Monday, May 20, 2024

ರಾತ್ರಿ ಹೊತ್ತು ಗೋವುಗಳನ್ನೆ ಟಾರ್ಗೆಟ್ ಮಾಡಿರುವ ಗೋ ಕಳ್ಳರು

ಕಾರವಾರ: ಉತ್ತರಕನ್ನಡ ಜಿಲ್ಲೆಯ ಕುಮಟಾ ಪಟ್ಟಣದಲ್ಲಿ ಗೋ ಕಳ್ಳರ ಜಾಲವೊಂದು ಸಕ್ರಿಯವಾಗಿದ್ದು, ರಾತ್ರಿ ವೇಳೆಯಲ್ಲಿ ಕಾರ್ಯಾಚರಣೆಗಿಳಿಯುವ ಈ ಖದೀಮರು ರಸ್ತೆಯಲ್ಲಿ ಮಲಗಿರುವ ಗೋವುಗಳನ್ನು ಹಿಡಿದು ಕಾರಿನಲ್ಲಿ ತುಂಬಿಕೊಂಡು ಹೋಗಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಕುಮಟಾ ಪಟ್ಟಣದ ಬೀದಿಗಳಲ್ಲಿ ರಾತ್ರಿ ಹೊತ್ತು ಮಲಗಿರುವ ಗೋವುಗಳನ್ನೆ ಟಾರ್ಗೆಟ್ ಮಾಡುವ ಈ ಗೋ ಕಳ್ಳರ ಜಾಲ, ಅವುಗಳನ್ನು ಕಾರಿನಲ್ಲಿ ಎತ್ತಾಕ್ಕೊಂಡು ಹೋಗುತ್ತಾರೆ. ಬಿಡಾಡಿ ಜಾನುವಾರುಗಳಿಗೆ ವಾರಸುದಾರರಿರದ ಕಾರಣ ಅವುಗಳು ನಾಪತ್ತೆಯಾದರೆ ಯಾರೂ ಕೇಳುವವರಿಲ್ಲ. ಹಾಗಾಗಿ ಈ ಗೋ ಕಳ್ಳರು ಇದನ್ನೆ ವೃತ್ತಿಯಾಗಿಸಿಕೊಂಡಂತಿದೆ.

ಇನ್ನು, ಕುಮಟಾ ಪಟ್ಟಣ ಸೇರಿದಂತೆ ಗ್ರಾಮೀಣ ಭಾಗದಲ್ಲೂ ಗೋ ಕಳುವಾಗುತ್ತಿರುವ ಆರೋಪ ಕೇಳಿಬಂದಿದೆ. ಕುಮಟಾ ಪಟ್ಟಣದ ರಥ ಬೀದಿಯ ಶ್ರೀಆಂಜನೇಯ ದೇವಸ್ಥಾನದ ಬಳಿ ತಡ ರಾತ್ರಿ ೧ ಗಂಟೆ ಸುಮಾರಿಗೆ ಸ್ವಿಪ್ಟ್ ಕಾರಿನಲ್ಲಿ ಬಂದ ಗೋ ಕಳ್ಳರು ಒಂದು ಗೋವನ್ನು ಹಿಡಿದು ಕಾರಿನಲ್ಲಿ ತುಂಬಿಕೊಂಡು ಪರಾರಿಯಾಗಿದ್ದಾರೆ. ಗೋ ಕಳ್ಳತನ ಮಾಡುತ್ತಿರುವ ದೃಶ್ಯಾವಳಿ ಅಲ್ಲಿನ ಸ್ಥಳೀಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

RELATED ARTICLES

Related Articles

TRENDING ARTICLES