Monday, December 23, 2024

ಸಿನಿಮೀಯ ರೀತಿ ಯುವಕನ ಕಗ್ಗೊಲೆ

ಹಾಸನ : ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಹಿರೀಸಾವೆ ಸಮೀಪದ ಚೋಳಂಬಳ್ಳಿ ಸಮೀಪದ ಕಮರವಳ್ಳಿ ಗ್ರಾಮದ 25 ವರ್ಷದ ಯುವಕ ಬರ್ಬರವಾಗಿ ಹತ್ಯೆಯಾಗಿದ್ದಾನೆ.ಸುದೀಪ್ ಹಾಗೂ ಮಂಜುನಾಥ್ ಬೆಂಗಳೂರಿನಲ್ಲಿ ಅಡುಗೆ ಕೆಲಸ ಮುಗಿಸಿ ಹಿರೀಸಾವೆಯಲ್ಲಿ ರೈಲು ಇಳಿದು ಬೈಕಿನಲ್ಲಿ ಊರ ಕಡೆ ಹೊರಟಿದ್ದಾಗ ದುಷ್ಕರ್ಮಿಗಳು ಕಾರಿನಿಂದ ಡಿಕ್ಕಿ ಹೊಡೆದಿದ್ದಾರೆ.ಬಳಿಕ ಕೆಳಗೆ ಬಿದ್ದವರನ್ನು ಬೆದರಿಸಿ, ನೀವು ಜೀವಂತ ಉಳಿಯಬೇಕಾದ್ರೆ ಓಡಿ ಹೋಗಿ ಅಂತೇಳಿ ಓಡಿಸಿದ್ದಾರೆ. ಬಳಿಕ ಸುದೀಪ್‌ನನ್ನು ರಾಡ್‌ನಿಂದ ತಲೆಗೆ ಹೊಡೆದು, ಲಾಂಗು ಮಚ್ಚುಗಳಿಂದ ಬರ್ಬರವಾಗಿ ಕೊಚ್ಚಿ ಕೊಂದಿದ್ದಾರೆ.

ಕಳೆದ ವರ್ಷ ಹಿರೀಸಾವೆ ಸಮೀಪದ ಕಮರವಳ್ಳಿಯಲ್ಲಿ ಬೆಂಗಳೂರಿನ ಕುಖ್ಯಾತ ರೌಡಿಶೀಟರ್ ಲಿಂಗರಾಜನನ್ನು ದುಷ್ಕರ್ಮಿಗಳ ಗುಂಪೊಂದು ಬರ್ಬರವಾಗಿ ಹತ್ಯೆ ಮಾಡಿತ್ತು. ಈ ಕೇಸ್‌ನಲ್ಲಿ ಗುಂಪಿಗೆ ಮಾಹಿತಿ ನೀಡಿದ ಆರೋಪದಲ್ಲಿ ಸುದೀಪ್‌ನನ್ನೂ ಬಂಧಿಸಿ ಜೈಲಿಗಟ್ಟಲಾಗಿತ್ತು. ಆದರೆ ಈ ಪ್ರಕರಣ ಸಾಕ್ಷ್ಯಾಧಾರಗಳ ಕೊರತೆ ಹಿನ್ನೆಲೆಯಲ್ಲಿ ಮೇ 12ರಂದು ವಜಾಗೊಂಡಿತ್ತು. ಈತ ಮಾಹಿತಿ ನೀಡಿದ್ದರಿಂದಲೇ ಆಗ ಲಿಂಗರಾಜ್ ಹತ್ಯೆಯಾಗಿತ್ತೆಂಬ ದ್ವೇಷದಿಂದಲೇ ಸುದೀಪ್‌ನನ್ನು ಕಳೆದ ರಾತ್ರಿ ಬರ್ಬರವಾಗಿ ಕೊಚ್ಚಿ ಕೊಂದಿದ್ದಾರೆಂದು ಹೇಳಲಾಗ್ತಿದೆ.

ಇದ್ದ ಒಬ್ಬನೇ ಮಗ ಸುದೀಪ್‌ ಕೊಲೆಯಾಗಿದ್ದು ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಪೊಲೀಸರು ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ. ಒಟ್ಟಿನಲ್ಲಿ ಬೆಂಗಳೂರಲ್ಲಿ ಆಗಾಗ ಸದ್ದು ಮಾಡೋ ರೌಡಿಗಳ ಗ್ಯಾಂಗ್ ವಾರ್ ಈಗ ಚನ್ನರಾಯಪಟ್ಟಣದಲ್ಲೂ ಪದೇ‌ ಪದೇ ಪ್ರತಿಧ್ವನಿಸುತ್ತಿದೆ.

RELATED ARTICLES

Related Articles

TRENDING ARTICLES