Tuesday, December 24, 2024

ಸರ್ವೆ ಅಧಿಕಾರಿಗೆ ಹಿಗ್ಗಾಮುಗ್ಗಾ ಕ್ಲಾಸ್​ ತೆಗೆದುಕೊಂಡ ರೈತ ಮಹಿಳೆ

ಮಂಡ್ಯ : ರೈತ ಮಹಿಳೆಗೆ ಅವಾಚ್ಯ ಶಬ್ದಗಳಿಂದ ನಿಂದನೆ ಆರೋಪ ಹಿನ್ನೆಲೆ ಮಹಿಳೆ ಸರ್ವೇಯರ್​​​ಗೆ ತರಾಟೆಗೆ ತೆಗೆದುಕೊಂಡ ಘಟನೆ ಮಂಡ್ಯದ ಪಾಂಡವಪುರದಲ್ಲಿ ನಡೆದಿದೆ.

ಬೇವನಕುಪ್ಪೆ ಗ್ರಾಮದ ರೈತ ಮಹಿಳೆ ಅನುಸೂಯ, ಸರ್ವೇಯರ್ ಭಾಸ್ಕರ್​​ ಎಂಬ ಅಧಿಕಾರಿಯನ್ನು ಹಿಗ್ಗಾಮುಗ್ಗ ತರಾಟೆಗೆ ತೆಗೆದುಕೊಂಡಿದ್ದಾರೆ. ಜಮೀನು ಸರ್ವೇ ಮಾಡುವ ವೇಳೆ ರೈತ ಮಹಿಳೆಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಾರೆಯಲ್ಲಿ ಚುಚ್ಚುವುದಾಗಿ ಸರ್ವೇಯರ್​ ಬೆದರಿಕೆ ಹಾಕಿದ್ದನಂತೆ. ಹೀಗಾಗಿ ತಹಶೀಲ್ದಾರ್ ಕಚೇರಿಗೆ ಸರ್ವೇಯರ್ ಆಗಮಿಸುತ್ತಿದ್ದಂತೆ ಮಹಿಳೆ ತರಾಟೆಗೆ ತೆಗೆದುಕೊಂಡಿದ್ದಾರೆ.

ಜಮೀನು ವಿಚಾರದಲ್ಲಿ ಕೋರ್ಟ್​ನಲ್ಲಿ ಕೇಸ್ ದಾಖಲಾಗಿದ್ದು. ಸರ್ವೇ ಮಾಡಲು ಬಂದ ವೇಳೆ ಮಾತಿನ ಚಕಮಕಿ ನಡೆದು ರೈತ ಮಹಿಳೆಗೆ ನಿಂದಿಸಿದ್ದಾರೆ. ನಂತರ ತಹಶೀಲ್ದಾರ್​ಗೆ ದೂರು ನೀಡಿ ಕ್ರಮ ವಹಿಸುವಂತೆ ಮನವಿ ಮಾಡಿದ್ದು. ರೈತ ಮಹಿಳೆಯ ಮನವಿ ತಹಶೀಲ್ದಾರ್ ನಯನ ಸ್ವೀಕರಿಸಿದ್ದು, ಈ ಬಗ್ಗೆ ವಿಚಾರಣೆ ನಡೆಸಿ ಕ್ರಮ ವಹಿಸುವ ಭರವಸೆ ನೀಡಿದ್ದಾರೆ.

RELATED ARTICLES

Related Articles

TRENDING ARTICLES