Wednesday, January 22, 2025

ಖಾಕಿ ಮುಂದೆ ಆ್ಯಸಿಡ್ ಕಹಾನಿ ಕಕ್ಕಿದ ಕಿರಾತಕ…!

ಬೆಂಗಳೂರು: ಆ್ಯಸಿಡ್‌ ನಾಗ ಪೊಲೀಸರ ಪ್ರಾಥಮಿಕ ವಿಚಾರಣೆಯಲ್ಲಿ ಆ್ಯಸಿಡ್ ಹಾಕಿದ ಕಹಾನಿ ಹೇಳಿದ್ದಾನೆ. ಆ್ಯಸಿಡ್ ಹಾಕಿದ್ದು ಯಾಕಪ್ಪಾ ಎಂದು ಪೊಲೀಸರು ಕೇಳಿದ್ದಾರೆ.ಇದಕ್ಕೆ ಉತ್ತರಿಸಿದ ನಾಗ, ನಾನು ಆ್ಯಸಿಡ್ ಹಾಕುವುದಕ್ಕೆ ಯುವತಿಯೇ ಕಾರಣ ಅಂತ ಹೇಳಿ ಶಾಕ್ ನೀಡಿದ್ದಾನೆ.

ಯುವತಿ ಮೇಲೆ ಆಸಿಡ್ ಹಾಕಬಾರದೆಂದು ನಾಗೇಶ್ ಯೋಚಿಸಿದ್ದನಂತೆ. ದಾಳಿ ಮಾಡುವ ಹಿಂದಿನ ದಿನ ಆಸಿಡ್ ಹಾಕುವೆ ಎಂದು ಹೆದರಿಸಿದ್ದ. ಆದರೆ ಯುವತಿಯು ಈ ವಿಷಯವನ್ನು ತನ್ನ ತಂದೆ ಬಳಿ ಹೇಳಿದ್ದಳು. ಆಗ ನನ್ನ ಅಣ್ಣ ಮತ್ತು ಅಪ್ಪ ಸಾಕಷ್ಟು ಬೈದಿದ್ದರು, ಇದರಿಂದ ಆಕ್ರೋಶಗೊಂಡು ಆಸಿಡ್ ಹಾಕಿಯೇ ಬಿಡೋಣ ಎಂದು ನಿರ್ಧರಿಸಿದೆ. ನಿಜವಾಗಿ ಆಸಿಡ್ ಹಾಕುವ ಉದ್ದೇಶ ನನಗಿರಲಿಲ್ಲ ಅಂತಾ ನಾಗ ಹೇಳಿದ್ದಾನೆ.

ಆಟೋ ಹತ್ತಿ ಹೊಸಕೋಟೆವರೆಗೂ ಹೋದೆ. ಅಲ್ಲಿ ಒಂದು ಕೆರೆ ಕಂಡು ಆತ್ಮಹತ್ಯೆ ಮಾಡಿಕೊಳ್ಳೋಣ ಎಂದುಕೊಂಡಿದ್ದೆ. ಆದರೆ, ಬೇಡ ತಿರುಪತಿಗೆ ಹೋಗೋಣ ಎಂದು ಮಾಲೂರು ಬಸ್ ಹತ್ತಿದ್ದೆ. ತಿರುಪತಿ ಬೇಡ ಎಂದನಿಸಿ ಮಾರ್ಗ ಮಧ್ಯೆ ಇಳಿದು ಕೊನೆಗೆ ಕೃಷ್ಣಗಿರಿ ಬಸ್ ಹತ್ತಿ ತಿರುವಣ್ಣಾ ಮಲೈಗೆ ತೆರಳಿ ಅಲ್ಲಿನ ರಮಣಾಶ್ರಮದಲ್ಲಿ ಉಳಿದುಕೊಂಡೆ ಎಂದು ನಾಗ ಬಾಯಿ ಬಿಟ್ಟಿದ್ದಾನೆ.

RELATED ARTICLES

Related Articles

TRENDING ARTICLES