ವಿಜಯಪುರ : ಈ ಜಿಲ್ಲಾಸ್ಪತ್ರೆ ರಾಜ್ಯದಲ್ಲೇ ಮಾದರಿ ಆಸ್ಪತ್ರೆ, ಹಿಂದೆ ಹಲವು ಪ್ರಶಸ್ತಿಗಳಿಗೂ ಪಾತ್ರವಾಗಿದೆ. ಆದರೆ, ಇದೀಗ ಈ ಆಸ್ಪತ್ರೆಗೆ ಕಪ್ಪು ಚುಕ್ಕಿ ತರುವಂಥಾ ಗಂಭೀರ ಆರೋಪ ಕೇಳಿ ಬಂದಿದೆ. ಈ ಆಸ್ಪತ್ರೆಯಲ್ಲಿ ಸಿಜೇರಿಯನ್ ಹೆರಿಗೆ ಮಾಡಿಸಿಕೊಂಡ ಬಹುತೇಕರು ಕಣ್ಣೀರು ಹಾಕುವಂತಾಗಿದೆ. ವೈದ್ಯರ ವಿರುದ್ಧ ಮಹಾ ನಿರ್ಲಕ್ಷ್ಯದ ಆರೋಪ ಕೇಳಿ ಬಂದಿದೆ.
ಅದುವಲ್ಲದೇ, ಇಲ್ಲಿ ಹೆರಿಗೆಯಾದ ಸಾಕಷ್ಟು ಮಹಿಳೆಯರಿಗೆ ಸ್ಟಿಚ್ ಬಿಚ್ಚಿ ಹೋಗಿದ್ದು, ನೋವಿನಿಂದ ನರಳುವಂತಾಗಿದೆ. ಈ ಕುರಿತು ಪ್ರತಿಕ್ರಿಯಿಸಿದ ಡಿಸ್ಟ್ರಿಕ್ಟ್ ಸರ್ಜನ್ ಎಸ್.ಎಲ್.ಲಕ್ಕಣ್ಣನವರ ಬೇರೆನೇ ಹೇಳ್ತಾರೆ. ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಒಂದೇ ಹೆರಿಗೆ ಥಿಯೇಟರ್ ಇದೆ. ಸಿಜೇರಿಯನ್ ಹೆರಿಗೆ ಆದವರಿಗೆ ಇನ್ಪೆಕ್ಷನ್ ಆಗಿದ್ದು ನಿಜ, ಜಿಲ್ಲಾಸ್ಪತ್ರೆಯಲ್ಲಿ ನಿತ್ಯ ಸುಮಾರು 40 ಹೆರಿಗೆ ಮಾಡಿಸಿಕೊಳ್ಳಲಾಗುತ್ತದೆ. ಇದರಲ್ಲಿ ಸುಮಾರು 15 ರಿಂದ 20 ಸಿಜೇರಿಯನ್ ಮೂಲಕ ಹೆರಿಗೆಗಳಾಗುತ್ತವೆ. ಒಂದೇ ಮಹಾಶಸ್ತ್ರ ಚಿಕಿತ್ಸಾ ಘಟಕ ಇರೋ ಕಾರಣ ಸಮಸ್ಯೆ ಆಗಿದೆ ಅಂತಾರೆ.
ಇನ್ನೂ ಸಿಜೇರಿಯನ್ ಮೂಲಕ ಹೆರಿಗೆ ಮಾಡಿಸಿಕೊಂಡ ಸುಮಾರು 30 ಕ್ಕೂ ಅಧಿಕ ಜನ ಮಹಿಳೆಯರಿಗೆ ಇದೇ ಸಮಸ್ಯೆಯಾಗಿದ್ದು, ಆಸ್ಪತ್ರೆಯಲ್ಲಿ ಟ್ರೇನಿ ನರ್ಸಗಳ ಎಡವಟ್ಟೇ ಈ ಘಟನೆಗೆ ಕಾರಣ ಎನ್ನಲಾಗುತ್ತಿದೆ. ಅದು ಎನೇ ಇರಲಿ ಆದಷ್ಟು ಬೇಗ ಸಂಬಂಧಿಸಿದ ಅಧಿಕಾರಿಗಳು ಈ ಸಮಸ್ಯೆ ನಿವಾರಿಸಬೇಕಿದೆ.