಿಕಾರಿಗಳು ಎರಡನೇ ಹಂತದ ಕಾರ್ಯಾಚರಣೆಗೆ ಸಿದ್ದತೆ ನಡೆಸಿದ್ದಾರೆ. ಕಿಂಗ್​​ಪಿನ್ ಕಾಶಿನಾಥ ಮತ್ತು ಬಿಜೆಪಿ ನಾಯಕಿ ದಿವ್ಯಾ ಹಾಗರಗಿ ಮಾತು ನಂಬಿ ಅಕ್ರಮಕ್ಕೆ ನೆರವಾಗಿದ್ದ ಜ್ಞಾನಜ್ಯೋತಿ ಇಂಗ್ಲಿಷ್ ಶಾಲೆಯ ಶಿಕ್ಷಕಿಯರು ಪ್ರಸ್ತುತ ಕಲಬುರಗಿ ಜಿಲ್ಲಾ ಕಾರಾಗೃಹದಲ್ಲಿ ಪರದಾಡುತ್ತಿದ್ದಾರೆ.

RELATED ARTICLES

Related Articles

TRENDING ARTICLES