Wednesday, January 22, 2025

ಕೊನೆಗೂ ಒಂದಾದ ಕನ್ನಡ ರ‍್ಯಾಪರ್ಸ್​​​ ಅಲೋಕ್-ಚಂದನ್

ಕಾಲ ಚೇಂಜ್​ ಆದ  ಹಾಗೆ ಜನರ ಟೇಸ್ಟ್​ ಕೂಡ ಚೇಂಜ್​ ಹಾಗತ್ತೆ. ಯೆಸ್​, ಈಗೆಲ್ಲಾ ಱಪ್ ಸಾಂಗ್​ಗಳ ಜಮಾನ.. ಪಬ್​, ಕ್ಲಬ್ಬು, ಪಾರ್ಟಿ ಎಲ್ಲೆಲ್ಲೂ ಱಪ್​ ಸಾಂಗ್​ಗಳ ದರ್ಬಾರ್​ ಶುರುವಾಗಿದೆ. ಅಸಲಿಗೆ ಮ್ಯಾಟ್ರು ಏನಪ್ಪಾ ಅಂದ್ರೆ ಕೆಲ ದಿನಗಳ ಹಿಂದೆ  ಜಗಳವಾಡಿಕೊಂಡಿದ್ದ  ಕನ್ನಡದ ಟಾಪ್​ ರ‍್ಯಾಪರ್ಸ್​​​ ಚಂದನ್​ ಶೆಟ್ಟಿ, ಅಲೋಕ್​ ಇದೀಗ ಮತ್ತೆ ಒಂದಾಗಿದ್ಧಾರೆ.

  • ಕೊನೆಗೂ ಒಂದಾದ ಕನ್ನಡ ಱಪರ್ಸ್ ಅಲೋಕ್-ಚಂದನ್..!
  • ಬ್ಯಾಂಗ್​ ಬ್ಯಾಂಗ್​ ​ ಹಾಡಿಗೆ ದನಿಯಾದ ರ‍್ಯಾಪರ್ಸ್​​
  • ‘ಅನ್ಸಿದ್ದು’ ಹಾಡಿನಲ್ಲಿ ಸಖತ್​ ಕಿಚಾಯಿಸಿದ್ದ ಡಿಟ್ಟೋ
  • ಕಾಣೆಯಾದವರು ಬ್ಯಾಂಕಾಕ್​​ನಲ್ಲಿ ಮತ್ತೆ ಒಂದಾಗಿದ್ದೇಗೆ.?

ಮ್ಯುಸಿಕಲ್ ಪ್ಯಾಟರ್ನ್ ಈಗ ಕಂಪ್ಲೀಟ್ ಚೇಂಜ್ ಆಗಿದೆ. ಸಾಹಿತ್ಯ, ಟ್ಯೂನ್​, ಸಿಂಗಿಂಗ್​ ಫರ್ಮ್ಯಾಟ್​ ಎಲ್ಲವೂ ಫುಲ್ ಚೇಂಜ್​ ಬಯಸೋ ಕಾಲ ಇದು. ಆ ವಿಭಾಗದಲ್ಲಿ ಕನ್ನಡದ ಟಾಪ್​ ರ‍್ಯಾಪರ್​ಗಳಾಗಿ ಮಿಂಚ್ತಾ ಇರೋದು ಆಂದ್ರೆ ಅಲೋಕ್​, ಚಂದನ್​ಶೆಟ್ಟಿ, ರಾಹುಲ್​ ಡಿಟ್ಟೋ.. ತಮ್ಮದೇ ಫ್ಯಾನ್ಸ್ ಫಾಲ್ಲೊಯಿಂಗ್​ ಒಂದಿರೋ ಈ ಮೂವರು ಱಪ್​ ಸಾಂಗ್​​ ಹೊರತಾಗಿ ಒಬ್ಬರಿಗೊಬ್ಬರು ಕಾಲು ಎಳೆಯುವ ಮೂಲಕವೂ ಸಖತ್​ ಸುದ್ದಿಯಲ್ಲಿರ್ತಾರೆ.

ರಾಹುಲ್​ ಡಿಟ್ಟೋ, ಅಲೋಕ್  ಈ ಹಿಂದೆ ಚಂದನ್​ಶೆಟ್ಟಿಯನ್ನು ಪರೋಕ್ಷವಾಗಿ ಹಾಡಿನ ಮೂಲಕ ಕಾಲೆಳೆಯುವ ಮೂಲಕ ಸುದ್ದಿಯಲ್ಲಿದ್ರು. ಬಹಿರಂಗವಾಗಿ ಟೀಕಿಸದಿದ್ರು ಅಲೋಕ್​ಗೆ ಚಂದನ್​ಶೆಟ್ಟಿ ಮೇಲಿರೋ ಕೋಪ ಈ ರ‍್ಯಾಪ್​​​ ಸಾಂಗಿನಲ್ಲಿ ಎದ್ದು ಕಾಣುತ್ತೆ ಅಂತ  ಅಭಿಮಾನಿಗಳು ಗುಸುಗುಸು  ಮಾತನಾಡಿಕೊಂಡಿದ್ರು. ಆದ್ರೆ ಇದೀಗ ತೆರೆಮರೆಯ ಹಿಂದೆ ಜಗಳವಾಡಿಕೊಂಡಿದ್ದ ಇಬ್ರು ಒಂದೇ ಹಾಡಿನಲ್ಲಿ ಕಾಣಿಸಿಕೊಂಡು ಅಚ್ಚರಿ ಮೂಡಿಸಿದ್ದಾರೆ.

ರಾಹುಲ್​ ಡಿಟ್ಟೋ ಹಾಗೂ ಅಲೋಕ್​ ಟೀಮ್ ಜೊತೆಯಾಗಿ  ಈ ಹಿಂದೆ ಸಾಂಗ್​ ರಿಲೀಸ್ ಮಾಡಿತ್ತು. ಈ ಹಾಡು ಸೋಶಿಯಲ್​ ಮೀಡಿಯಾದಲ್ಲೂ ಭರ್ಜರಿಯಾಗಿ ಸೌಂಡ್​​ ಮಾಡಿದ್ದಲ್ಲದೆ ಎಲ್ಲ ಕಡೆ ಹಾಟ್​ ಟಾಪಿಕ್ ಆಗಿತ್ತು. ಯಾಕಂದ್ರೆ ಸಾಂಗ್​​ನಲ್ಲಿದ್ದ ಪ್ರತಿಯೊಂದು ಸಾಲುಗಳು ಚಂದನ್​ಶೆಟ್ಟಿ ಕಡೆ ಬೊಟ್ಟು ಮಾಡಿ ತೋರಿಸ್ತಾ ಇತ್ತು.ನಂಗನ್ಸಿದ್ದು ಅನ್ನೋ ಟೈಟಲ್​ ಕೊಟ್ಟು, ಹಾಡಿನ ಆರಂಭದಲ್ಲಿ ಈ ಹಾಡು ಯಾರಿಗೂ ಅನ್ವಯಿಸೊಲ್ಲ ಅಂತಾ ಸೂಚನೆ ಕೂಡ ಕೊಟ್ಟಿದ್ರು.

ಱಪ್ ಸಾಂಗ್​ ಏನು ಅಂತ ಗಂಧ ಗಾಳಿಯೇ ಗೊತ್ತಿಲ್ಲ. ಚೀಪ್ ಟ್ರಿಕ್ಸ್​ ಮಾಡ್ಕೊಂಡು ಮೆರಿತಾವ್ರೆ ಅಂತೆಲ್ಲಾ ಇದ್ದ  ಹಾಡಿನ ಸಾಲುಗಳು ಎಲ್ಲರ ಕಣ್ಣು ಕುಕ್ಕಿಸಿದ್ವು. ಒಟ್ನಲ್ಲಿ ಅಲೋಕ್, ಡಿಟ್ಟೋ  ಜೊತೆ  ಚಂದನ್​ ಶೆಟ್ಟಿಯ ಶೀತಲ ಸಮರ ನಡಿತಿರೋದು ಪಕ್ಕಾ ಆಗಿತ್ತು. ಅದ್ರೆ ಈ ಎಲ್ಲಾ ಗಾಸಿಪ್ ನಡುವೆ ಅಲೋಕ್​ ಜೊತೆ ‘ಕಾಣೆಯಾದವರ ಬಗ್ಗೆ ಪ್ರಕಟಣೆ’ ಚಿತ್ರದ ಹಾಡೊಂದ್ರಲ್ಲಿ ಚಂದನ್​ ಶೆಟ್ಟಿ ಕಾಣಿಸಿಕೊಳ್ಳೋ ಮೂಲಕ ಎಲ್ಲಾ ವಿವಾದಗಳಿಗೆ ತೆರೆ ಎಳೆದಿದ್ದಾರೆ.

ರವಿಶಂಕರ್​, ಚಿಕ್ಕಣ್ಣ, ರಂಗಾಯಣ ರಘು ಅವರ ಬಹುತಾರಾಗಣದಲ್ಲಿ ‘ಕಾಣೆಯಾದವರ ಬಗ್ಗೆ ಪ್ರಕಟಣೆ’ ಸಿನಿಮಾ  ಮೂಡಿ ಬರ್ತಿದೆ. ಅನಿಲ್ ಕುಮಾರ್​ ಆಕ್ಷನ್​ ಕಟ್​ ಹೇಳ್ತಿರೋ ಈ ಚಿತ್ರದಲ್ಲಿ ಬ್ಯಾಂಗ್​ ಬ್ಯಾಂಗ್​ ಬ್ಯಾಂಕಾಕ್​ ಅನ್ನೋ ಸಾಂಗಿಗೆ ಇಬ್ರು ದನಿಯಾಗಿದ್ದು ಈ ಹಾಡು ಯ್ಯೂ ಟ್ಯೂಬ್​  ಹಲ್​ಚಲ್​ ಎಬ್ಬಿಸ್ತಿದೆ. ಒಟ್ನಲ್ಲಿ ವೈಮನಸ್ಸಿನಿಂದ ಕಾಣೆಯಾಗಿದ್ದ ಗೆಳೆತನ ಒಂದಾಗಲು  ಈ ಚಿತ್ರತಂಡ ವೇದಿಕೆಯಾಗಿದ್ದು ಅಭಿಮಾನಿಗಳಿಗೆ ಖುಷಿ ಕೊಟ್ಟಿದೆ..

ಫಿಲ್ಮ್ ಬ್ಯೂರೋ.. ಪವರ್​ ಟಿವಿ.

RELATED ARTICLES

Related Articles

TRENDING ARTICLES