ಬೆಂಗಳೂರು: ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ನೇತೃತ್ವದಲ್ಲಿ ಬಿಜೆಪಿ ಕೋರ್ ಕಮಿಟಿ ಸಭೆ ನಡೆಯಿತು. ಮಲ್ಲೇಶ್ವರಂನ ಪಕ್ಷದ ಕಚೇರಿಯಲ್ಲಿ ನಡೆದ ಸಭೆಯಲ್ಲಿ ರಾಜ್ಯಸಭೆ ಹಾಗೂ ಮೇಲ್ಮನೆ ಅಭ್ಯರ್ಥಿಗಳ ಆಯ್ಕೆ ಬಗ್ಗೆ ಗಂಭೀರ ಚರ್ಚೆಯಾಯ್ತು.
ಜೂನ್‌ನಲ್ಲಿ ರಾಜ್ಯ ವಿಧಾನಸಭೆಯಿಂದ ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಹಾಗೆಯೇ ಮೇಲ್ಮನೆಯ 7 ತೆರವಾದ ಸ್ಥಾನಗಳಿಗೂ ಎಲೆಕ್ಷನ್ ಎದುರಾಗಿದೆ. ಹೀಗಾಗಿ ಪಕ್ಷಕ್ಕೆ ಬರುವ ರಾಜ್ಯಸಭೆಯ ಎರಡು ಹಾಗೂ ಮೇಲ್ಮನೆಯ ನಾಲ್ಕು ಸ್ಥಾನಗಳ ಬಗ್ಗೆ ಚರ್ಚೆಯಾಯ್ತು. ಸುದೀರ್ಘ ಚರ್ಚೆಯ ಬಳಿಕ ಕೆಲವು ಹೆಸರುಗಳನ್ನ ಕೇಂದ್ರ ಚುನಾವಣಾ ಸಮಿತಿಗೆ ಶಿಫಾರಸು ಮಾಡಲಾಯ್ತು.
ವಿಧಾನಪರಿಷತ್ ಚುನಾವಣೆ ಅಭ್ಯರ್ಥಿಗಳ ವಿಚಾರ ಚರ್ಚೆಗೆ ಬಂದಾಗ ಬಿಎಸ್‌ವೈ ವಿಜಯೇಂದ್ರ ಹೆಸರನ್ನ ಪ್ರಸ್ತಾಪಿಸಿದ್ರು. ಪ್ರಬಲ ಲಿಂಗಾಯತ ಸಮುದಾಯವನ್ನ ಪಕ್ಷದಲ್ಲೇ ಉಳಿಸಿಕೊಳ್ಳಬೇಕಂದ್ರೆ ಟಿಕೆಟ್ ಕೊಡಬೇಕು, ಸಂಪುಟಕ್ಕೆ ಸೇರಿಸಿಕೊಳ್ಬೇಕೆಂಬ ಒತ್ತಾಯ ಮಾಡಿದ್ರು. ಆದ್ರೆ, ವಿಜಯೇಂದ್ರರನ್ನು ವಿರೋಧಿಸುವ ಹಲವರು ಅಲ್ಲಿದ್ರು. ಸಿ.ಟಿ.ರವಿ, ಅಧ್ಯಕ್ಷ ಕಟೀಲ್, ಪ್ರಹ್ಲಾದ್ ಜೋಶಿ ಸೇರಿದಂತೆ ದೊಡ್ಡ ಬಣವೇ ಇತ್ತು. ಆದ್ರೆ, ಯಾರೊಬ್ಬರೂ ಯಡಿಯೂರಪ್ಪನವರ ಪ್ರಸ್ತಾಪದ ಬಗ್ಗೆ ಧ್ವನಿ ಎತ್ತುವ ಧೈರ್ಯ ಮಾಡಲಿಲ್ಲ. ಹೀಗಾಗಿ ಎಂಎಲ್‌ಸಿ ಟಿಕೆಟ್ ಪಟ್ಟಿಗೆ ವಿಜಯೇಂದ್ರರ ಹೆಸರನ್ನೂ ಸೇರಿಸಲಾಯ್ತು.
ಇನ್ನು ರಾಜ್ಯಸಭಾಗೂ ಅಭ್ಯರ್ಥಿಗಳ ಅಯ್ಕೆ ಕುರಿತು ಮಹತ್ವದ ಚರ್ಚೆ ನಡೆಯಿತು. ಜೊತೆಗೆ ಪರಿಷತ್‌ಗೂ ಅಭ್ಯರ್ಥಿಗಳ ಅಯ್ಕೆ ಮಾಡಿ 1:5 ಅನುಪಾತದಲ್ಲಿ ಕಳಿಸಿರೋದು ವಿಶೇಷ. ಹಾಗಾದರೆ ಯಾರ್ಯಾರ ಹೆಸರು ಪಟ್ಟಿಯಲ್ಲಿದೆ.
ಹೀಗೆ ರಾಜ್ಯ ಬಿಜೆಪಿ ಕೋರ್ ಕಮಿಟಿ ಸಭೆ ಅಭ್ಯರ್ಥಿಗನ್ನು ಅಯ್ಕೆ ಮಾಡಿ ಕಳುಹಿಸಿದೆ. ಇನ್ನು1:5 ಮಾದರಿಯಲ್ಲಿ ಎರಡು ರಾಜ್ಯಸಭೆ ಹಾಗೂ ನಾಲ್ಕು ಮೇಲ್ಮನೆಗೆ ಅಭ್ಯರ್ಥಿಗಳ ಹೆಸರನ್ನ ಶಿಫಾರಸು ಮಾಡಲಾಗಿದೆ. ಕೇಂದ್ರ ಸಚಿವೆ ನಿರ್ಮಾಲಾ ಸೀತಾರಾಮನ್‌ಗೆ ಟಿಕೆಟ್ ಕನ್ಫರ್ಮ್ ಅಗಿದೆ. ಉಳಿದ ಒಂದು ಸ್ಥಾನಕ್ಕೆ ಸುರಾನಾ ಟಿಕೆಟ್ ಗಿಟ್ಟಿಸಿದ್ರೂ ಅಚ್ಚರಿ ಇಲ್ಲ. ಹಾಲಿ ಸದಸ್ಯ ಕೆ.ಸಿ.ರಾಮಮೂರ್ತಿಗೆ ಟಿಕೆಟ್ ಮಿಸ್ ಆಗಲಿದೆ ಎನ್ನಲಾಗ್ತಿದೆ.
ಒಟ್ಟಿನಲ್ಲಿ ನಡೆದ ರಾಜ್ಯ ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ರಾಜ್ಯಸಭೆ ಹಾಗೂ ವಿಧಾನಪರಿಷತ್ ಚುನಾವಣೆಗೆ ಅಭ್ಯರ್ಥಿಗಳ ಅಯ್ಕೆ ಮಾಡಲಾಗಿದೆ. ಬಿಜೆಪಿ ಕೇಂದ್ರ ಚುನಾವಣಾ ಸಮಿತಿಗೆ ಪಟ್ಟಿ ಶಿಫಾರಸು ಮಾಡಲಾಗಿದೆ. ಆದ್ರೆ ಕಳಿಸಿದ ಪಟ್ಟಿಯಲ್ಲಿರುವರನ್ನ ಹೊರತು ಪಡಿಸಿ, ಅಚ್ಚರಿಯ ಅಭ್ಯರ್ಥಿಗಳನ್ನ ಹೈಕಮಾಂಡ್ ಬಿಡುಗಡೆಮಾಡಿದ್ರೂ ಆಶ್ಚರ್ಯ ಪಡಬೇಕಿಲ್ಲ. ಬಿಜೆಪಿಯಲ್ಲಿ ಎಲ್ಲವೂ ಸಾಧ್ಯ ಅನ್ನೋದನ್ನ ತೋರಿಸಿಕೊಟ್ಟಿದೆ.