Wednesday, January 22, 2025

ಮೇ 20ಕ್ಕೆ ಸ್ಯಾಂಡಲ್​ವುಡ್​ ಮೇಲೆ ಗರುಡನ ನೆರಳು

ಸ್ಯಾಂಡಲ್​ವುಡ್​ ಗೌಳಿ ಶ್ರೀನಗರಕಿಟ್ಟಿಯ ಗರುಡ ಚಿತ್ರದ ಟ್ರೈಲರ್ ರಿಲೀಸ್ ಆಗಿದ್ದು ಬೇಜಾನ್​ ಹೈಪ್​ ಕ್ರಿಯೇಟ್​ ಮಾಡಿದೆ. ಖಾಕಿ ತೊಟ್ಟು ಪವರ್​ ಫುಲ್​ ಡೈಲಾಗ್​ ಹೊಡಿತಾ ಅಬ್ಬರಿಸ್ತಾ ಇರೋ  ಕಿಟ್ಟಿಯ ಸ್ಪೆಷಲ್​ ರೋಲ್​ಗೆ  ಫ್ಯಾನ್ಸ್ ಕ್ಲೀನ್​ ಬೋಲ್ಡ್​ ಆಗಿದ್ದಾರೆ. ಹಾಗಾದ್ರೆ ಗರುಡ ಚಿತ್ರದ  ಇಂಟ್ರೆಸ್ಟಿಂಗ್​ ವಿಷ್ಯಗಳ ಬಗ್ಗೆ ನಾವ್​ ಹೇಳ್ತೀವಿ.

  • ಮೇ 20ಕ್ಕೆ ಸ್ಯಾಂಡಲ್​ವುಡ್​ ಮೇಲೆ ಗರುಡನ ನೆರಳು
  • ಸಖತ್​ ಕ್ಯೂರಿಯಾಸಿಟಿ ಹುಟ್ಟಿಸಿದ ಗರುಡ ಚಿತ್ರದ ಟ್ರೇಲರ್
  • ಗರುಡ ಚಿತ್ರಕ್ಕೆ ಬೇಬಿ ಡಾಲ್ಸ್​ ಆಶಿಕಾ, ಐಂದ್ರಿತಾ ಸಾಥ್
  • ಗೌಳಿಯ ಟೆರರ್​ ಲುಕ್ಕಿಗೆ ಫ್ಯಾನ್ಸ್​ ಫುಲ್​ ಖುಷ್

ಸ್ಯಾಂಡಲ್​ ವುಡ್​​ನ ಶ್ರೀನಗರ ಕಿಟ್ಟಿ ಹಾಗೂ ಸಿದ್ದಾರ್ಥ್​ ಮಹೇಶ್​ ನಟಿಸಿರೋ ಮೋಸ್ಟ್​  ಎಕ್ಸ್​ಪೆಕ್ಟೆಡ್ ಮೂವಿ ಗರುಡ. ವಿಭಿನ್ನ ಸ್ಟೋರಿ ಲೈನ್​ ಇರೋದ್ರಿಂದ ಚಿತ್ರದ ಕುರಿತು ಈಗಾಗ್ಲೆ ಅಭಿಮಾನಿಗಳಲ್ಲಿ ಸಿಕ್ಕಾಪಟ್ಟೆ ಕುತೂಹಲ ಮನೆ ಮಾಡಿದೆ. ಚಿತ್ರ ಸೆಟ್ಟೇರಿದ ದಿನದಿಂದ್ಲೆ ಟ್ರೇಲರ್​ ಹಾಗೂ ಸಾಂಗ್​ಗಳಿಂದ ಸಾಕಷ್ಟು ಕ್ಯೂರಿಯಾಸಿಟಿ ಬಿಲ್ಡ್ ಮಾಡಿದೆ.

ಕಿಟ್ಟಿಯ ಪವರ್​ಫುಲ್​ ಪೋಲೀಸ್  ಲುಕ್​ಗೆ ಫ್ಯಾನ್ಸ್ ಫುಲ್​ ಥ್ರಿಲ್ ಆಗಿದ್ದು, ಸಿನಿಮಾದಲ್ಲಿನ ಡೈಲಾಗ್​ಗಳು ಖಡಕ್ಕಾಗಿವೆ. ಟ್ರೈಲರ್ ನೋಡಿದ್ರೆ ಕಹಾನಿ ಮೇ ಟ್ವಿಸ್ಟ್​ ಬೇರೆನೆ ಇದೆ ಅನ್ನೋದು ಪಕ್ಕಾ ಆಗುತ್ತೆ. ಮಾಸ್​ ಕಥೆಯ ಜೊತೆಯ ಪ್ರೀತಿಯ ಚುಂಗನ್ನು ಹಿಡಿದು ಡೈರೆಕ್ಟರ್​ ಹೊಸ ಮನರಂಜನೆಯನ್ನು ಈ ಚಿತ್ರದ ಮೂಲಕ ಕೊಡಲಿದ್ದಾರೆ.

ಗರುಡ ಹಾರೋದು ಆಕಾಶದಲ್ಲೆ,,ಆದ್ರೆ ಅದರ ನೆರಳು ಬೀಳೋದು ಭೂಮಿ ಮೇಲೆ.. ಈ ಕಾಳಿಂಗ ಒಂದ್​ ಸಲ ಮುಹೂರ್ತ ಇಟ್ರೆ ಆ ಮುಕ್ಕಣ್ಣ ಬಂದ್ರೂ ಬದಲಾಯಿಸೋಕೆ ಆಗಲ್ಲ.. ಹೀಗೆ ಸಾಲು ಸಾಲು ಖಡಕ್​ ಡೈಲಾಗ್​ಗಳು ಚಿತ್ರದಲ್ಲಿವೆ. ನಟ ಆದಿ ಲೋಕೇಶ್ ಕಾಳಿಂಗನಾಗಿ ಕ್ರೂರವಾಗಿ ಕಾಣಿಸಿಕೊಂಡಿದ್ದಾರೆ. ಹೆಣ್ಮಕ್ಳು ಕಾಳಿಂಗನ  ಪಾತ್ರವನ್ನು ನೋಡಿದ್ರೆ ಚಪ್ಪಲಿ ತಗೊಂಡು  ಹೊಡೀತಾರೆ ಅಂತ ಈ ಹಿಂದೆ ಸ್ವತಃ ಆದಿಲೋಕೇಶ್ ಅವ್ರೆ ಹೇಳಿದ್ರು.

ಚಿತ್ರದಲ್ಲಿ ಆಶಿಕಾ ರಂಗನಾಥ್ ಕಾಲೇಜು ವಿದ್ಯಾರ್ಥಿನಿಯಾಗಿ ಮಿಂಚಿದ್ರೆ , ಐಂದ್ರಿತಾ ಸ್ಪೆಷಲ್ ರೋಲ್​ನಲ್ಲಿ ನಟಿಸಿದ್ದಾರೆ. ಧನಕುಮಾರ್​.ಕೆ ಅವರು ಈ ಸಿನಿಮಾವನ್ನು ಡೈರೆಕ್ಟ್ ಮಾಡ್ತಿದ್ದು, ಆರೆಂಜ್ ಫಿಕ್ಸೆಲ್ ಲಾಂಛನದಲ್ಲಿ ಸಿನಿಮಾ ತೆರೆಗೆ ಬರ್ತಿದೆ. ರಘು ಧೀಕ್ಷಿತ್ ಮ್ಯೂಸಿಕ್ ಕಂಪೋಸಿಂಗ್ ಸಖತ್ ಇಂಪ್ರೆಸ್ ಆಗಿದೆ. ಜೈ ಆನಂದ್ ಕ್ಯಾಮರಾ ಕೈಚಳಕ ಕಮಾಲ್​ ಮಾಡಿದೆ.

ಈ ಹಿಂದೆ ಸಿಪಾಯಿ ಚಿತ್ರದ ಮೂಲಕ ಕನ್ನಡ ಸಿನಿಲೋಕಕ್ಕೆ ಗ್ರ್ಯಾಂಡ್​ ಆಗಿ ಎಂಟ್ರಿ ಕೊಟ್ಟಿದ್ದ ಸಿದ್ದಾರ್ಥ ಮಹೇಶ್​ ಅವರ ಎರಡನೇ ಚಿತ್ರ ಇದಾಗಿದೆ, ಕಮರ್ಷಿಯಲ್​ ಎಲಿಮೆಂಟ್ಸ್​ ಜೊತೆ ಗಟ್ಟಿ ಸಂದೇಶ ಇರೋ ಸಿನಿಮಾವಾಗಿದೆ.. ಪಕ್ಕಾ ಫ್ಯಾಮಿಲಿ ಒಟ್ಟಿಗೆ ಕೂತು ನೋಡುವ ಸಿನಿಮಾ ಇದಾಗಿದ್ದು ಇದೇ ಮೇ 20ಕ್ಕೆ ತೆರೆ ಮೇಲೆ ಬರ್ತಿದೆ. ಒಟ್ಟಿನಲ್ಲಿ ತನ್ನ ಟ್ರೇಲರ್ ಮೂಲಕ ಗರುಡ ಸಿನಿಮಾ ಅಭಿಮಾನಿಗಳಲ್ಲಿ ಸಾಕಷ್ಟ ಕುತೂಹಲವನ್ನಂತೂ ಮೂಡಿಸಿದೆ..

ಎಂಟರ್​ಟೇನ್​​ಮೆಂಟ್​​​​ ಬ್ಯೂರೋ, ಪವರ್ ಟಿವಿ

RELATED ARTICLES

Related Articles

TRENDING ARTICLES