Sunday, May 12, 2024

ಸಿನಿಮಾ ಇಂಡಸ್ಟ್ರಿಗೆ ಕೂಲ್ ಕ್ಯಾಪ್ಟನ್ ಎಂಟ್ರಿ

ಕ್ರಿಕೆಟ್ ಜಗತ್ತಿನ ದಂತಕಥೆ ಮಹೇಂದ್ರ ಸಿಂಗ್​​​ ಧೋನಿ ಯಾರಿಗೆ ತಾನೇ ಗೊತ್ತಿಲ್ಲ. ಚಿಕ್ಕ ಮಕ್ಕಳಿಂದ ಹಿಡಿದು ಹಣ್ಣು ಹಣ್ಣು ಮುದುಕರು ಕೂಡ ಧೋನಿ ಬ್ಯಾಟಿಂಗ್​ ಸ್ಟೈಲ್​ಗೆ ಫಿದಾ ಆಗಿದ್ದಾರೆ. ಆದ್ರೆ ಅಸಲಿಗೆ ರಿಯಲ್ ಮ್ಯಾಟ್ರು ಇದಲ್ಲ. ಫೀಲ್ಡ್​ ಅಲ್ಲಿ ಸಿಕ್ಸರ್ ಬಾರಿಸೋ ಧೋನಿ ಬಣ್ಣದ ಲೋಕಕ್ಕೆ ಎಂಟ್ರಿ ಕೊಡ್ತಿದ್ದಾರೆ. ಅರೆ,, ಏನಿದು ವಿಷ್ಯ, ಧೋನಿ ಹೀರೋ ಆಗ್ತಾರಾ ಅಂತೀರಾ..?

  • ಕಾಲಿವುಡ್​ಗೂ ಮಾಹಿಗೂ ಇದೆ ಮರೆಯಲಾಗದ ನಂಟು
  • ಚೆನ್ನೈ ಮೇಲಿನ ಪ್ರೀತಿಗೆ ಮೊದಲ ಸಿನಿಮಾ ಗಿಫ್ಟ್​
  • ಸಿನಿಮಾ ಇಂಡಸ್ಟ್ರಿಗೆ ಕೂಲ್ ಕ್ಯಾಪ್ಟನ್ ಎಂಟ್ರಿ
  • ನಯನತಾರಾ ಮೇಲೆ ಬಿತ್ತು ಧೋನಿ ಕಣ್ಣು

ಕ್ರಿಕೆಟ್​ ಜಗತ್ತಿನ ಅನಭಿಷಕ್ತ ದೊರೆ, ಹೆಲಿಕಾಪ್ಟರ್​ ಶಾಟ್​ಗೆ ಹೊಸ ಭಾಷ್ಯ ಬರೆದ ಕೂಲ್ ಕ್ಯಾಪ್ಟನ್ ಮಹೇಂದ್ರ ಸಿಂಗ್​ ಧೋನಿ ಸದ್ಯ ಐಪಿಎಲ್ ನಲ್ಲಿ ಸಖತ್ ಬ್ಯುಸಿ ಇದ್ದಾರೆ. ಕೇವಲ ಕ್ರಿಕೆಟ್​ ಮಾತ್ರವಲ್ಲದೆ ದೇಶದ ಬಗ್ಗೆಯೂ ಕಾಳಜಿ ಇರುವ ಧೋನಿ ಆಂದ್ರೆ ಕೋಟ್ಯಂತರ ಅಭಿಮಾನಿಗಳಿಗೆ ಪಂಚಪ್ರಾಣ. ಇದೀಗ ಅಭಿಮಾನಿಗಳಿಗೆ ಧೋನಿ ಕಡೆಯಿಂದ  ಸರ್ಪ್ರೈಸಿಂಗ್ ನ್ಯೂಸ್  ಸಿಕ್ಕಿದೆ.  ಮಾಹಿ ಬ್ಯಾಟ್​ ಹಿಡಿದು ಫಿಲ್ಮ್​ ಫೀಲ್ಡ್​ಗೆ ಗ್ರ್ಯಾಂಡ್​ ಎಂಟ್ರಿ ಕೊಟ್ತಿದ್ದಾರೆ.

ಅಷ್ಟಕ್ಕೂ ಧೋನಿಗೆ ಸಿನಿಮಾವೇನು ಹೊಸತಲ್ಲ. ಧೋನಿಯ ಬಯೋಪಿಕ್ ಸಿನಿಮಾ ಭಾರತೀಯ ಚಿತ್ರರಂಗದಲ್ಲೆ ಹೊಸ ದಾಖಲೆ ಬರೆದ ವಿಷ್ಯ ನಿಮಗೆಲ್ಲಾ ಗೊತ್ತೇ ಇದೆ. ಸುಶಾಂತ್ ಸಿಂಗ್​ ರಜಪೂತ್​  ಈ ಸಿನಿಮಾದಲ್ಲಿ ಧೋನಿಯಾಗಿ ಕಾಣಿಸಿಕೊಂಡು ಅದ್ಭುತವಾಗಿ ನಟಿಸಿದ್ರು. ಈ ಸಿನಿಮಾ ನೋಡಿದ್ಮೇಲಂತೂ ಧೋನಿ ಮೇಲಿನ ಫ್ಯಾನ್ಸ್ ಕ್ರೇಜ್ ಜಾಸ್ತಿ ಆಯ್ತು.

ಧೋನಿ ಅನ್​ ಟೋಲ್ಡ್ ಸ್ಟೋರಿ ಚಿತ್ರದ ಪ್ರಮೋಷನ್​ಗೆ ಸ್ವತಃ ಮಾಹಿಯೇ ಭಾಗಿಯಾಗಿದ್ದು ವಿಶೇಷ. ಸಿನಿಮಾ ಲೋಕದ ಬಗ್ಗೆ ಚೆನ್ನಾಗಿ ಅರಿತಿರುವ ಧೋನಿ ಸಿನಿಮಾ ನಟನಾಗಿ ಕಾಣಿಸಿಕೊಂಡ್ರು ಅಚ್ಚರಿಯಿಲ್ಲ. ಆ ಚಾರ್ಮ್​​​​​​ ಕೂಡ ಕೂಲ್​ ಕ್ಯಾಪ್ಟನ್​ಗೆ ಇದೆ.. ಆದ್ರೆ ಸದ್ಯ ಧೋನಿ ಸಿನಿಮಾ ಲೋಕಕ್ಕೆ ಎಂಟ್ರಿ ಕೊಡ್ತಾ ಇರೋದು ನಿರ್ಮಾಪಕರಾಗಿ. ತಮ್ಮ ಮೊದಲ ಸಿನಿಮಾವನ್ನ ಧೋನಿ ತಮಿಳಿನಲ್ಲಿ ನಿರ್ಮಾಣ ಮಾಡಲಿದ್ದಾರೆ. ಈ ಸಿನಿಮಾಗಾಗಿ ನಯನತಾರಾ ಮೇಲೆ ಮಾಹಿ ಕಣ್ಣು ಬಿದ್ದಿದೆ.

ಕ್ರಿಕೆಟ್​ ಗ್ರೌಂಡ್​​ನಲ್ಲಿ ಮಾಹಿ ಅಬ್ಬರಿಸಲಿ ಇಲ್ಲದಿರಲಿ ಅಭಿಮಾನಿಗಳು ಮಾತ್ರ ಧೋನಿ ಅಂದ್ರೆ ಹುಚ್ಚೆದ್ದು ಕುಣೀತಾರೆ. ಇನ್ನು ಧೋನಿ ನಿರ್ಮಾಣ ಮಾಡ್ತಿರೋ ಮೊದಲ ಸಿನಿಮಾ ಅಂದ್ರೆ ಗೆಲ್ಲಿಸದೆ ಇರ್ತಾರಾ..? ನೋ ಡೌಟ್​ ಸಿನಿಮಾ ಸಕ್ಸಸ್ ಕಟ್ಟಿಟ್ಟ ಬುತ್ತಿ ಅನ್ನೋದು ಅಭಿಮಾನಿಗಳ ಅಭಿಪ್ರಾಯ . ಆದ್ರೆ ಧೋನಿ ಕಾಲಿವುಡ್​ಗೆ ಎಂಟ್ರಿ ಕೊಟ್ಟಿದ್ದಕ್ಕೆ ಕಾರಣ ಬೇರೇನೆ ಇದೆ.

ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕನಾಗಿ ಬರೋಬ್ಬರಿ ನಾಲ್ಕು ಟ್ರೋಫಿ ಗೆದ್ದುಕೊಟ್ಟಿರುವ ಧೋನಿ ಕಂಡ್ರೆ ಕಾಲಿವುಡ್​ ಮಂದಿಗೆ ಸಿಕ್ಕಾಪಟ್ಟೆ ಪ್ರೀತಿ. ಚೆನ್ನೈ ಮಂದಿ ಮಾಹಿಯನ್ನು ತಲಾ ಅಂತಲೇ ಪ್ರೀತಿಯಿಂದ ಕರಿತಾರೆ . ಈ ಅಭಿಮಾನಿಕ್ಕಾಗಿಯೇ ಧೋನಿ ತಮ್ಮ ಮೊದಲ ಸಿನಿಮಾವನ್ನು ಕಾಲಿವುಡ್​​ನಲ್ಲಿ ನಿರ್ಮಾಣ ಮಾಡ್ತಿದ್ದಾರೆ ಅನ್ನೋ ಸುದ್ದಿ ಇದೆ.

ವುಮನ್ ಓರಿಯೆಂಟೆಡ್ ಕಥೆ ಇರೋ ಈ ಸಿನಿಮಾಗೆ ನಿರ್ದೇಶಕ ಶಿವನ್ ವಿಘ್ನೇಶ್ ಆ್ಯಕ್ಷನ್ ಕಟ್ ಹೇಳಲಿದ್ದಾರಂತೆ. ಸೂಪರ್ ಸ್ಟಾರ್​​ ರಜನಿಕಾಂತ್​ ಆಪ್ತನಿಗೆ ಈ ಸಿನಿಮಾ ನಿರ್ಮಾಣದ ಜವಾಬ್ದಾರಿಯನ್ನು ಧೋನಿ ವಹಿಸಿಕೊಟ್ಟಿದ್ದಾರೆ ಎನ್ನಲಾಗ್ತಿದೆ. ಒಟ್ನಲ್ಲಿ ಕ್ರಿಕೆಟ್​ ಲೋಕದಲ್ಲಿ ಟೆಕ್ನಿಕಲ್ ಕೂಲ್ ಮೈಂಡ್​​ನಿಂದ ಸಕ್ಸಸ್ ಪೀಕ್​​​​ನಲ್ಲಿರೋ ಟಾಪ್​ ಕ್ಲಾಸ್​ ಫಿನಿಶರ್​ ಧೋನಿ ಕಾಲಿವುಡ್​​ನಲ್ಲೂ ಟಾಪ್ ಕ್ಲಾಸ್ ಫಿನಿಶರ್ ಆಗ್ತಾರಾ ಅನ್ನೋದು ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ. ​

ಎಂಟರ್​ಟೇನ್​​ಮೆಂಟ್ ಬ್ಯೂರೋ, ಪವರ್ ಟಿವಿ

RELATED ARTICLES

Related Articles

TRENDING ARTICLES