Monday, May 20, 2024

ಆ್ಯಸಿಡ್​ ನಾಗೇಶ್​​ನ ಕಂಪ್ಲೀಟ್​​​ ಇತಿಹಾಸ ವಿವರಿಸಿದ ಕಮಲ್​ ಪಂತ್

ಬೆಂಗಳೂರು : ಯುವತಿ ಮೇಲೆ‌ ಆ್ಯಸಿಡ್ ದಾಳಿ ಮಾಡಿ ತಮಿಳುನಾಡಿನ ತಿರುವಣ್ಣಾಮಲೈ ತಲೆಮರೆಸಿಕೊಂಡಿದ್ದ ಆರೋಪಿ ನಾಗೇಶ್​​​ನನ್ನು ಬಂಧಿಸಲಾಗಿದೆ ಎಂದು ಅಧಿಕೃತವಾಗಿ ಬೆಂಗಳೂರು ಪೊಲೀಸ್ ಕಮಿಷನರ್ ಕಮಲ್ ಪಂತ್ ತಿಳಿಸಿದರು.

ನಗರದಲ್ಲಿಂದು ಕಮಿಷನರ್​​ ಕಛೇರಿಯಲ್ಲಿಂದು ಸುದ್ದಿಗೋಷ್ಠಿಯನ್ನು ಆಯೋಜಿಸಿ ಮಾತನಾಡಿದ ಅವರು, ಬಂಧಿಸಲಾದ ಆರೋಪಿ ನಾಗೇಶನ ಕಥೆಯನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಡಿಸಿಪಿ ಸಂಜೀವ್ ಪಾಟೀಲ್ ಎಸಿಪಿ ರವಿ ಇನ್ಸ್ ಪೆಕ್ಟರ್ ಪ್ರಶಾಂತ್ ತಂಡ ನೇತೃತ್ವದಲ್ಲಿ ಆರೋಪಿಯನ್ನು ಹುಡುಕಲು ಟೀಮ್​ತಯಾರಾಗಿರುತ್ತದೆ. ಆದರೆ, ಅಪರಾಧಿ ಸುಳಿವು ಬಿಡದೇ ನಾಪತ್ತೆಯಾಗಿದ್ದ. ಅಡಿಷನ್‌ cp ಸಂದೀಪ್‌ಪಾಟೀಲ್ ಪ್ರತಿದಿನ ತಮ್ಮ ಅಧಿಕಾರಿಗಳಿಗೆ ಮಾಹಿತಿ ಕೊಡ್ತಾ ಇದ್ದರು.

ಇನ್ನು ಆರೋಪಿ ಹಾಗೂ ಸಂತ್ರಸ್ಥೆ ಒಂದೇ ಏರಿಯಾದಲ್ಲಿ ವಾಸ ಮಾಡ್ತಾ ಇದ್ದರು. ಆ ಸಂದರ್ಭದಲ್ಲಿ ಯುವತಿಗೆ ಪ್ರಪೋಸ್ ಮಾಡಿದ್ದಾನೆ, ಯುವತಿ ಹಾಗೂ ಪೋಷಕರು ನಿರಾಕರಣೆ ಮಾಡಲಾಗಿದೆ. ಸ್ನೇಹಿತನಿಂದ ಮಾಹಿತಿ ಪಡೆದು ಯುವತಿಯನ್ನು ದಿನವೂ ಫಾಲೋ ಮಾಡ್ತಾ ಇದ್ದ. ಇದೇ ವೇಳೆ ಯುವತಿ ಅಕ್ಕನ ಮದುವೆ ಫಿಕ್ಸ್ ಆಗಿದೆ. ನಂತರ ಇವಳ ಮದುವೆ ಕೂಡ ಆಗುತ್ತೆ ಅಂತ ತಿಳಿದು ಅವರ ದೊಡ್ಡಮ್ಮನ ಬಳಿ ಹೋಗಿ ಮದುವೆ ಮಾಡಿಕೊಡಿ ಕೇಳಿದ್ದಾನೆ. ಅವರು ಇಲ್ಲ ಅಂದಿದ್ದಕ್ಕೆ ಜೊತೆಗೆ ಯುವತಿ ಕೂಡ ಇಲ್ಲ ಎಂದಿದ್ದಕ್ಕೆ ಕೋಪಗೊಂಡು ಲೆಟರ್ ಹೆಡ್ ಬಳಸಿ 8 ಲೀಟರ್ ಕ್ಯಾನ್ ಹಾಗೂ ಅರ್ಧ ಅರ್ಧ ಲೀಟರ್ ಸಪರೇಟ್ ಆಗಿ ಆ್ಯಸಿಡ್ ಖರೀದಿ‌ ಮಾಡಿದ್ದ. ಈ ಹಿಂದೆ 2020ರಲ್ಲೂ ಆ್ಯಸಿಡ್ ಖರೀದಿ ಮಾಡಿದ್ದ ಅದರೆ ಅಂದು ಹಾಕಿರಲಿಲ್ಲ.

ನೀವು ನಮ್ಮ ಅಣ್ಣ ಇದ್ಣಂಗೆ ಇದ್ದೀಯಾ ನನ್ನ ಬಿಟ್ಟು ಬಿಡು ಎಂದು ಕೇಳಿಕೊಂಡಿದ್ದಾಳೆ, ಮ್ಯಾನೇಜರ್ ಸಹ ವಾರ್ನ್ ಮಾಡಿದ್ದಾರೆ. ಆದರೂ ಸಹ ಬಿಡದೆ ಏಪ್ರಿಲ್​​ 28 ನೇ ತಾರೀಖು ಬೈಕ್​​​ನಲ್ಲಿ ಬಂದು ಅರ್ಧ ಲೀಟರ್ ಬಾಟಲ್​​ನಲ್ಲಿದ್ದ ಆ್ಯಸಿಡ್​ನ್ನು ಯುವತಿ ಮೇಲೆ ಹಾಕಿ, ಎಸ್ಕೇಪ್​​ ಆಗಿದ್ದಾನೆ.

ಆ್ಯಸಿಡ್​​ ದಾಳಿ ಮಾಡಿ ಮೊದಲು ಹೊಸಕೋಟೆಗೆ ಹೋಗಿ ಹೊಸಕೇಟೆ ಕೆರೆಗೆ ಸೂಸೈಡ್ ಮಾಡಿಕೊಳ್ಳಲು ಪ್ರಯತ್ನಿಸಿದ್ದಾನೆ. ನಂತರ ತಿರುಪತಿ ದೇವಸ್ಥಾನಕ್ಕೆ ಹೋಗಿದ್ದಾನೆ. ಬಳಿಕ ಅಲ್ಲಿಂದ ತಮಿಳುನಾಡಿನ ತಿರುವಣ್ಣಾಮಲೈಗೆ ಹೋಗ್ತಾನೆ. ಅಲ್ಲಿ ಖಾವಿ ಬಟ್ಟೆ ಹಾಕಿಕೊಂಡು ದೇವಸ್ಥಾನದಲ್ಲಿ ವಾಸವಿದ್ದನು. ಅಲ್ಲದೇ ಅವನು ತನ್ನ ಗುರುತನ್ನು ಸಂಪೂರ್ಣ ಬದಲಾಯಿಸಿಕೊಂಡು, ಮೊಬೈಲ್ , ಲ್ಯಾಪ್ ಟಾಪ್ ಎಟಿಎಂ ಹಾಗೂ ಐಡಿ ಕಾರ್ಡ್ ಯಾವುದನ್ನು ಬಳಸುತ್ತಿರಲಿಲ್ಲ. ವನು ವಾಸವಿದ್ದ ದೇವಸ್ಥಾನಕ್ಕೆ ಪೋಸ್ಟರ್ ಹಾಕಿದ ಮೇಲೆ ಕೈಯಲ್ಲಿ ಆ್ಯಸಿಡ್ ಗುರುತು ಇರುತ್ತೆ ನಂತರ ಪತ್ತೆಯಾಗ್ತಾನೆ. ಪೊಲೀಸರು ಹೋದಂತ ಸಂದರ್ಭದಲ್ಲಿ ಖಾವಿ ಬಟ್ಟೆ ತೊಟ್ಟು ಧ್ಯಾನ ಮಾಡುತ್ತಿರುತ್ತಾನೆ.

ಒಟ್ಟಿನಲ್ಲಿ ಪೊಲೀಸರ ಶ್ರಮದಿಂದಲೇ ಇಂದ ನಾಗೇಶನನ್ನ ಅರೆಸ್ಟ್ ಮಾಡಲು ಸಾಧ್ಯವಾಗಿದೆ.

RELATED ARTICLES

Related Articles

TRENDING ARTICLES