Monday, December 23, 2024

ಮತ್ತೆ ವಿವಾದದ ಸುಳಿಯಲ್ಲಿ ಕಮಲ್  ನ್ಯೂ ವೆಂಚರ್

ದಕ್ಷಿಣ ಭಾರತದ ಸ್ಟಾರ್​ ನಟ, ಆಕ್ಟಿಂಗ್​ ಮೂಲಕವೇ ಚಿತ್ರರಸಿಕರ ಎದೆಯಲ್ಲೆ ಕಮಾಲ್​ ಮಾಡಿದ ಸಕಲಕಲಾವಲ್ಲಭ ಕಮಲ್ ಹಾಸನ್. ಡೈರೆಕ್ಷನ್​, ಆಕ್ಟಿಂಗ್​, ಡ್ಯಾನ್ಸಿಂಗ್ ಎಲ್ಲಾ ವಿಭಾಗದಲ್ಲೂ ಪಂಟರ್ ಕಮಲ್. ಆದ್ರೆ ಅಚ್ಚರಿಯ ಸುದ್ಧಿ ಏನಪ್ಪಾ ಅಂದ್ರೆ,  ಕಮಲ್ ಹಾಸನ್​​​​ ವಿರುದ್ಧ ಕೇಸ್​ ದಾಖಲು ಮಾಡಲಾಗಿದೆ. ಏನ್​ ವಿಷ್ಯ ಅಂತೀರಾ..?

  • ವಿಕ್ರಮ್ ಚಿತ್ರದಿಂದ ಕಮಲ್​ಗೆ ಬಂತು ಕುತ್ತು!
  • ಪಾತಾಳ ಸಾಂಗಿಗೆ ಕಮಲ್​ ವಿರುದ್ಧ ದೂರು
  • ಮತ್ತೆ ವಿವಾದದ ಸುಳಿಯಲ್ಲಿ ಕಮಲ್  ನ್ಯೂ ವೆಂಚರ್
  • ದಶಾವತಾರಿಗೂ  ಪಾತಾಳ ಸಾಂಗಿಗೂ ಏನು ಸಂಬಂಧ.?

ವಯಸ್ಸು 66 ದಾಟಿದ್ದರೂ ಸ್ಟಿಲ್ ಯಂಗ್​ ಅಂಡ್​ ಎನರ್ಜಿಟಿಕ್ ಆಗಿರೋ  ನಟ ಕಮಲ್ ಹಾಸನ್​. ಇವ್ರ ಸಿನಿಮಾಗಳಂದ್ರೆ ಚಿತ್ರಪ್ರೇಮಿಗಳಿಗೆ ಎಲ್ಲಿಲ್ಲದ ಕ್ರೇಜ್..ಕಮಲ್  ಸಿನಿಮಾ ಸೆಟ್ಟೇರ್ತಿದ್ದ ಹಾಗೆ ಗಲ್ಲಿಯಿಂದ ಹಿಡಿದು ದಿಲ್ಲಿಯವರೆಗೂ ಸಖತ್​ ಸೌಂಡ್​ ಮಾಡಿಬಿಡುತ್ತೆ. ಇಂದಿನ ಯಂಗ್​ ಹೀರೋಗಳು ನಾಚಿ ನೀರಾಗೋ ಹಾಗೆ ಅವರ ಆ್ಯಕ್ಟಿಂಗ್​ , ಆ್ಯಕ್ಷನ್​ ಸೀನ್​ಗಳಿರುತ್ತವೆ. ಆದ್ರೆ ವಿಕ್ರಮ್ ಚಿತ್ರದ ಒಂದು ಹಾಡಿನಿಂದ ಕಮಲ್ ಹಾಸನ್​​​​ ವಿರುದ್ದ ಕೇಸ್ ದಾಖಲಾಗಿದೆ.

ಕಮಲ್ ಹಾಸನ್ ನಟಿಸಿರೋ ಮೋಸ್ಟ್​ ಎಕ್ಸ್​ಪೆಕ್ಟೆಡ್ ಮೂವಿ ವಿಕ್ರಮ್​. ಈ ಸಿನಿಮಾ ಯಾವಾಗ ರಿಲೀಸ್ ಆಗುತ್ತಪ್ಪಾ ಅಂತ  ಅಭಿಮಾನಿಗಳು ಹೊಸ ಅಪ್​ಡೇಟ್ಸ್ ಗಾಗಿ  ರಾತ್ರಿ ಹಗಲು ಗೂಗಲ್​ ಹುಡುಕ್ತಿದ್ದಾರೆ. ಇನ್ನು ಚಿತ್ರವನ್ನು ಭರ್ಜರಿಯಾಗಿ ವೆಲ್​ಕಮ್ ಮಾಡೋಕೆ ಸಕಲ ತಯಾರಿ ನಡಿತಿರೋವಾಗ್ಲೆ ಆರಂಭದಲ್ಲೆ ವಿಘ್ನ ಎದುರಾಗಿದೆ. ವಿಕ್ರಮ್ ಚಿತ್ರದಲ್ಲಿರೋ ಪಾತಾಳ ಪಾತಾಳ ಹಾಡು ಕೇಂದ್ರ ಸರ್ಕಾರವನ್ನು ಅಣಕ ಮಾಡುವಂತಿದೆ ಎಂದು ಕಮಲ್ ವಿರುದ್ದ ದೂರು ನೀಡಲಾಗಿದೆ.

ಸಿಂಗಲ್ ಟೀಸರ್​​ನಿಂದ್ಲೆ ಸಿಕ್ಕಾಪಟ್ಟೆ ಕ್ರೇಜ್​ ಹುಟ್ಟುಹಾಕಿರೋ ವಿಕ್ರಮ್​ ಚಿತ್ರತಂಡ, ಇತ್ತೀಚೆಗೆ ಪಾತಾಳ ಪಾತಾಳ ಸಾಂಗ್​ ರಿಲೀಸ್ ಮಾಡಿತ್ತು. ಸಖತ್​ ಥ್ರಿಲ್ಲಿಂಗ್​ ಆಗಿದ್ದ ಫ್ಯಾನ್ಸ್​ಗಳು ಪಾತಾಳ ಸಾಂಗ್​ನ್ನು ಯ್ಯೂ ಟ್ಯೂಬ್​ನಲ್ಲಿ ದಾಖಲೆ ಮಟ್ಟದಲ್ಲಿ ವೀಕ್ಷಣೆ ಮಾಡಿದ್ರು. ಆದ್ರೆ, ಈ ಹಾಡಿನ ಸಾಹಿತ್ಯವನ್ನು ಸ್ವತಃ ಕಮಲ್ ಹಾಸನ್​ ಬರೆದಿದ್ದು, ಈ ಹಾಡಿನಲ್ಲಿ ಕೇಂದ್ರ ಸರ್ಕಾರವನ್ನು ಕಿಂಡಲ್ ಮಾಡುವ ಸಾಲುಗಳಿವೆಯಂತೆ.

ಈ ಕುರಿತು ಚೆನ್ನೈ ನಿವಾಸಿ  ಸೆಲ್ವಂ ದೂರು ನೀಡಿದ್ದು, ಕೋವಿಡ್​ ನಿಧಿ ಸಂಗ್ರಹದ ವಿರುದ್ಧ ಕೇಂದ್ರ ಸರ್ಕಾರವನ್ನು ಅಣಕ ಮಾಡಿಲಾಗಿದೆ ಎಂದು ದೂರು ಕೊಟ್ಟಿದ್ಧಾರೆ. ಇಡೀ ಭಾರತೀಯ ಚಿತ್ರರಂಗವೇ ವಿಕ್ರಮ್​ ಸಿನಿಮಾಗಾಗಿ ಎದುರು ನೋಡ್ತಿದೆ. ಕಮಲ್​​ 30 ವರ್ಷದ ಯಂಗ್​ ಹೀರೋ ಆಗಿ ಕಾಣುವ ಟೆಕ್ನಾಲಜಿ ಬಳಸಿರೋ ಚಿತ್ರತಂಡ ಇದಕ್ಕಾಗಿಯೇ ಕೋಟಿ ಕೋಟಿ ಹಣ ಖರ್ಚು ಮಾಡಿದೆಯಂತೆ. ಈ ನಡುವೆ ಕಮಲ್ ಮೇಲೆ ದಾಖಲಾಗಿರುವ ಕೇಸ್​ನಿಂದಾಗಿ ಸಿನಿಮಾಗೆ ಮೊದಲ ಹಿನ್ನೆಡೆಯಾಗಿದೆ.

ವಿಕ್ರಮ್​ ಚಿತ್ರವನ್ನು  ಲೋಕೇಶ್ ಕನಗರಾಜ್​ ನಿರ್ದೇಶನ ಮಾಡ್ತಿದ್ದು, ಚಿತ್ರದಲ್ಲಿ ಕಮಲ್​ ಜೊತೆ ವಿಜಯ್​ ಸೇತುಪತಿ, ಫಹಾದ್ ಫಾಸಿಲ್ ನಟಿಸ್ತಾ ಇದ್ದಾರೆ. ಕಮಲ್​ ಹಾಸನ್​ ಸಿನಿಮಾಗಳಂದ್ರೆ ಕಾಂಟ್ರವರ್ಸಿಗಳು ಕಾಮನ್​ ಅಂತ ಅಭಿಮಾನಿಗಳು ಸುಮ್ಮನಾಗಿದ್ದಾರೆ. ಆದ್ರೆ ಸೆಲ್ವಂ ಮಾತ್ರ ಕ್ರಮ ತೆಗೆದುಕೊಳ್ಳದಿದ್ರೆ ಮದ್ರಾಸ್ ಹೈಕೋರ್ಟ್​ಗೂ ಹೋಗೋದಾಗಿ ತಿಳಿಸಿದ್ದಾರೆ. ಒಟ್ನಲ್ಲಿ ಈ ಪ್ರಕರಣ ಯಾವ ಹಂತ ತಲುಪುತ್ತೋ ಕಾದು ನೋಡ್ಬೇಕು…

ಎಂಟರ್​ಟೇನ್​​ಮೆಂಟ್ ಬ್ಯೂರೋ, ಪವರ್ ಟಿವಿ

RELATED ARTICLES

Related Articles

TRENDING ARTICLES