ಕೋಲಾರ : ಮುಂಗಾರು ಪ್ರವೇಶ ಮುನ್ನವೇ ಕೋಲಾರದ ಯರಗೋಳ್ ಡ್ಯಾಂ ಭರ್ತಿಯಾಗುತ್ತಿದೆ. ಯರಗೋಳ್ ಡ್ಯಾಂ ಶೀಘ್ರವೇ ಲೋಕಾರ್ಪಣೆಗೊಳಿಸಲು ಜಲ ಮಂಡಳಿ ಅಧಿಕಾರಿಗಳು ಕೊನೆ ಹಂತದ ಕಾಂಗಾರಿ ಮತ್ತು ಸಿದ್ದತೆಗಳನ್ನ ಪರಿಶೀಲನೆ ನಡೆಸಿದ್ದಾರೆ.
ನಗರದ ಬಂಗಾರಪೇಟೆ ತಾಲೂಕಿನ ಯರಗೋಳ್ ಬಳಿ ಡ್ಯಾಂ ನಿರ್ಮಾಣಗೊಂಡಿದ್ದು, ಕಾಂಗಾರಿ ಪೂರ್ಣಗೊಂಡಿದ್ದ ಹಿನ್ನಲೆಯಲ್ಲಿ ಡ್ಯಾಂಗೆ ಜಲಮಂಡಳಿ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬೆಂಗಳೂರಿನ ಜಲಮಂಡಳಿಯ ಇಂಜಿನಿಯರ್ ಮತ್ತು ಅಧಿಕಾರಿಗಳ ತಂಡ ಅಣೆಕಟ್ಟು ಕುರಿತು ಪರಿಶೀಲನೆ ನಡೆಸಿದ್ರು. ಯರಗೋಳ್ ಬಳಿಯಿರುವ ಡ್ಯಾಂ ಕಾಮಗಾರಿ ಪೂರ್ಣಗೊಂಡಿದ್ದು, ಉದ್ಘಾಟನೆಗೆ ಸಜ್ಜಾಗಿದೆ. ಈ ಬಾರಿಯ ಮಳೆಯಿಂದಾಗಿ ನೀರು ತುಂಬಿರುವುದರಿಂದ ಪರಿಶೀಲನೆ ನಡೆಸಲಾಗಿದ್ದು, 3 ತಾಲೂಕು ಮತ್ತು 48 ಹಳ್ಳಿಗಳಿಗೆ ಕುಡಿಯುವ ನೀರು ಹರಿಸುವ ಯೋಜನೆ ಹಮ್ಮಿಕೊಳ್ಳಲಾಗಿದೆ.
ಇನ್ನು, ಸುಮಾರು 280 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಡ್ಯಾಂ ಇದಾಗಿದ್ದು, ಸದ್ಯದಲ್ಲಿ ಲೋಕಾರ್ಪಣೆಯಾಗುವ ಹಿನ್ನಲೆ ಅಧಿಕಾರಿಗಳು ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಕೋಲಾರ ಜಿಲ್ಲಾಧಿಕಾರಿ ವೆಂಕಟರಾಜಾ ಸೇರಿದಂತೆ ಹಲವು ಅಧಿಕಾರಿಗಳು ಉಪಸ್ಥಿತರಿದ್ದರು.